ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಔಷಧಿ ಖರೀದಿಗೆಂದು ಮೆಡಿಕಲ್ ಗೆ ಬರುವಾಗಲೇ ಹೃದಯಘಾತ!

Twitter
Facebook
LinkedIn
WhatsApp
ಔಷಧಿ ಖರೀದಿಗೆಂದು ಮೆಡಿಕಲ್ ಗೆ ಬರುವಾಗಲೇ ಹೃದಯಘಾತ!

ಮೈಸೂರು: ಈ ಹೃದಯ ಎನ್ನುವುದು ಯಾವ ಕ್ಷಣದಲ್ಲಿ ಆಘಾತಕ್ಕೆ (Heart Attack) ಒಳಗಾಗುತ್ತದೆ ಎಂದು ಅಂದಾಜಿಸಲೂ ಸಾಧ್ಯವಿಲ್ಲ. ನಿಂತ ನಿಲುವಿನಲ್ಲೇ ಬದುಕನ್ನು ಸ್ತಬ್ಧಗೊಳಿಸುವ ನಿರ್ನಾಮ ಶಕ್ತಿಯನ್ನು ಅದು ಹೊಂದಿದೆ. ಕುಳಿತಲ್ಲೇ ಕುಸಿಯುವುದು, ನಿಂತಲ್ಲೇ ಉರುಳಿಬೀಳುವುದು, ಮಲಗಿದಲ್ಲೇ ಮರಣಿಸುವುದು, ನೃತ್ಯ ಮಾಡುತ್ತಲೇ ಸ್ತಬ್ಧವಾಗುವುದು.. ಹೀಗೆ ಸಾವಿನ ಹತ್ತಾರು ಭಯಾನಕ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಇದೀಗ ಮೈಸೂರಿನಲ್ಲಿ ಮೆಡಿಕಲ್‌ ಸ್ಟೋರ್‌ಗೆ (Medical Stores) ಔಷಧ ತೆಗೆದುಕೊಳ್ಳಲೆಂದು ಬಂದ ವ್ಯಕ್ತಿ ಅಲ್ಲೇ ಕುಸಿದುಬಿದ್ದು ಪ್ರಾಣ (Man dies in front of Medical stores) ಕಳೆದುಕೊಂಡ ದಾರುಣ ಘಟನೆಯೊಂದು ನಡೆದಿದೆ. ಅದರ ದೃಶ್ಯಗಳು ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಮೈಸೂರಿನ ಉದಯಗಿರಿ ಮೆಡಿಕಲ್ ಸ್ಟೋರ್‌ನಲ್ಲಿ ಘಟನೆ ನಡೆದಿದೆ. ಜಗದೀಶ್ (38) ಎಂಬವರೇ ಹೃದಯಾಘಾತದಿಂದ ಮೃತಪಟ್ಟವರು. ಅವರು ಔಷಧ ಕೊಳ್ಳಲೆಂದು ಮೆಡಿಕಲ್‌ ಸ್ಟೋರ್‌ಗೆ ಬಂದವರು ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಕ್ಯಾತಮಾರನಹಳ್ಳಿಯಲ್ಲಿ ಚಿಕನ್ ಅಂಗಡಿ ನಡೆಸುತ್ತಿದ್ದ ಜಗದೀಶ್ ಅವರ ಸಾವು ಬದುಕಿನ ಕ್ಷಣಿಕತೆಯನ್ನು ಮತ್ತೆ ಮತ್ತೆ ನೆನಪಿಸುತ್ತಿದೆ.

ಹೇಗೆ ಸಂಭವಿಸಿತು ಸಾವು? ಏನಿದೆ ವಿಡಿಯೊದಲ್ಲಿ?

ಕ್ಯಾತಮಾರನಹಳ್ಳಿಯಲ್ಲಿ ಚಿಕನ್‌ ಅಂಗಡಿ ಇಟ್ಟುಕೊಂಡಿರುವ ಜಗದೀಶ್‌ ಅವರಿಗೆ ಬಹುಶಃ ಬೆಳಗ್ಗಿನಿಂದಲೇ ಎದೆ ನೋವು ಕಾಡಿರಬೇಕು. ಅವರು ಉದಯಗಿರಿ ಮೆಡಿಕಲ್‌ ಸ್ಟೋರ್‌ಗೆ ಬರುತ್ತಲೇ ಎದೆಗೆ ಕೈ ಹಿಡಿದುಕೊಂಡೇ ಬರುತ್ತಾರೆ. ಮೆಟ್ಟಿಲು ಹತ್ತಿ ಮೇಲೆ ಬರುವಾಗಲೂ ಅವರ ಮುಖದಲ್ಲಿ ನೋವು ಕಾಣಿಸುತ್ತದೆ.

ಅವರು ಮೆಡಿಕಲ್‌ಗೆ ಬಂದ ಕೂಡಲೇ ಕೌಂಟರ್‌ನ ಟೇಬಲ್‌ಗೆ ಆತುಕೊಂಡೇ ಆಧರಿಸಿ ನಿಲ್ಲುತ್ತಾರೆ. ಆಗ ಅಂಗಡಿಯ ಮಾಲೀಕರು ಅತ್ತ ಇನ್ನೊಬ್ಬ ಯುವತಿಗೆ ಔಷಧ ಕೊಡುತ್ತಿರುತ್ತಾರೆ. ಈ ಕಡೆ ಜಗದೀಶ್‌ ಬಂದಿರುವುದನ್ನು ಗಮನಿಸಿ ಅವರು ಇತ್ತ ಬರುತ್ತಾರೆ.

ಅಷ್ಟು ಹೊತ್ತಿಗೆ ಜಗದೀಶ್‌ ಅವರು ಅಲ್ಲೇ ಓಲಾಡುತ್ತಾ ಕುಸಿದು ಬೀಳುತ್ತಾರೆ. ಆಗ ಅಂಗಡಿ ಮಾಲೀಕರು ಹೊರಗೆ ಓಡಿ ಬಂದು ಅವರನ್ನು ಎತ್ತಿ ಕೂರಿಸುವ ಯತ್ನ ಮಾಡುತ್ತಾರೆ. ಆದರೆ, ಅಷ್ಟು ಹೊತ್ತಿಗೆ ಬಹುತೇಕ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ.

ಹೃದಯಾಘಾತದಿಂದ ಸಂಭವಿಸಿದ ಈ ಸಾವಿನ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಘಟನೆಗೆ ಮೈಸೂರಿನ ಈ ಭಾಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹೀಗೆ ಇದ್ದಕ್ಕಿದ್ದಂತೆಯೇ ಕಾಣಿಸಿಕೊಳ್ಳುವ ನೋವು, ಒಮ್ಮಿಂದೊಮ್ಮೆಗೇ ವಕ್ಕರಿಸುವ ಸಾವನ್ನು ಹೇಗೆ ಎದುರಿಸುವುದು ಎಂಬ ಬಗ್ಗೆ ಜನರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಜಗದೀಶ್‌ ಅವರು ಕುಟುಂಬವನ್ನು ಹೊಂದಿದ್ದು, ಅವರೆಲ್ಲ ಈ ಘಟನೆಯಿಂದ ದಿಗ್ಭ್ರಮೆಗೊಂಡಿದ್ದಾರೆ.

ನಲ್ವತ್ತು ವರ್ಷದ ನಂತರ ಪ್ರತಿಯೊಬ್ಬರು ಕೂಡಾ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕು, ಆಗಾಗ ಆರೋಗ್ಯ ತಪಾಸಣೆ ನಡೆಸಬೇಕು. ಅದರಲ್ಲೂ ಹೃದಯದ ತಪಾಸಣೆಯನ್ನು ವರ್ಷಕ್ಕೊಮ್ಮೆಯಾದರೂ ಮಾಡಿಸಿಕೊಳ್ಳಬೇಕು ಎಂಬ ಸಲಹೆಯನ್ನು ವೈದ್ಯರು ನೀಡುತ್ತಾರೆ. ಇದನ್ನು ಪಾಲಿಸಿದರೆ ಸ್ವಲ್ಪ ಮಟ್ಟಿಗೆ ಇಂಥ ಸಡನ್‌ ಅಪಾಯಗಳಿಂದ ಪಾರಾಗಬಹುದು ಎನ್ನುವುದು ಅವರ ಸಲಹೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist