ಕುಶಾಲನಗರದಲ್ಲಿ ಪರಿಸರ ದಿನಾಚರಣೆ ಆಚರಣೆ

ಕುಶಾಲನಗರದ ನಂ-19722 ನೇ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ವನಸಿರಿ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ “ಗಿಡನೆಟ್ಟು ನಿರ್ವಹಿಸಿ ಬೆಳೆಸುವ” ಕಾರ್ಯಕ್ರಮವು ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ನಡೆಯಿತು.
ಅರಣ್ಯ ಇಲಾಖೆ, ಪುರಸಭೆ ಕುಶಾಲನಗರ ಹಾಗೂ ಎಂ ಜಿ ಎಂ ಕಾಲೇಜು ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಷರಾದ ಶ್ರೀ ಸದಾಶಿವ ಸ್ವಾಮೀಜಿ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಶ್ರೀ ಡಾ. ಮಂತರ್ ಗೌಡ, ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಟಿ ಆರ್ ಶರವಣ ಕುಮಾರ್, ಡಿ ಎಫ್ ಓ ಶ್ರೀ ಎ.ಟಿ ಪೂವಯ್ಯ, ಶಕ್ತಿ ದಿನಪತ್ರಿಕೆ ಸಂಪಾದಕರಾದ ಜಿ ಚಿದ್ವಿಲಾಸ್, ಜಿಲ್ಲಾ ಪಂಚಾಯತ್ ಮಾಜಿ ಅಧಕ್ಷರಾದ ಶ್ರೀಮತಿ. ಕೆ ಪಿ ಚಂದ್ರಕಲ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಹಾಗೂ ಕುಶಾಲನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಶ್ರೀ ವಿ ಪಿ ಶಶಿಧರ್ ಹಾಗೂ ಪ್ರಮುಖರು ದೀಪವನ್ನು ಬೆಳಗುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು.
ವನಸಿರಿ ಯೋಜನೆಗೆ ಚಾಲನೆ ನೀಡಿದ ಶಾಸಕರಾದ ಡಾ. ಮಂತರ್ ಗೌಡ ಅವರು ವೇದಿಕೆಯಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶುಚಿತ್ವ , ಪರಿಸರ ಮಾಲಿನ್ಯ ಕಾಪಾಡುವ ಬಗ್ಗೆ ಪ್ರತಿಯೊಬ್ಬರಿಗೂ ಕನಿಷ್ಠ ಅರಿವು ಅಗತ್ಯವಿದೆ. ಈ ಹಿಂದೆ ನಡೆದಂತಹ ಕೆಲವೊಂದು ಅವೈಜ್ಞಾನಿಕ ಅಭಿವೃದ್ದಿ ಚಟುವಟಿಕೆಗಳಿಂದ ಪರಿಸರ ಅವನತಿ ಹೊಂದಿದೆ.
ಮುಂದಿನ ಪೀಳಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಇಂತಹ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಮತ್ತು ವಿವಿಧ ಸಂಘಸಂಸ್ಥೆಗಳು ಹಮ್ಮಿಕೊಳ್ಳವಂತಾಗಬೇಕು…
ಕಾಲಕಾಲಕ್ಕೆ ಪರಿಸರ ಕ್ಷೀಣಿಸಿ ಇಂದು ಪರಿಸರವನ್ನು ಕಡ್ಡಾಯವಾಗಿ ಉಳಿಸಿ ಬೆಳೆಸುವ ಪರಿಸ್ಥಿತಿ ಬಂದೊದಗಿದೆ ಎಂದು ವಿಷಾದ ವ್ಯೆಕ್ತ ಪಡಿಸಿದರು.
ಈ ಸಂದರ್ಭ ಮುಖ್ಯ ಅತಿಥಿಗಳು, ಅರಣ್ಯ ಅಧಿಕಾರಿಗಳು ಗಿಡವನ್ನು ಬೆಳೆಸುವುದರ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವೇದಿಕೆಯಲ್ಲಿ ಅಂಚಿಕೊಂಡರು…
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಷರಾದ ಶ್ರೀ ಸದಾಶಿವ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು, ನಂತರ ಅವರು ಮಾತನಾಡಿ ಮಾನವನಿಂದಲೇ ನಾಶವಾಗುತ್ತಿರುವ ಪರಿಸರವನ್ನು ಮನುಷ್ಯರೇ ಬೆಳೆಸುವಂತಾಗಬೇಕಿದೆ, ಈಗಾಗಲೇ ಪರಿಸರ ಅಸಮತೋಲನ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಇದು ನಿಯಂತ್ರಣಕ್ಕೆ ತರುವಲ್ಲಿ ಅರಣ್ಯಿಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಆಗೆಯೇ ಈ ಸಂಧರ್ಭ ಶ್ರೀ ಸದಾಶಿವ ಸ್ವಾಮೀಜಿ ಅವರು, ಶಾಸಕರಾದ ಡಾ. ಮಂತರ್ ಗೌಡರವರು ಹಾಗೂ ಅಧಿಕಾರಿಗಳು, ಮುಖ್ಯ ಅತಿಥಿಗಳು, ಸಂಘದ ಪದಾಧಿಕಾರಿಗಳು ಹಲವಾರು ಗಿಡಗಳನ್ನು ನೆಡುವ ಮೂಲಕ ಐತಿಹಾಸಿಕ ವನಸಿರಿ ಯೋಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು….
ಈ ಸಂಧರ್ಭ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಸುಂದರೇಶ್ ಎ ಸಿ ಎಫ್ ಗೋಪಾಲ್, ಆರ್ ಎಫ್ ಓ ಶಿವರಾಮ್, ಕಾಲೇಜು ಅಧ್ಯಕ್ಷ ಶಂಭುಲಿಂಗಪ್ಪ, ಹಿರಿಯ ಸಹಕಾರಿ ಕುಮಾರಪ್ಪ ಹಾಗೂ ಪ್ರಮುಖರು ಉಪಸ್ಥಿತರಿದ್ದರು.