ಇಸ್ರೇಲ್ ಮೇಲೆ ಹಮಾಸ್ ಉಗ್ರರ 5000 ಕ್ಕೂ ಹೆಚ್ಚು ರಾಕೆಟ್ ಗಳಿಂದ ದಾಳಿ ;ಯುದ್ಧಕ್ಕೆ ಸಿದ್ಧವಾದ ಇಸ್ರೇಲ್!
ಗಾಜಾ ಸ್ಟ್ರಿಪ್ನಿಂದ ಶನಿವಾರ ಇಸ್ರೇಲ್ ಮೇಲೆ ಹಮಾಸ್ ಉಗ್ರರ ಗುಂಪು ಸಾವಿರಾರು ರಾಕೆಟ್ಗಳ ಸುರಿಮಳೆ ಸುರಿಸಿ, ದಿಢೀರ್ ಯುದ್ಧ ಸಾರಿದೆ. ಇದರಿಂದ ದಿಢೀರನೇ ಇಸ್ರೇಲ್ ಮೇಲೆ ಸ್ಟೇಟ್ ಆಫ್ ವಾರ್ ಆರಂಭವಾಗಿದ್ದು, ಕನಿಷ್ಠ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿದೆ ಎಂದು ಎಎಫ್ಪಿ ವರದಿ ಮಾಡಿದೆ.
ಇಸ್ರೇಲಿ ಸೈನ್ಯವು ದೇಶದ ದಕ್ಷಿಣ ಮತ್ತು ಮಧ್ಯ ಪ್ರದೇಶಗಳಲ್ಲಿ ಸೈರನ್ಗಳ ಬಗ್ಗೆ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರನ್ನು ಬಾಂಬ್ ಶೆಲ್ಟರ್ಗಳ ಬಳಿ ಇರುವಂತೆ ಮನವಿ ಮಾಡಿಕೊಂಡಿದೆ. ಪ್ಯಾಸ್ತೀನ್ ಸಶಸ್ತ್ರ ವಿಭಾಗದ ಹಮಾಸ್ ಗುಂಪು ಈ ದಾಳಿಯ ಹಿಂದೆ ಇರೋದಾಗಿ ಹೇಳಿಕೊಂಡಿದ್ದು, ತನ್ನ ಉಗ್ರಗಾಮಿಗಳು 5,000 ಕ್ಕೂ ಹೆಚ್ಚು ರಾಕೆಟ್ಗಳನ್ನು ಉಡಾಯಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
“ನಾವು ಇಸ್ರೇಲ್ ಆಕ್ರಮಣದ ಎಲ್ಲ ಅಪರಾಧಗಳನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ, ಹೊಣೆಗಾರಿಕೆಯಿಲ್ಲದೆ ನಮ್ಮ ಮೇಲೆ ಆಕ್ರಮಣ ಮಾಡುವ ಅವರ ಸಮಯ ಮುಗಿದಿದೆ” ಎಂದೂ ಗುಂಪು ಹೇಳಿದೆ. ಈ ಯುದ್ಧಕ್ಕೆ Operation Al-Aqsa Flood ಎಂದು ಹೆಸರಿಡಲಾಗಿದೆ. “ನಾವು ಆಪರೇಷನ್ ಅಲ್-ಅಕ್ಸಾ ಪ್ರವಾಹವನ್ನು ಘೋಷಿಸಿದ್ದು, 20 ನಿಮಿಷಗಳ ಮೊದಲ ಸ್ಟ್ರೈಕ್ನಲ್ಲಿ 5,000 ಕ್ಕೂ ಹೆಚ್ಚು ರಾಕೆಟ್ಗಳನ್ನು ಹಾರಿಸಿದ್ದೇವೆ.” ಎಂದು ಹೇಳಿದ್ದಾರೆ.

ಇಸ್ರೇಲ್ ಅನ್ನು ವಿರೋಧಿಸುವ ಇಸ್ಲಾಮಿಕ್ ಉಗ್ರಗಾಮಿ ಗುಂಪು ಹಮಾಸ್ 2007 ರಲ್ಲಿ ಭೂಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಂಡ ನಂತರ ಇಸ್ರೇಲ್ ಗಾಜಾದ ಮೇಲೆ ದಿಗ್ಬಂಧನ ಹಾಕಿದೆ.. ಅಂದಿನಿಂದ ಕಡು ಶತ್ರುಗಳು ನಾಲ್ಕು ಯುದ್ಧ ನಡೆಸಿವೆ.
ಇಸ್ರೇಲ್ ಮೇಲೆ ಹಮಾಸ್ ಭಾರಿ ಹಠಾತ್ ದಾಳಿ ನಡೆಸಿದ ಗಂಟೆಗಳ ನಂತರ, ಪ್ಯಾಲೆಸ್ತೀನಿಯನ್ ಇಸ್ಲಾಮಿಕ್ ಜಿಹಾದ್ ಶನಿವಾರ ತನ್ನ ಹೋರಾಟಗಾರರು ದಾಳಿಯಲ್ಲಿ ಹಮಾಸ್ ಜೊತೆ ಸೇರಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇಸ್ಲಾಮಿಸ್ಟ್ ಚಳುವಳಿ ಹಮಾಸ್ ಶನಿವಾರದಂದು ಇಸ್ರೇಲ್ನ ಮೇಲೆ ಹಠಾತ್ ದಾಳಿಯನ್ನು ಪ್ರಾರಂಭಿಸಿದ್ದು ಇದು ಗಾಜಾ ಸ್ಟ್ರಿಪ್ನಿಂದ ಭಾರಿ ರಾಕೆಟ್ಗಳ ಸುರಿಮಳೆಯೊಂದಿಗೆ ಗಡಿಯನ್ನು ದಾಟಿದ ಬಂದೂಕುಧಾರಿಗಳನ್ನು ಒಟ್ಟುಗೂಡಿಸಿದೆ.
ಹಮಾಸ್ ಉಗ್ರಗಾಮಿ ಗುಂಪು ಇಸ್ರೇಲ್ ವಿರುದ್ಧ ಕಾರ್ಯಾಚರಣೆ ಘೋಷಿಸಿದ ನಂತರ ಜೆರುಸಲೇಮ್ನಲ್ಲಿ ವೈಮಾನಿಕ ದಾಳಿಯ ಸೈರನ್ಗಳು ಮೊಳಗುತ್ತಿದ್ದಂತೆ ಗಾಜಾ ಸ್ಟ್ರಿಪ್ ಗುರಿಗಳ ಮೇಲೆ ಪ್ರತಿದಾಳಿ ನಡೆಸುತ್ತಿದ್ದೇವೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಇನ್ನೊಂದೆಡೆ, ಹಮಾಸ್ ಭಯೋತ್ಪಾದಕ ಗುಂಪು ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿ “ಗಂಭೀರ ತಪ್ಪು” ಮಾಡಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಶನಿವಾರ ಹೇಳಿದ್ದಾರೆ. ಹಾಗೂ ನಮ್ಮ ಸೈನಿಕರು ಹೋರಾಡುತ್ತಿದ್ದಾರೆ ಎಂದೂ ಅವರು ಹೇಳಿದರು.