ಚೀಟಿ ಹೆಸರಲ್ಲಿ ಕೋಟ್ಯಾಂತರ ರೂ. ವಂಚನೆ ಆರೋಪ; ಗಂಡ ಹೆಂಡತಿ ಇಬ್ಬರೂ ಅರೆಸ್ಟ್!
Twitter
Facebook
LinkedIn
WhatsApp
ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ಗಂಡ ಹೆಂಡತಿ ಸೇರಿ ಚೀಟಿ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವಂಚಿಸಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಚೀಟಿ ಕಟ್ಟಿಸಿಕೊಂಡು ಕೋಟ್ಯಾಂತರ ರೂಪಾಯಿ ವಂಚಿಸಿದ ಘಟನೆ ಬೆಂಗಳೂರಿ(Bengaluru)ನ ಟಿ.ದಾಸರಹಳ್ಳಿಯಲ್ಲಿ ನಡೆದಿದೆ. ಪುಣ್ಯ ಹಾಗೂ ಚಂದ್ರಶೇಖರ್ ಎಂಬ ದಂಪತಿಗಳು ಸ್ವಂತ ಮನೆ ತೋರಿಸಿ, ಸುಮಾರು 1.5 ಕೋಟಿಗೂ ಹೆಚ್ಚು ಹಣ ಚೀಟಿ ಹಾಕಿಸಿಕೊಂಡು ಹಲವರಿಗೆ ವಂಚಿಸಿದ್ದು, ಈ ಕುರಿತು ದಂಪತಿ ವಿರುದ್ದ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ 6ಗಂಟೆಗಳ ಬಳಿಕ ಸತತ ಪ್ರಯತ್ನದೊಂದಿಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.