ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಪೋಸ್ಟರ್ ಔಟ್
ಚಿತ್ರರಂಗದಲ್ಲಿ ಬಯೋಪಿಕ್ಗಳ ಹಾವಳಿ ಜೋರಾಗಿದೆ. ಈ ಹಿಂದೆಯೇ ಸಿದ್ದರಾಮಯ್ಯ (Siddaramaiah) ಅವರ ಜೀವನಾಧರಿತ (Biopic) ಸಿನಿಮಾ ಬರುವ ಬಗ್ಗೆ ಅಪ್ಡೇಟ್ ಸಿಕ್ಕಿತ್ತು. ಇದೀಗ ರಾಮನವಮಿ (Ramanavami) ಹಬ್ಬದ ಶುಭ ಸಂದರ್ಭದಲ್ಲಿ ಸಿದ್ದರಾಮಯ್ಯ ಬಯೋಪಿಕ್ನ ಪೋಸ್ಟರ್ ರಿಲೀಸ್ ಆಗಿದೆ.
ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ. ಸತ್ಯ ರತ್ನಂ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಸಿದ್ದರಾಮಯ್ಯ ಬಯೋಪಿಕ್ಗೆ `ಲೀಡರ್ ರಾಮಯ್ಯ’ (Leader Ramaiah) ಎಂದು ಹೆಸರಿಡಲಾಗಿದೆ. ಗುರುವಾರ (ಮಾ.30) ರಾಮನವಮಿಯಂದು ಸಿದ್ದರಾಮಯ್ಯ ಮನೆಯ ಮುಂದೆಯೇ ಚಿತ್ರದ ಪೋಸ್ಟರ್ ಲಾಂಚ್ ಮಾಡಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಕ್ಯಾರೆಕ್ಟರ್ಗೆ ತಮಿಳು ನಟ ವಿಜಯ್ ಸೇತುಪತಿ (Vijay Seethupathi) ಅವರೇ ಸೂಕ್ತ ಎಂದೇನಿಸಿ ಈಗಾಗಲೇ ಅಪ್ರೋಚ್ ಮಾಡಲಾಗಿದೆ. ವಿಜಯ್ ಕೂಡ ಈ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮುಂದಿನ ತಿಂಗಳಿಂದ ಸಿನಿಮಾ ಶೂಟಿಂಗ್ ನಡೆಯಲಿದೆ. ಮಾ.30ರಂದು ಸಂಜೆ ಮತ್ತೆ ಅಧಿಕೃತವಾಗಿ ಸಿದ್ದರಾಮಯ್ಯ ಅವರ ಕಡೆಯಿಂದಲೇ `ಲೀಡರ್ ರಾಮಯ್ಯ’ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ.
ಸಿನಿಮಾದಲ್ಲಿ ರಾಜಕೀಯ ಜರ್ನಿ ಜೊತೆಗೆ ಲವ್ ಸ್ಟೋರಿ ಎಳೆಯೂ ಇರಲಿದೆ. ಸಿದ್ದರಾಮಯ್ಯ ಅವರು ಹೇಳಿದ ಕಥೆಗಳ ಜೊತೆಗೆ ಸಿನಿಮಾವನ್ನು ಕಮರ್ಷಿಯಲ್ ಆಗಿ ಮಾಡಲಾಗುತ್ತಿದೆ. 50 ಕೋಟಿ ಬಜೆಟ್ನಲ್ಲಿ ಚಿತ್ರ ಮೂಡಿ ಬರಲಿದೆ. ಅವರ ಕಾಲೇಜ್ ದಿನಗಳು, ಬಾಲ್ಯ ಜೀವನ, ರಾಜಕೀಯ ಎಂಟ್ರಿ ಇವೆಲ್ಲಾ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಹಯಾತ್ ಫೀರ್ ನಿರ್ಮಾಣದ ಈ ಸಿನಿಮಾಗೆ ವಿಜಯ್ ಸೇತುಪತಿ ನಟಿಸೋದು ಫಿಕ್ಸ್ ಆಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್ ನೋಡಲು ಫ್ಯಾನ್ಸ್ ಎದರು ನೋಡ್ತಿದ್ದಾರೆ.