ಬುಧವಾರ, ಮೇ 15, 2024
ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!-ಕೊನೆಗೂ ಹೆಚ್ ಡಿ ರೇವಣ್ಣಗೆ ಜಾಮೀನು ಮಂಜೂರು ; ಕೋರ್ಟ್ ಷರತ್ತುಗಳೇನು.?-ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್-ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಳ್ಳಿ ದರದಲ್ಲಿ ಇಳಿಕೆ, ಚಿನ್ನದ ಬೆಲೆ ಮತ್ತೆ ಏರಿಕೆ; ಇಂದಿನ ಚಿನ್ನದ ಬೆಲೆ ವಿವರ ನೋಡಿ..

Twitter
Facebook
LinkedIn
WhatsApp
gold jewellery

ಬೆಂಗಳೂರು: ಚಿನ್ನದ ಬೆಲೆಯ (Gold Rates) ಹೊಯ್ದಾಟ ಮುಂದುವರಿದಿದೆ. ಒಂದೆರಡು ದಿನಗಳ ಕಾಲ ವಿರಮಿಸಿ ತುಸು ಇಳಿಕೆ ಕಂಡಿದ್ದ ಚಿನ್ನ ಮತ್ತೆ ಬೆಲೆ ಹೆಚ್ಚಿಸಿಕೊಳ್ಳುತ್ತಿದೆ. ಬೆಳ್ಳಿ ಬೆಲೆ ಇಳಿಕೆ ಯಥಾಪ್ರಕಾರ ಮುಂದುವರಿದಿದೆ. ಮೇ 5ರಂದು 100 ಗ್ರಾಮ್​ಗೆ 7825 ರೂ ಇದ್ದ ಬೆಳ್ಳಿ ಬೆಲೆ ಇದೀಗ 7480 ರೂಗೆ ಇಳಿದಿದೆ. 9 ದಿನದಲ್ಲಿ 345 ರೂನಷ್ಟು ಬೆಲೆ ಇಳಿಕೆಯಾಗಿದೆ. ಚಿನ್ನದ ಬೆಲೆ ಅಮೆರಿಕ ಹೊರತುಪಡಿಸಿ ಉಳಿದ ಕಡೆ ಹೆಚ್ಚಳ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 61,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,480 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 56,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,850 ರುಪಾಯಿಯಲ್ಲಿ ಇದೆ.

ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಮುಂದೆಯೂ ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 14ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,650 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,800 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 748 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,700 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,850 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 785 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 56,700 ರೂ
  • ಚೆನ್ನೈ: 57,150 ರೂ
  • ಮುಂಬೈ: 56,650 ರೂ
  • ದೆಹಲಿ: 56,800 ರೂ
  • ಕೋಲ್ಕತಾ: 56,650 ರೂ
  • ಕೇರಳ: 56,650 ರೂ
  • ಅಹ್ಮದಾಬಾದ್: 56,700 ರೂ
  • ಜೈಪುರ್: 56,800 ರೂ
  • ಲಕ್ನೋ: 56,800 ರೂ
  • ಭುವನೇಶ್ವರ್: 56,650 ರೂ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ