ಮೂಡುಬಿದಿರೆ : ಕ್ರಿಕೆಟ್ ಬೆಟ್ಟಿಂಗ್, ಮೂವರ ಬಂಧನ

ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಅಲಂಗಾರು ಎಂಬಲ್ಲಿ ಅಕ್ಟೋಬರ್ 16 ರಂದು ಸಂಜೆ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಬೆಳುವಾಯಿ ಗ್ರಾಮದ ನವೀದ್ (30), ಪಡುಮಾರ್ನಾಡು ಗ್ರಾಮದ ಬಸವನಕಜೆಯ ಉಮೇಶ್ (40) ಮತ್ತು ಪದವು ದರ್ಕಾಸು ಮನೆ ನಿವಾಸಿ ಪ್ರಸಾದ್ ದೇವಾಡಿಗ (35) ಎನ್ನುವವರಾಗಿದ್ದಾರೆ.
ನವೀದ್ ಎಂಬಾತ ಪ್ರಸಾದ್ ಮತ್ತು ಉಮೇಶ್ ಎಂಬುವರಿಂದ ಹಣವನ್ನು ಪಡೆದು ಮೊಬೈಲ್ ವೆಬ್ ಸೈಟ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಲಾಗಿದೆ.
ಶ್ರೀಲಂಕಾ ಮತ್ತು ಆಸ್ಪ್ರೇಲಿಯಾ ಪಂದ್ಯಕ್ಕೆ ಬೆಟ್ಟಿಂಗ್ ಮಾಡಲು ಹಣವನ್ನು ಗೂಗಲ್ ಪೇ ಅಥವಾ ಪೋನ್ ಪೇ ಮುಖೇನ ಪಡೆಯುತ್ತಿದ್ದ ಬಗ್ಗೆ ತಿಳಿದುಬಂದಿದೆ. ತಾವು ಬೆಟ್ಟಿಂಗ್ ನಲ್ಲಿ ತೊಡಗಿಸಿಕೊಳ್ಳುತ್ತಿದ್ದ Comfort Zone 247 ಎಂಬ ವೆಬ್ ಸೈಟ ನ್ನು ಮುಂಬೈನಲ್ಲಿರುವ ವ್ಯಕ್ತಿ ನಿಯಂತ್ರಣ ಮಾಡುತ್ತಿದ್ದಾನೆಂದು ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್,ರವರ ಮಾರ್ಗದರ್ಶನದಂತೆ, DCP ಸಿದ್ದಾರ್ಥ ಗೊಯಲ್ , DCP (ಅ & ಸಂ)ದಿನೇಶ್ ಕುಮಾರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ನಾಯ್ಕ್ ರವರ ನಿರ್ದೇಶನದಲ್ಲಿ ಮೂಡುಬಿದಿರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಸಿಬಂದಿಗಳಾದ ಚಂದ್ರಹಾಸ್ ರೈ, ಮೊಹಮ್ಮದ್ ಹುಸೇನ್, ಅಖೀಲ್ ಅಹ್ಮದ್ ಹಾಗೂ ತಂಡ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ವಾಹನ ಕಳವು: 8 ಮಂದಿ ಬಂಧನ
ವಿಟ್ಲ: ಕುಡ್ತಮುಗೇರು ಎಂ.ಎಚ್. ಶಾಮಿಯಾನ ಮಾಲಕಕೊಬ್ಬರಿಗೆ ಸೇರಿದ ಪಿಕ್‌ಅಪ್ ವಾಹನ ಕಳವು ಪ್ರಕರಣದ 8 ಮಂದಿ ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ರಂಷನ್ ಯಾನೆ ಸಾನು, ಜುನ್ಸಿಫ್, ನೌಫಲ್, ಹಂಸಕ್, ತಬ್ರಿಜ, ಮೊಹಮ್ಮದ್ ಉಸೈನ್, ಹ್ಯಾರಿಸ…, ಮೊಹಮ್ಮದ್ ಅಯೂಬ ಖಾನ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸೆ. 23ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ತಮುಗೇರು ಎಂಬಲ್ಲಿ ಶಾಮಿಯಾನ ಸಾಮಗ್ರಿಯ ಜತೆಗೆ ನಿಲ್ಲಿಸಿದ್ದ ವಾಹನವನ್ನು ಕಳವುಗಯ್ಯಲಾಗಿತ್ತು. ಗೋಣಿಕೊಪ್ಪದ ಗುಜರಿ ಅಂಗಡಿಯಿಂದ ಶಾಮಿಯಾನದ ಪಿಕಪ್‌ನಲ್ಲಿದ್ದ ಟಿನ್ ಶೀಟ್ ಹಾಗೂ ಕಬ್ಬಿಣದ ಪೈಪ್‌ಗ್ಳನ್ನು ಹಿಂದಿರುಗಿಸಿದ್ದಾರೆ. 2015 ಮಾಡೆಲ್‌ನ 8 ಲಕ್ಷ ಮೌಲ್ಯದ ಪಿಕಪ್ ವಾಹನ ಪತ್ತೆ ಹಚ್ಚಲಾಗಿಲ್ಲ