ಚಾರ್ಮಾಡಿ ಘಾಟ್ ನಲ್ಲಿ 100 ಅಡಿ ಪ್ರಪಾತಕ್ಕೆ ಉರುಳಿ ಬಿದ್ದ ಲಾರಿ!
ಕೊಟ್ಟಿಗೆಹಾರ: ಕಳೆದ ಕೆಲ ದಿನಗಳಿಂದ ನಿರಂತರ ಸುರಿಯುತಿದ್ದ ಮಳೆಯಿಂದ ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಆವರಿಸಿಕೊಂಡಿದ್ದು ಪರಿಣಾಮ ಲಾರಿಯೊಂದು ನೂರು ಅಡಿ ಪ್ರಪಾತಕ್ಕೆ ಉರುಳಿಬಿದ್ದ ಘಟನೆ ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಶುಕ್ರವಾರ ರಾತ್ರಿ ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲ್ ತುಂಬಿದ ಲಾರಿ ಚಾರ್ಮಾಡಿ ಘಾಟಿಯಲ್ಲಿ ಆವರಿಸಿದ ದಟ್ಟ ಮಂಜಿನಿಂದ ದಾರಿ ಕಾಣದೆ 100 ಅಡಿ ಪ್ರಪಾತಕ್ಕೆ ಬಿದ್ದಿದೆ ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಗೆ ಯಾವುದೇ ಪ್ರಾಣಪಾಯವಿಲ್ಲದೆ ಪಾರಾಗಿದ್ದಾರೆ.
ಇಬ್ಬರ ಪ್ರಾಣ ಉಳಿಸಿದ ಮರ:
ಲಾರಿ ತಡೆಗೋಡೆಗೆ ಡಿಕ್ಕಿ ಹೊಡೆದು ನೂರು ಅಡಿ ಪ್ರಪಾತಕ್ಕೆ ಉರುಳಿದೆ ಈ ವೇಳೆ ಅಲ್ಲಿ ಇದ್ದ ದೈತ್ಯ ಮರಕ್ಕೆ ಲಾರಿ ಸಿಲುಕಿಕೊಂಡ ಪರಿಣಾಮ ಸಂಭವನೀಯ ಅವಘಡ ತಪ್ಪಿದೆ ಒಂದು ವೇಳೆ ಲಾರಿ ಮರಕ್ಕೆ ಸಿಕ್ಕಿಕೊಳ್ಳದಿದ್ದಲ್ಲಿ ಸಾವಿರ ಅಡಿ ಪ್ರಪಾತಕ್ಕೆ ಹೋಗಿ ಬೀಳುತ್ತಿತ್ತು ಎನ್ನಲಾಗಿದೆ.
ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ : ಸ್ಕೂಟಿಗೆ ಬೈಕ್ ಢಿಕ್ಕಿ- ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ..!
ಕಾರ್ಕಳ : ಕಾರ್ಕಳ ನಗರದ ಸರ್ವಜ್ಞ ವೃತ್ತ ಬಳಿ, ಹೊಟೇಲ್ ಜೈನ್ ಮುಂಭಾಗ ಸ್ಕೂಟಿಗೆ ಬೈಕ್ ಡಿಕ್ಕಿ ಹೊಡೆದಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಕೂಟಿ ಸಹ ಸವಾರ ಕುಕ್ಕುಂದೂರು ಗ್ರಾಮದ ನಕ್ರೆ ನಿವಾಸಿ ಜಾರ್ಜ್ ಗಾಯಗೊಂಡ ವ್ಯಕ್ತಿಯಾಗಿದ್ದಾರೆ.
ಸ್ಕೂಟಿ ಸವಾರ ಕುಕ್ಕೂಂದೂರು ಗ್ರಾಮದ ಆಂಟೋನಿ ಹಾಗೂ ಬೈಕ್ ಸವಾರ ಅದೇ ಗ್ರಾಮದ ಅಲ್ಪ ಸ್ವಲ್ಪ ಗಾಯಗಳಿಂದ ವಿಘ್ನೇಶ್ ಪಾರಾಗಿದ್ದಾರೆ.
ಢಿಕ್ಕಿಯ ರಭಸಕ್ಕೆ ಬೈಕ್ ಕೆಲವು ಮೀಟರ್ ದೂರಕ್ಕೆ ನೆಗೆದು ಬಿದ್ದಿದೆ. ಘಟನೆಯ ಭೀಕರ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.