ಶನಿವಾರ, ಮೇ 18, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪಿಎಂ ಉಜ್ವಲ ಯೋಜನೆಯ ಎಲ್​ಪಿಜಿ ಸಿಲಿಂಡರ್ ದರ 300 ರೂ.ಗೆ ಏರಿಕೆ..!

Twitter
Facebook
LinkedIn
WhatsApp
ಪಿಎಂ ಉಜ್ವಲ ಯೋಜನೆಯ ಎಲ್​ಪಿಜಿ ಸಿಲಿಂಡರ್ ದರ 300 ರೂ.ಗೆ ಏರಿಕೆ..!

ನವದೆಹಲಿ, ಅಕ್ಟೋಬರ್ 4: ಬೆಲೆ ಏರಿಕೆಯ ಬಿಸಿಯಲ್ಲಿರುವ ಬಡ ಮತ್ತು ಮಧ್ಯಮವರ್ಗದವರಿಗೆ ತುಸು ನಿರಾಳ ತರುವ ಸುದ್ದಿ ಇದು. ಪಿಎಂ ಉಜ್ವಲ ಯೋಜನೆಯ (PM Ujjwala Yojana) ಫಲಾನುಭವಿಗಳಿಗೆ ಎಲ್​ಪಿಜಿ ಸಿಲಿಂಡರ್ ದರದಲ್ಲಿ ಸಿಗುವ ಸಬ್ಸಿಡಿ (LPG price subsidy) ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. 200 ರೂನಷ್ಟು ನೀಡಲಾಗುತ್ತಿದ್ದ ಸಬ್ಸಿಡಿಯನ್ನು 300 ರುಪಾಯಿಗೆ ಏರಿಸಲಾಗಿದೆ. ಕೇಂದ್ರ ಸಂಪುಟ ಇಂದು ತೆಗೆದುಕೊಂಡ ನಿರ್ಧಾರಗಳಲ್ಲಿ ಇದೂ ಒಂದಾಗಿದೆ. ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್​ಪಿಜಿ ಸಬ್ಸಿಡಿ ಏರಿಸಿರುವ ವಿಚಾರವನ್ನು ತಿಳಿಸಿದ್ದಾರೆ.

ಎಷ್ಟಿದೆ ಎಲ್​ಪಿಜಿ ಸಿಲಿಂಡರ್ ಬೆಲೆ?

ಇತ್ತೀಚೆಗಷ್ಟೇ 14.2 ಕಿಲೋ ಎಲ್​ಪಿಜಿ ಸಿಲಿಂಡರ್ ದರವನ್ನು ಕೇಂದ್ರ ಸರ್ಕಾರ 200 ರೂನಷ್ಟು ಇಳಿಕೆ ಮಾಡಿತ್ತು. ಎಲ್ಲಾ ಎಲ್​ಪಿಜಿ ಬಳಕೆದಾರರಿಗೂ ಇದು ಅನ್ವಯ ಆಗುತ್ತದೆ. ಬೆಂಗಳೂರಿನಲ್ಲಿ 1,105.50 ರೂ ಇದ್ದ 14.2 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆ 905.59 ರುಪಾಯಿಗೆ ಇಳಿದಿದೆ. ಇದು ಸಾಮಾನ್ಯ ಬಳಕೆದಾರರು ನೀಡುವ ದರವಾಗಿದೆ.

ಆದರೆ, ಪಿಎಂ ಉಜ್ವಲ ಯೋಜನೆ ಹೊಂದಿರುವವರಿಗೆ ಸರ್ಕಾರ ಈ ಹಿಂದೆಯೇ 200 ರೂನಷ್ಟು ಸಬ್ಸಿಡಿ ಕೊಟ್ಟಿದೆ. ಈಗ ಮತ್ತಷ್ಟು 100 ರೂ ಸಬ್ಸಿಡಿ ಒದಗಿಸುತ್ತದೆ. ಅಲ್ಲಿಗೆ ಈ ಯೋಜನೆಯ ಫಲಾನುಭವಿಗಳಿಗೆ ಒಟ್ಟು 300 ರೂ ಸಬ್ಸಿಡಿ ಸಿಗುತ್ತದೆ. ಇದರೊಂದಿಗೆ 14.2 ಕಿಲೋ ಎಲ್​ಪಿಜಿ ಸಿಲಿಂಡರ್ ಅನ್ನು ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳು ಬೆಂಗಳೂರಿನಲ್ಲಿ 605.50 ರೂಪಾಯಿಗೆ ಪಡೆಯಬಹುದು.

ಏನಿದು ಪಿಎಂ ಉಜ್ವಲ ಯೋಜನೆ?

ಪ್ರತಿಯೊಂದು ಮನೆಗೂ ಎಲ್​ಪಿಜಿ ಸಂಪರ್ಕ ಕಲ್ಪಿಸಬೇಕೆಂಬ ಸರ್ಕಾರದ ಮಹದ್ಗುರಿ ಹಿನ್ನೆಲೆಯಲ್ಲಿ ಪಿಎಂ ಉಜ್ವಲ ಯೋಜನೆಯನ್ನು ರೂಪಿಸಲಾಗಿದೆ. 2016ರಲ್ಲಿ ಬಿಪಿಎಲ್ ಕಾರ್ಡ್​ದಾರರಿಗೆ ಉಚಿತ ಎಲ್​ಪಿಜಿ ಸಂಪರ್ಕ ಕಲ್ಪಿಸುವುದರೊಂದಿಗೆ ಯೋಜನೆ ಚಾಲನೆಗೊಂಡಿತು. 2021ರಲ್ಲಿ ಎರಡನೇ ಹಂತದ ಉಜ್ವಲ ಸ್ಕೀಮ್ ಅನ್ನು ಚಾಲನೆಗೆ ತರಲಾಯಿತು. ಕೆಲಸಕ್ಕೆಂದು ಬೇರೆ ರಾಜ್ಯಗಳಿಗೆ ವಲಸೆ ಹೋದ ಕುಟುಂಬದವರಿಗೂ ಕೂಡ ಯೋಜನೆ ಸಿಗುವಂತೆ ಮಾಡಲಾಗಿದೆ.

ಉಚಿತವಾಗಿ ಎಲ್​ಪಿಜಿ ಸಂಪರ್ಕದ ಜೊತೆಗೆ ಮೊದಲ ಸಿಲಿಂಡರ್ ಕೂಡ ಉಚಿತವಾಗಿ ಸಿಗುತ್ತದೆ. ಈಗ ಪ್ರತೀ ಸಿಲಿಂಡರ್​ಗೆ 300 ರೂನಷ್ಟು ಸಬ್ಸಿಡಿ ಸಿಗುತ್ತದೆ.

ಉದ್ಯೋಗಕ್ಕಾಗಿ ಭೂ ಹಗರಣ: ಲಾಲು ಪ್ರಸಾದ್​​ ಯಾದವ್, ಪತ್ನಿ, ಮಗನಿಗೆ ಜಾಮೀನು

ದೆಹಲಿ, ಅ.4: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್​​ ಯಾದವ್ ಹಾಗೂ ಅವರ ಪತ್ನಿ ರಾಬ್ರಿ ದೇವಿ ಮತ್ತು ಅವರ ಪುತ್ರ, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಯುಪಿಎ ಒಕ್ಕೂಟ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್​​ ಯಾದವ್ ಅವರು ರೈಲ್ವೆ ಉದ್ಯೋಗಕ್ಕಾಗಿ ಭೂ ಹಗರಣ ಮಾಡಿದರು ಎಂದು ಜುಲೈನಲ್ಲಿ ಜಾರಿ ನಿರ್ದೇಶನಾಲಯವು ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿತ್ತು. ಇದರ ಜತೆಗೆ ಅವರ ಆಸ್ತಿಯನ್ನು ಕೂಡ ಜಪ್ತಿ ಮಾಡಿತ್ತು. ಈ ಜಪ್ತಿಯಲ್ಲಿ ಅವರ ಮಗ, ಪ್ರಸ್ತುತ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರಿಗೂ ನೋಟಿಸ್​​ ನೀಡಿ ಜಪ್ತಿ ಮಾಡಿತ್ತು. ನಂತರ ಬಿಹಾರ ಮಾಜಿ ಮುಖ್ಯಮಂತ್ರಿಯಾಗಿದ್ದ ಲಾಲು ಪ್ರಸಾದ್​​ ಯಾದವ್ ಅವರ ಪತ್ನಿ ರಾಬ್ರಿ ದೇವಿ ಅವರಿಗೂ ನೋಟಿಸ್​​​ ನೀಡಿ, ಪ್ರಕರಣ ದಾಖಲಿಸಿತ್ತು.

2004ರಿಂದ 2009 ಅವಧಿಯವರೆಗೆ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್​​ ಯಾದವ್ ಅವರು ರೈಲ್ವೆಯ ವಿವಿಧ ವಲಯಗಳಲ್ಲಿನ ಗ್ರೂಪ್ ಡಿ ಹುದ್ದೆಗಳ ಬದಲಿಗೆ ತಮ್ಮ ಕುಟುಂಬ ಸದಸ್ಯರ ಹೆಸರಿಗೆ ಭೂ ಆಸ್ತಿಯನ್ನು ವರ್ಗಾಯಿಸಲು ಹಣ ಪಡೆದಿದ್ದಾರೆ ಎಂದು ಸಿಬಿಐ ಹೇಳಿದೆ. ರೈಲ್ವೆ ಅಧಿಕಾರಿಗಳು ತರಾತುರಿಯಾಗಿ ಈ ಅವರ ಆದೇಶವನ್ನು ಪಾಲಿಸಿ ಲಾಲು ಪ್ರಸಾದ್​​ ಯಾದವ್ ಕುಟುಂಬಕ್ಕೆ ರೈಲ್ವೆ ಭೂಮಿಯನ್ನು ವರ್ಗಾಯಿಸಲಾಗಿದೆ ಎಂದು ಸಿಬಿಐ ವರದಿಯಲ್ಲಿ ಹೇಳಿದೆ.

ಪಾಟ್ನಾದ ಹಲವಾರು ನಿವಾಸಿಗಳಿಗೆ ಮತ್ತು ಕಂಪನಿಗಳನ್ನು ತಮ್ಮ ನಿಯಂತ್ರಣದಲ್ಲಿಡಲು ರಾಜಧಾನಿಯಲ್ಲಿರುವ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ರಾಬ್ರಿ ದೇವಿ ಮತ್ತು ಪುತ್ರಿಯರಾದ ಮಿಸಾ ಭಾರತಿ ಮತ್ತು ಹೇಮಾ ಯಾದವ್ ಅವರ ಹೆಸರಿನಲ್ಲಿ ಪತ್ರಗಳ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಂತಹ ನೇಮಕಾತಿಗಳಿಗೆ ಯಾವುದೇ ಜಾಹೀರಾತು ಅಥವಾ ಯಾವುದೇ ಸಾರ್ವಜನಿಕ ಸೂಚನೆಯನ್ನು ನೀಡಲಾಗಿಲ್ಲ ಎಂದು ಸಿಬಿಐ ಹೇಳಿಕೊಂಡಿದೆ. ಆದರೂ ಪಾಟ್ನಾದ ನಿವಾಸಿಗಳ ನೇಮಕಗೊಂಡವರನ್ನು ಮುಂಬೈ, ಜಬಲ್‌ಪುರ, ಕೋಲ್ಕತ್ತಾ, ಜೈಪುರ ಮತ್ತು ಹಾಜಿಪುರದ ವಿವಿಧ ವಲಯ ರೈಲ್ವೆಗಳಲ್ಲಿ ಬದಲಿಯಾಗಿ ನೇಮಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ