ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಎಸೆಸೆಲ್ಸಿ ಅಂಕಪಟ್ಟಿ ತಿದ್ದುಪಡಿಗೆ ಆನ್‌ ಲೈನ್‌ ವ್ಯವಸ್ಥೆ; ಇನ್ನು ಅಲೆದಾಡಬೇಕಿಲ್ಲ!

Twitter
Facebook
LinkedIn
WhatsApp
ಎಸೆಸೆಲ್ಸಿ ಅಂಕಪಟ್ಟಿ ತಿದ್ದುಪಡಿಗೆ ಆನ್‌ ಲೈನ್‌ ವ್ಯವಸ್ಥೆ; ಇನ್ನು ಅಲೆದಾಡಬೇಕಿಲ್ಲ!

ಉಡುಪಿ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ/ ತಂದೆ/ತಾಯಿಯ ಹೆಸರು, ಜನ್ಮ ದಿನಾಂಕ ಹಾಗೂ ಇತರ ತಿದ್ದುಪಡಿಗಳಿಗೆ ಇನ್ನು ಮುಂದೆ ಆನ್‌ಲೈನ್‌ ಮೂಲಕ ಶಾಲಾ ಹಂತದಲ್ಲೇ ಅರ್ಜಿಗಳನ್ನು ಪಡೆಯಲಾಗುತ್ತದೆ. ಭೌತಿಕವಾಗಿ ಪ್ರಸ್ತಾವನೆ ಸ್ವೀಕರಿಸುವ ಪ್ರಕ್ರಿಯೆ ಇರದು.

ಇದುವರೆಗೆ ವಿದ್ಯಾರ್ಥಿಗಳು ಅಂಕಪಟ್ಟಿಯಲ್ಲಿನ ತಿದ್ದುಪಡಿಗಾಗಿ ಮುಖ್ಯ ಶಿಕ್ಷಕರ ಮೂಲಕ ಅಗತ್ಯ ದಾಖಲೆ ಮತ್ತು ನಿಗದಿತ ಶುಲ್ಕದೊಂದಿಗೆ ಪ್ರಸ್ತಾವನೆಯನ್ನು ಸಂಬಂಧಿಸಿದ ವಿಭಾ ಗೀಯ ಕಚೇರಿ ಅಥವಾ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ(ಈ ಹಿಂದೆ ಎಸೆಸೆಲ್ಸಿ ಬೋರ್ಡ್‌ ಇತ್ತು)ಗೆ ಸಲ್ಲಿಸಬೇಕಿತ್ತು. ವಿಭಾಗೀಯ ಕಚೇರಿಯಲ್ಲಿ ಪ್ರಸ್ತಾವನೆಯನ್ನು ಪರಿಶೀಲಿಸಿ ಅರ್ಹರ ಅಂಕಪಟ್ಟಿ ತಿದ್ದುಪಡಿ ಮಾಡಿ ಸಂಬಂಧಿಸಿದ ಶಾಲೆಗೆ ರವಾನಿಸಲಾಗುತ್ತಿತ್ತು. ಇದಕ್ಕಾಗಿ ವಿದ್ಯಾರ್ಥಿಗಳು ಅಲೆದಾಡುವ ಜತೆಗೆ ಹೆಚ್ಚು ಸಮಯ ತಗಲುತ್ತಿತ್ತು.ಈ ಹಿನ್ನೆಲೆಯಲ್ಲಿ ಆನ್‌ ಲೈನ್‌ ವ್ಯವಸ್ಥೆಗೆ ಮಂಡಳಿಯು ಮುಂದಾಗಿದೆ.

ಆನ್‌ಲೈನ್‌ ವ್ಯವಸ್ಥೆ
ಅಂಕಪಟ್ಟಿಯಲ್ಲಿನ ತಿದ್ದುಪಡಿಗಾಗಿ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಿದ ಶಾಲೆಯ ಮುಖ್ಯಶಿಕ್ಷಕರಿಗೆ ಪೂರಕ ದಾಖಲೆಗಳನ್ನು ಸಲ್ಲಿಸಬೇಕು. ಮುಖ್ಯಶಿಕ್ಷಕರು ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ ಮೂಲಕ ತಿದ್ದುಪಡಿಗೆ ಪ್ರಸ್ತಾವನೆ ಸಲ್ಲಿಸುವರು. ಶುಲ್ಕವನ್ನು ಆನ್‌ಲೈನ್‌/ ಚಲನ್‌ ಮೂಲಕ ಪಾವತಿಸಬಹುದು. ದಾಖಲೆ ಸಮೇತ ಪ್ರಸ್ತಾವನೆ ಅಪ್‌ಲೋಡ್‌ ಆದ ತತ್‌ಕ್ಷಣವೇ ವಿಭಾಗೀಯ ಕಚೇರಿ/ ಮಂಡಳಿಯ ಅಧಿಕಾರಿಗಳು ಪರಿಶೀಲಿಸಿ, ಶಾಲೆಯಿಂದ ಮೂಲ ಅಂಕಪಟ್ಟಿಯನ್ನು ಪಡೆದುಕೊಳ್ಳುವರು. ಇದನ್ನು ಆಧರಿಸಿ ತಿದ್ದುಪಡಿ ನಡೆಸಿ, ಪರಿಷ್ಕೃತ ಅಂಕಪಟ್ಟಿಯನ್ನು ಶಾಲೆಗೆ ಸ್ಪೀಡ್‌ ಪೋಸ್ಟ್‌ನಲ್ಲಿ ಕಳುಹಿಸಲಾಗುತ್ತದೆ.

ಮುಖ್ಯಶಿಕ್ಷಕರೇ ಹೊಣೆ
ಆನ್‌ಲೈನ್‌ ಮೂಲಕ ಪ್ರಸ್ತಾವನೆ ಸಲ್ಲಿಸುವಾಗ ಅಪ್‌ಲೋಡ್‌ ಮಾಡುವ ದಾಖಲೆಗಳನ್ನು ತಿದ್ದುಪಡಿ ಅಥವಾ ನಕಲಿಯಾಗಿದ್ದಲ್ಲಿ ಅಂತಹ ಶಾಲೆಯ ಮುಖ್ಯಶಿಕ್ಷಕರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಮಂಡಳಿ ಎಚ್ಚರಿಸಿದೆ.

Padubidri ಅದಾನಿ ಪವರ್‌ನಲ್ಲಿ ತಾಂತ್ರಿಕ ದೋಷ; ಭಾರೀ ಸದ್ದಿನೊಂದಿಗೆ ಘಟಕ ಸ್ತಬ್ಧ

ಪಡುಬಿದ್ರಿ: ಅದಾನಿ ಪವರ್‌ ಲಿಮಿಟೆಡ್‌ನಿಂದ ಶಾಂತಿಗ್ರಾಮಕ್ಕೆ ಹೋಗುವ 400 ಕೆವಿಎ ವಿತರಣ ಲೈನ್‌ ರಾತ್ರಿಯ ವೇಳೆ ಸುರಿದ ಮಳೆ, ಸಿಡಿಲಿನಿಂದಾಗಿ ಕೆಟ್ಟುಹೋದ ಪರಿಣಾಮ 1,400 ಮೆ.ವಾ.ನ ಎರಡೂ ವಿದ್ಯುತ್‌ ಉತ್ಪಾದನ ಘಟಕಗಳು “ಬ್ಲ್ಯಾಕ್‌ ಔಟ್‌’ ಆಗಿವೆ. ಈ ಸಂದರ್ಭದಲ್ಲಿ ಎಂದೂ ಕೇಳಿರದ ಭಾರೀ ಸದ್ದು ಪರಿಸರದ ಕೆಲವು ಕಿ.ಮೀ. ವ್ಯಾಪ್ತಿಯಲ್ಲಿ ಕೇಳಿಸಿದೆ.

220 ಕೆವಿಎ ಕೇಮಾರ್‌ಲೈನಲ್ಲಿ ಕೂಡ ಸದ್ಯ ವಿದ್ಯುತ್‌ ವಿತರಣೆ ನಿಂತು ಹೋಗಿದೆ. ತಾಂತ್ರಿಕ ದೋಷಗಳನ್ನು ಸರಿಪಡಿಸಿದ ಬಳಿಕಷ್ಟೇ ವಿದ್ಯುತ್‌ ಉತ್ಪಾದನೆ ಪುನರಾರಂಭವಾಗಬೇಕಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist