ಬುಧವಾರ, ಮೇ 15, 2024
ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!-ಕೊನೆಗೂ ಹೆಚ್ ಡಿ ರೇವಣ್ಣಗೆ ಜಾಮೀನು ಮಂಜೂರು ; ಕೋರ್ಟ್ ಷರತ್ತುಗಳೇನು.?-ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್-ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Gold Rate : ಚಿನ್ನ ಬೆಳ್ಳಿ ದರ; ಆಭರಣದ ಅಂಗಡಿಗೆ ಹೋಗುವ ಮುನ್ನ ಇಂದಿನ ಧಾರಣೆ ತಿಳಿದುಕೊಳ್ಳಿ!

Twitter
Facebook
LinkedIn
WhatsApp
gold rate today 96075173

Gold Rate : ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,050 ರುಪಾಯಿ ಇದೆ (Gold Rate). 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,050 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 74.50 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 55,050 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,400 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

ಭಾರತದಲ್ಲಿ ಚಿನ್ನದ ದರ ಏರಿಕೆ ಕಂಡಿದೆ. ಗಣೇಶ ಚತುರ್ಥಿ ಮರುದಿನ ಚಿನ್ನ ಅಥವಾ ಬೆಳ್ಳಿ ಖರೀದಿಸಲು ಬಯಸುವವರು ಇಂದು ನಿನ್ನೆಗಿಂತ ಹೆಚ್ಚು ದರ ನೀಡಿ ಚಿನ್ನಾಭರಣ ಖರೀದಿಸಬೇಕಿದೆ.

ಇಂದು ಸೆಪ್ಟೆಂಬರ್ 19 ಮಂಗಳವಾರ, ಚಿನ್ನದ ದರ ಹೀಗಿದೆ. ದೇಶದಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು 5,520 ರೂಪಾಯಿ ಇದೆ. 1 ಗ್ರಾಂ 24 ಕ್ಯಾರೆಟ್ ಚಿನ್ನ ಅಥವಾ 999 ಗೋಲ್ಡ್‌ ಬೆಲೆ 6,022 ರೂಪಾಯಿ ಇದೆ. ಮಾರುಕಟ್ಟೆ ಬೆಲೆಯಲ್ಲಿ ಭಾರೀ ಏರಿಕೆ ಆಗಿದ್ದು, ಚಿನ್ನ ಸೋಮವಾರದಿಂದ ಮಂಗಳವಾರಕ್ಕೆ 15 ರುಪಾಯಿ ತುಟ್ಟಿಯಾಗಿದ್ದು, 24 ಕ್ಯಾರೆಟ್ ಚಿನ್ನ ಬರೋಬ್ಬರಿ 17 ರುಪಾಯಿ ತುಟ್ಟಿಯಾಗಿದೆ.

ಬೆಂಗಳೂರಲ್ಲಿ ಚಿನ್ನದ ದರ
ಇನ್ನು ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಲ್ಲಿಯೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5520 ರೂ ಇದ್ದು, 10 ಗ್ರಾಂ ಬೆಲೆ 55,200 ರೂಪಾಯಿ ಇದೆ. ಇನ್ನು 22 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 15 ರುಪಾಯಿ ಏರಿಕೆ ಕಂಡುಬಂದಿದ್ದು, 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 14 ರುಪಾಯಿ ಏರಿಕೆ ಕಂಡುಬಂದಿದೆ.

ಬೆಂಗಳೂರಲ್ಲಿ ಬೆಳ್ಳಿಯ ದರ
ಚಿನ್ನದಂತೆಯೇ, ಬೆಳ್ಳಿಯ ದರದಲ್ಲಿಯೂ ಕೊಂಚ ಏರಿಕೆ ಕಂಡುಬಂದಿದೆ. ಈ ವಾರದ ಆರಂಭದಲ್ಲಿಯೇ ಚಿನ್ನ-ಬೆಳ್ಳಿ ಎರಡರ ದರವೂ ಹಿಂದಿಗಿಂತ ಏರಿಕೆಯಾಗಿದೆ.ಬೆಂಗಳೂರಲ್ಲಿ ಬೆಳ್ಳಿಯ ದರ ಒಂದು ಗ್ರಾಂಗೆ 74.30 ರೂಪಾಯಿ ಇದ್ದು, 10 ಗ್ರಾಂ ಬೆಳ್ಳಿಯ ದರ 743 ರೂಪಾಯಿ ಇದೆ. ಕೆ.ಜಿ ಬೆಳ್ಳಿಯ ದರ 74,300 ರೂಪಾಯಿ ಇದೆ.

ಜಾಗತಿಕ ಮಟ್ಟದ ಆರ್ಥಿಕತೆ, ಹಣದುಬ್ಬರದ ಅನಿಶ್ಚಿತತೆ, ನಿರುದ್ಯೋಗ, ಬಡ್ಡಿ ದರ ಏರಿಕೆ, ಡಾಲರ್ ಎದುರು ರುಪಾಯಿ ಕುಸಿತ ಮತ್ತು ಬ್ಯಾಂಕಿಂಗ್ ಬಿಕ್ಕಟ್ಟು ಎಲ್ಲವೂ ಪ್ರಭಾವ ಬೀರುತ್ತಿದೆ. ಗಣೇಶ ಹಬ್ಬದ ಬಳಿಕ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಈ ವಾರ ಚಿನ್ನ ದಿನೇ ದಿನೇ ದುಬಾರಿಯಾಗುತ್ತಿದೆ.

ಅಲ್ಲದೆ ಅಂತರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಹಾಗೂ ಡಾಲರ್ ಎದುರು ಮೌಲ್ಯ ಆಧರಿಸಿ, ಆಯಾ ದಿನದ ಬಂಗಾರ ಹಾಗೂ ಬೆಳ್ಳಿಯ ಬೆಲೆಯು ನಿರ್ಧಾರ ಆಗುತ್ತದೆ. ಇಲ್ಲಿರುವ ಚಿನ್ನ-ಬೆಳ್ಳಿಯ ಬೆಲೆ ಜಿಎಸ್‌ಟಿ ಸೇರ್ಪಡೆ ಆಗಿಲ್ಲ. ಇಲ್ಲಿರುವ ಚಿನ್ನದ ದರ ಪಟ್ಟಿ ಜಿಎಸ್‌ಟಿ ಹೊರತುಪಡಿಸಿದ ಬೆಲೆಯಾಗಿದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ