ಮಂಡ್ಯ : ಮಕ್ಕಳ ಬಿಸಿಯೂಟಕ್ಕೆ ಕನ್ನ ಹಾಕಿದ ಶಿಕ್ಷಕನನ್ನು ರೆಡ್ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು
Twitter
Facebook
LinkedIn
WhatsApp
ಮಂಡ್ಯ: ಸರ್ಕಾರ ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳನ್ನು ಕದ್ದು ಕೊಂಡೊಯ್ಯುತ್ತಿದ್ದ ಶಾಲಾ (School) ಶಿಕ್ಷಕನನ್ನು ಗ್ರಾಮಸ್ಥರು ರೆಡ್ಹ್ಯಾಂಡ್ ಆಗಿ ಹಿಡಿದು ತರಾಟೆಗೆ ತೆಗೆದುಕೊಂಡ ಘಟನೆ ಮಳವಳ್ಳಿಯ (Malavalli) ತಂಗಳವಾದಿಯಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಪ್ರೌಡಶಾಲೆಯ ದೈಹಿಕ ಶಿಕ್ಷಕ ಶಿವರುದ್ರ ಮಕ್ಕಳಿಗೆ ನೀಡುತ್ತಿದ್ದ ಹಾಲು ಹಾಗೂ ಬೇಳೆ ಪ್ಯಾಕೆಟ್ ಕದ್ದೊಯ್ತಿದ್ದ. ಈ ವೇಳೆ ಗ್ರಾಮಸ್ಥರು ಹೋಗಿ ಬೈಕ್ ಅಡ್ಡಗಟ್ಟಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಾಲಿನ ಪ್ಯಾಕ್ಗಳು ಹಾಗೂ ಬೇಳೆ ಪ್ಯಾಕ್ಗಳು ಪತ್ತೆಯಾಗಿವೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಸರ್ಕಾರ ಸಂಬಳ ಹೆಚ್ಚಿಗೆ ಮಾಡಿದರೂ ನಿಮಗೆ ಯಾಕೆ ಈ ಬುದ್ದಿ ಬಂತು ಎಂದು ಛೀಮಾರಿ ಹಾಕಿದ್ದಾರೆ.
ಬಳಿಕ ಶಿಕ್ಷಕನ ಸಮೇತ ಕದ್ದ ಸಾಮಾಗ್ರಿಗಳನ್ನು ಗ್ರಾಮಸ್ಥರು ವಿಡಿಯೋ ಮಾಡಿ ಬಿಇಒಗೆ ದೂರ ನೀಡಿದ್ದಾರೆ. ಅಲ್ಲದೇ ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.