ಗುರುವಾರ, ನವೆಂಬರ್ 21, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಜೈಹಿಂದ್‌ ಜಂಕ್ಷನ್‌ ಬಳಿ ಪಾದಚಾರಿಗಳಿಗೆ ಚೂರಿ ಇರಿತ; ಆರೋಪಿಗಳ ಬಂಧನ

Twitter
Facebook
LinkedIn
WhatsApp
ಜೈಹಿಂದ್‌ ಜಂಕ್ಷನ್‌ ಬಳಿ ಪಾದಚಾರಿಗಳಿಗೆ ಚೂರಿ ಇರಿತ; ಆರೋಪಿಗಳ ಬಂಧನ

ಕಾಪು: ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರ ಜೈಹಿಂದ್‌ ಜಂಕ್ಷನ್‌ ಬಳಿ ಕುಡಿತದ ಅಮಲಿನಲ್ಲಿದ್ದ ಸ್ಕೂಟರ್‌ ಸವಾರರು ಪಾದಚಾರಿಗಳಿಬ್ಬರ ಜತೆ ವಾಗ್ವಾದ ನಡೆಸಿ ಬಳಿಕ ಚೂರಿಯಿಂದ ಇರಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಉದ್ಯಾವರ ಗ್ರಾಮದ ಬೊಳೆj ಮಠದಕುದ್ರು ನಿವಾಸಿಗಳಾದ ಜಯರಾಮ ತಿಂಗಳಾಯ ಮತ್ತು ಸಂದೀಪ್‌ ಇರಿತಕ್ಕೊಳಗಾಗಿದ್ದು, ಆರೋಪಿಗಳಾದ ಕುರ್ಕಾಲು ಸುಭಾಸ್‌ ನಗರದ ನಿವಾಸಿಗಳಾದ ಪ್ರೇಮನಾಥ್‌, ಸಂಪತ್‌ ಚೂರಿಯಿಂದ ಇರಿದ ಆರೋಪಿಗಳು. ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸಿದ್ದು, ಬಂಧಿತರಿಗೆ ನ್ಯಾಯಾಲಯ ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಗೆಳೆಯರಾಗಿದ್ದ ಜಯರಾಮ ತಿಂಗಳಾಯ ಮತ್ತು ಸಂದೀಪ್‌ ಬುಧವಾರ ರಾತ್ರಿ ಬೊಳೆj ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಉದ್ಯಾವರ ಜೈಹಿಂದ್‌ ಜಂಕ್ಷನ್‌ ಎದುರಿನ ರಾ.ಹೆ. 66ರ ಉಡುಪಿ-ಮಂಗಳೂರು ರಸ್ತೆಯ ಪೂರ್ವದ ಅಂಚಿನಲ್ಲಿರುವಾಗ ರಸ್ತೆಯ ಎದುರಿನಿಂದ ಹೆಡ್‌ಲೈಟ್‌ ಹಾಕದೆ ಸ್ಕೂಟರ್‌ವೊಂದರಲ್ಲಿ ಬಂದ ಆರೋಪಿಗಳು ರಸ್ತೆ ದಾಟಲು ನಿಂತಿದ್ದವರಿಗೆ ಢಿಕ್ಕಿ ಹೊಡೆಯುವ ರೀತಿಯಲ್ಲಿ ವಾಹನ ಚಲಾಯಿಸಿಕೊಂಡು ಬಂದಿದ್ದರು.

ಈ ವೇಳೆ ಜಯರಾಮ ತಿಂಗಳಾಯ ಅವರು ಹೆಡ್‌ಲೈಟ್‌ ಇಲ್ಲದೆ ಬಂದು ನಮ್ಮನ್ನು ಕೊಲ್ಲುತ್ತೀರಾ ಎಂದು ಸ್ಕೂಟರ್‌ ಸವಾರರನನ್ನು ಪ್ರಶ್ನಿಸಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಸ್ಕೂಟರ್‌ನ ಹಿಂಬದಿ ಸವಾರ ತನ್ನ ಕೈಯಲ್ಲಿದ್ದ ಹರಿತವಾದ ಚೂರಿಯಿಂದ ಜಯರಾಮ ಅವರ ಎಡಗೈ ಭುಜದ ಕೆಳಗೆ, ಬಲಭುಜದ ಬಳಿ ಹಾಗೂ ಹಣೆಗೆ ಚೂರಿಯಿಂದ ಚುಚ್ಚಿದ್ದಾನೆ. ಈ ವೇಳೆ ತಪ್ಪಿಸಲು ಹೋದ ಸಂದೀಪ್‌ ಅವರಿಗೂ ಚೂರಿಯಿಂದ ಬೆನ್ನಿಗೆ ಚುಚ್ಚಿದ್ದಾನೆ. ಗಲಾಟೆ ಕೇಳಿದ ಸಮೀಪದ ಗೂಡಂಗಡಿಯವರು ಬರುವುದನ್ನು ಕಂಡು ಇಬ್ಬರು ಕೂಡಾ ಸ್ಕೂಟರ್‌ ಸಮೇತ ಪರಾರಿಯಾಗಿದ್ದಾರೆ.

ಈ ವೇಳೆ ಸ್ಥಳಕ್ಕೆ ಬಂದ ಸಾಯಿನಾಥ್‌ ಅವರು ಇರಿತಕ್ಕೊಳಗಾದವರನ್ನು ವಾಹನವೊಂದರಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬಂಟ್ವಾಳದಲ್ಲಿ ಪೊಲೀಸ್‌ ಸಿಬ್ಬಂದಿಯ ಮೇಲೆ ನೈತಿಕ ಪೊಲೀಸ್‌ಗಿರಿ – ಇಬ್ಬರು ಅರೆಸ್ಟ್‌

ಮಂಗಳೂರು: ಸರ್ಕಾರದ ಎಚ್ಚರಿಕೆ ನಡುವೆಯೂ ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್‍ಗಿರಿ (Moral Policing) ಪ್ರಕರಣಗಳು ಮೇಲಿಂದ ಮೇಲೆ ವರದಿ ಆಗುತ್ತಿವೆ. ಇದೀಗ ಪೊಲೀಸ್ (Police) ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿ ನೈತಿಕ ಪೊಲೀಸ್‍ಗಿರಿ ಮಾಡಿರುವ ಪ್ರಕರಣವೊಂದು ಬಂಟ್ವಾಳದ (Bantwal) ಬಿಸಿ ರೋಡ್‍ನಲ್ಲಿ ನಡೆದಿದೆ.

ಮುಸ್ಲಿಂ ಮತ್ತು ಹಿಂದೂ ಹುಡುಗಿಯರನ್ನು ಎಲ್ಲಿಗೆ ಕರೆದುಕೊಂಡು ಹೋಗ್ತಿದ್ದೀಯಾ? ಇಲ್ಲಿನ ವಿಚಾರ ನಿನಗೆ ಗೊತ್ತಲ್ಲ ಎನ್ನುತ್ತಾ ಪೊಲೀಸ್ ಸಿಬ್ಬಂದಿಗೆ ಹಲ್ಲೆ ಮಾಡಿದ ಗುಂಪೊಂದು, ಪೊಲೀಸ್ ಸಿಬ್ಬಂದಿಯ ಪತ್ನಿ ಮೇಲೆ ಮಾನಭಂಗಕ್ಕೂ ಯತ್ನಿಸಿದೆ ಎಂಬ ಆರೋಪ ಕೇಳಿಬಂದಿದೆ.

ಮಾನಭಂಗ ಯತ್ನ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬೆನ್ನಲ್ಲೇ ಕಾರ್ಯಚರಣೆ ನಡೆಸಿದ ಪೊಲೀಸರು, ಆರೋಪಿಗಳಾದ ತುಂಬೆ ನಿವಾಸಿ ಮನೀಶ್ ಪುಜಾರಿ, ಮಂಜುನಾಥ್ ಆಚಾರ್ಯನನ್ನು ಬಂಧಿಸಿದ್ದಾರೆ.

ಬಂಟ್ವಾಳ ಡಿವೈಎಸ್‍ಪಿ ಕಚೇರಿಯ ಸಿಬ್ಬಂದಿ ಪ್ರಸ್ತುತ ಎನ್‍ಐಎ (NIA) ವಿಭಾಗದಲ್ಲಿ ಕರ್ತವ್ಯ ನಿರ್ವಹಿಸ್ತಿರುವ ಕುಮಾರ್ ಮೇಲೆ ಈ ಗುಂಪು ಹಲ್ಲೆ ನಡೆಸಿದೆ. ಜೊತೆಗೆ ಕುಮಾರ್ ಕುಟುಂಬದ ಮೇಲೆ ಮಾನಭಂಗ ಯತ್ನ ನಡೆದಿದೆ ಎಂದು ತಿಳಿದುಬಂದಿದೆ.

ಗುರುವಾರ ರಾತ್ರಿ ಪತ್ನಿ ಮತ್ತು ಪತ್ನಿಯ ಸಹೋದರಿ ಜೊತೆ ಬಿಸಿ ರೋಡ್ ವಸತಿ ಗೃಹದಲ್ಲಿ ತಂಗಿದ್ದೆ. ರಾತ್ರಿ ಊಟಕ್ಕೆಂದು ಹೊಟೆಲ್‍ಗೆ ಹೋಗಿ ವಾಪಸ್ ಆಗುವಾಗ ಇಬ್ಬರು ಹಿಂಬಾಲಿಸಿ ಬಂದು ನಮ್ಮನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿದರು. ಮುಸ್ಲಿಂ ಮತ್ತು ಹಿಂದೂ ಹುಡುಗಿಯರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀಯಾ ಎಂದು ಪ್ರಶ್ನಿಸಿದರು. ಇಲ್ಲಿನ ವಿಚಾರ ನಿನಗೆ ಗೊತ್ತಲ್ಲವೇ ಎಂದು ಬೆದರಿಕೆ ಹಾಕಿ ಹಲ್ಲೆಗೆ ಮುಂದಾದರು. ನನ್ನ ಪತ್ನಿಯ ವಿಡಿಯೋ ಚಿತ್ರೀಕರಣ ಮಾಡಿ ಮಾನಭಂಗಕ್ಕೂ ಯತ್ನಿಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು