ಪುತ್ತೂರು: ಕೆಮ್ಮಾಯಿ ಪೆಟ್ರೋಲ್ ಬಂಕ್ ಬಳಿ ಬೈಕ್ ಅಪಘಾತ : ಸವಾರ ಸಾವು

ಉಪ್ಪಿನಂಗಡಿ (Uppinangadi) ಪುತ್ತೂರು (Puttur) ರಸ್ತೆಯ ಕೆಮ್ಮಾಯಿ ಪೆಟ್ರೋಲ್ ಬಂಕ್ ಬಳಿ ನಿಯಂತ್ರಣ ತಪ್ಪಿ ಬೈಕ್ ಅಪಘಾತಕ್ಕೆ (Accident) ಈಡಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ರಾತ್ರಿ ಸಂಭವಿಸಿದೆ.
ಸೇಡಿಯಾಪು ಬಳಿಯ ನಿವಾಸಿ ಚೈತ್ರೇಶ್ ಯಾನೆ ಚರಣ್ (19) ಮೃತ ಬೈಕ್ ಸವಾರ. ಟರ್ನ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಅಪಘಾತವಾಗಿದೆ.
ಚೈತ್ರೇಶ್ ಬೈಕ್ಖ (Bike) ರೀದಿಸಿ ಕೇವಲ ಒಂದು ತಿಂಗಳಷ್ಟೇ ಆಗಿದೆನ್ನಲಾಗಿದೆ. ಸ್ಥಳಕ್ಕೆ ಪುತ್ತೂರು (Puttur) ಸಂಚಾರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಜಾರಿದ ಖಾಸಗಿ ಬಸ್:
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಚರಂಡಿಗಿಳಿದ ಘಟನೆ ವಿಟ್ಲ (Vitla) ಪುತ್ತೂರು ರಸ್ತೆಯ ಕಬಕ ಸಮೀಪ ನಡೆದಿದೆ.

ಪುತ್ತೂರು ಕಡೆಯಿಂದ ಬರುತ್ತಿದ್ದ ಬಸ್ (Bus) ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಚಾಲಿ ನಿಂತಿದೆ. ಘಟನೆಯಲ್ಲಿ ಚಾಲಕ ಸಹಿತ ಪ್ರಯಾಣಿಕರಿಗೆ ಯಾರಿಗೂ ಕೂಡ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಕಬಕದ (kabaka) ನೀರಪಳಿಕೆ ಎಂಬಲ್ಲಿ ಈ ಘಟನೆ ನಡೆದಿದ್ದು, ನಿರಂತರವಾಗಿ ಸುರಿಯುವ ಮಳೆಗೆ ಈ ಘಟನೆ ಸಂಭವಿಸಿರಬೇಕು ಎಂದು ಹೇಳಲಾಗಿದೆ.
ಜೋರಾಗಿ ಮಳೆ (Rain) ಸುರಿಯುವುದು ಒಂದು ಕಡೆಯಾದರೆ ಇನ್ನೊಂದು ಕಡೆ ರಸ್ತೆ (Road) ಎಲ್ಲಾ ಹಾಳಾಗಿದೆ ಹಾಗಾಗಿ ಚಾಲಕರು ಹೆಚ್ಚಿನ ಜಾಗರೂಕತೆ ಯಿಂದ ನಿಧಾನವಾಗಿ ಚಾಲನೆ ಮಾಡುವಂತೆ ವಿಟ್ಲ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ಅವರು ಮನವಿ ಮಾಡಿದ್ದಾರೆ . ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಚಾಲಕರ ಸಹಕಾರ ನೀಡಿ ಎಂದು ಅವರು ಮನವಿ ಮಾಡಿದ್ದಾರೆ.
ದ್ವಿಚಕ್ರ ವಾಹನಕ್ಕೆ ಟಿಪ್ಟರ್ ಢಿಕ್ಕಿ- ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವು..!
ವಿಟ್ಲ: ದ್ವಿಚಕ್ರ ವಾಹನಕ್ಕೆ ಟಿಪ್ಟರ್ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ.
ಮಂಗಿಲಪದವು ನೆಕ್ಕಿಲಾರು ನಿವಾಸಿ ಜನಾರ್ದನ ಗೌಡ (50) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಜೂ. 11 ರಂದು ಸಂಭವಿಸಿದ ಅಪಘಾತದಲ್ಲಿ (Accident) ಚಲಾಯಿಸುತ್ತಿದ್ದ ಆಕ್ಟಿವಾ (Activa) ವಾಹನಕ್ಕೆ ಟಿಪ್ಪರ್ ಢಿಕ್ಕಿಯಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ (Private hospital) ದಾಖಲಾಗಿ ಚಿಕಿತ್ಸೆ ಪಡಿಯುತ್ತಿದ್ದರು.
ಕೃಷಿಕರಾದ ಜನಾರ್ದನ ಗೌಡ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. 400 ಕೆ.ವಿ. ಉಡುಪಿ ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.