ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Nainad :ಸರ್ವಧರ್ಮ ಮುಖಂಡರಿಂದ ಡ್ರಗ್ಸ್ ವಿರೋಧ ಜಾಗೃತಿ ಅಭಿಯಾನ

Twitter
Facebook
LinkedIn
WhatsApp
Nainad : Anti-Drug Awareness Campaign by All Religion Leaders

ಪುಂಜಾಲಕಟ್ಟೆ (Nainad) : ದಿನಾಂಕ 1-10-2023 ಆದಿತ್ಯವಾರ ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚ್ (St.Francis Assisi church), ನೈನಾಡು (Nainad) ಇದರ ಮುಂದಾಳತ್ವದಲ್ಲಿ ಡ್ರಗ್ಸ್ ವಿರೋಧ ಜಾಗೃತಿ ಅಭಿಯಾನ ಯಶಸ್ವಿಯಾಗಿ ಜರುಗಿತು. ಸುಮಾರು 350 ರಿಂದ 400 ರಷ್ಟು ಸಾರ್ವಜನಿಕರು ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ಮಳೆಯನ್ನು ಲೆಕ್ಕಿಸದೆ ಕೊಡೆ ಹಿಡಿದುಕೊಂಡು ಸಾರ್ವಜನಿಕರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದು ಡ್ರಗ್ಸ್ ವಿರೋಧ ಜಾಗೃತಿ ಅಭಿಯಾನದ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಯ್ತು.

ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚ್ ವಠಾರದಿಂದ ಆರಂಭವಾದ ಅಭಿಯಾನ ಜಾತವು ಶಶಾಂಕ್ ಕ್ಯಾಶು ಫ್ಯಾಕ್ಟರಿವರೆಗೆ ಸಾಗಿ ನೈನಾಡು ಪರಿಸರದಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತ್ತು.

ಡ್ರಗ್ಸ್ ವಿರೋಧ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷರಾಗಿ ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿನ ಧರ್ಮ ಗುರುಗಳಾದ ವಂದಾನೀಯ ಫಾ! ಅನಿಲ್ ಅವಿಲ್ಡ್ ಲೋಬೋ ರವರು ಪ್ರಾಸ್ತಾವಿಕ ಭಾಷಣ ಮಾಡಿ precaution is better than cure (ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಉತ್ತಮ) ಎಂದು ಹೇಳಿದರು. ಡ್ರಗ್ಸ್ ನಿಂದ ವ್ಯಕ್ತಿಗೆ, ಸಮಾಜಕ್ಕೆ ಹಾಗೂ ಕುಟುಂಬಕ್ಕೆ ಆಗುವ ಸಮಸ್ಯೆಗಳಿಂದ ದೂರ ಇರುವುದು ಒಳಿತು ಎಂಬ ಮುನ್ನೆಚ್ಚರಿಕೆ ಮಾತುಗಳನ್ನಾಡಿ ಸಂದೇಶವನ್ನು ನೀಡಿದರು.

Nainad : Anti-Drug Awareness Campaign by All Religion Leaders

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮುಹಮ್ಮದ್ ಫಾಳಿಲಿ ಖತೀಬರು ಜುಮಾ ಮಸೀದಿ, ಉಳ್ತೂರು ಇವರು ಕಾರ್ಯಕ್ರಮದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿ ಯುವಕ ಯುವತಿಯರು ಡ್ರಗ್ಸ್ ಜಾಲದಿಂದ ದೂರ ಇರುವಂತೆ ಕರೆ ನೀಡಿದರು.

ಡ್ರಗ್ಸ್ ವಿರೋಧ ಜಾಗೃತಿ ಅಭಿಯಾನದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಮುನಪ್ಪ ಕೊರವರ ಮಾತಾಡಿ ಡ್ರಗ್ಸ್ ನಿಂದ ಆಗುವ ಕೆಟ್ಟ ಪರಿಣಾಮಗಳು, ಅದರಿಂದ ದೂರ ಇರಬೇಕಾದ ಅನಿವಾರ್ಯತೆ ಹಾಗೂ ಡ್ರಗ್ಸ್ ಮುಕ್ತ ಸಮಾಜವನ್ನು ಕಟ್ಟುವಲ್ಲಿ ನಮ್ಮೆಲ್ಲರ ಪಾತ್ರದ ಬಗ್ಗೆ ಸಾರ್ವಜನಿಕರಿಗೆ ಮನದಟ್ಟಾಗುವ ರೀತಿಯಲ್ಲಿ ಜಾಗೃತಿಯನ್ನು ಮೂಡಿಸಿದರು.

ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾರದಾ ನೈನಾಡು, ವಸಂತ ಸಾಲಿಯಾನ್ ಅಧ್ಯಕ್ಷರು ಶ್ರೀರಾಮ ಯುವಕ ಸಂಘ ನೈನಾಡು, ಜಾರಪ್ಪ ಪೂಜಾರಿ ಪ್ರಮುಖರು ಶ್ರೀ ರಾಮ ಭಜನಾ ಮಂದಿರ ನೈನಾಡು, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ನೆಲ್ವಿಸ್ಟರ್ ಪಿಂಟೊ, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷರಾದ ಲ್ಯಾನ್ಸಿ ವಿಲಿಯಂ ಡಿಸೋಜಾ ಮತ್ತು ಕಾರ್ಯದರ್ಶಿ ಇನಾಸ್ ರೋಡ್ರಿಗಾಸ್ ಹಾಗೂ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸಿ! ಮೋಂತಿಯವರು ಉಪಸ್ಥಿತರಿದ್ದರು.

Nainad : Anti-Drug Awareness Campaign by All Religion Leaders

ಐ.ಸಿ.ವೈ.ಎಂ ಸಂಘಟನೆಯ ಶ್ರೀ ಜೈಸನ್ ರೊಡ್ರಿಗಸ್ ಅವರು ಎಲ್ಲರನ್ನೂ ಸ್ವಾಗತಿಸಿದರು, ಐ.ಸಿ.ವೈ.ಎಂ ಅಧ್ಯಕ್ಷರಾದ ಆಸ್ಟಿನ್ ಲಸ್ರಾದೋರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಕುಮಾರಿ ಕೀರ್ತಿ ರೊಡ್ರಿಗಸ್ ರವರು ಧನ್ಯವಾದ ಸಮರ್ಪಿಸಿದರು.

Nainad : Anti-Drug Awareness Campaign by All Religion Leaders
Nainad : Anti-Drug Awareness Campaign by All Religion Leaders
Nainad : Anti-Drug Awareness Campaign by All Religion Leaders

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು