ಬಂಟ್ವಾಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮಹೇಶ್ ಕುಮಾರ್ ಹೊಳ್ಳ ಅಧಿಕಾರ ಸ್ವೀಕಾರ
ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಮಂಗಳೂರು ತಾಪಂ ಇಒ ಮಹೇಶ್ ಕುಮಾರ್ ಹೊಳ್ಳ ಅಧಿಕಾರ ಸ್ವೀಕರಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟಿಸಿದ ಶಾಸಕ ರಾಜೇಶ್ ನಾಯ್ಕ್
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟಿಸಿ ಮಾತನಾಡಿದರು.
ಇಲಾಖೆಗೆ ಸಂಬಂಧಿಸಿದ 150 ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ ಮಾಡಲಿದ್ದು, ಇನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡಲು ಬದ್ದ ಎಂದು ತಿಳಿಸಿದರು.
ಜೊತೆಗೆ ವಿದ್ಯಾರ್ಥಿಗಳಿಗೆ ಕ್ರೀಡಾಂಗಣದ ಬೇಡಿಕೆಯಿದ್ದು, ಜಾಗದ ವ್ಯವಸ್ಥೆ ನೋಡಿಕೊಂಡು ಇಲಾಖಾ ವ್ಯಾಪ್ತಿಯಲ್ಲಿ ಸರಕಾರದ ಅನುದಾನ ಬಳಸಿಕೊಂಡು ಕ್ರೀಡಾಂಗಣದ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಕಳೆದ ಅನೇಕ ವರ್ಷಗಳಿಂದ ಬಿಸಿರೋಡಿನ ಬಾಡಿಗೆ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದ ಹಾಸ್ಟೆಲ್ ಇನ್ನು ಮುಂದೆ ಸರಕಾರಿ ಪಾಲಿಟೆಕ್ನಿಕ್ ನ ಸಮೀಪದಲ್ಲಿದ್ದ ಸರಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಕಾರ್ಯಚರಿಸಲಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣ ಅಧಿಕಾರಿ ಬಿಂದಿಯಾ ತಿಳಿಸಿದರು.
ಈ ಸಂದರ್ಭ ಕೆ.ಪಿ.ಟಿ.ಪ್ರಾಂಶುಪಾಲ ಭಗವಾನ್ ಪ್ರಸಾದ, ಉಪನ್ಯಾಸಕರುಗಳಾದ ಮೋಹನರಾಜ ಜಿ.ಎಸ್, ಭುವನೇಶ್ವರಿ,ಸುಧಾಕರ ,ಮೋಹನ್ ಮತ್ತು ಹಮೀದ್ ಉಪಸ್ಥಿತರಿದ್ದರು.