ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಇಂದಿನ ದಿನ ಇರುವ ಅಡಿಕೆ ಧಾರಣೆ
ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕೆಲವು ಮಾರುಕಟ್ಟೆಯಲ್ಲಿ ಏರಿಕೆಯಾಗಿದ್ದು, ಕೆಲವು ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿದೆ. ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ವರದಿಗಳ ಪ್ರಕಾರ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿಅಡಿಕೆ ಧಾರಣೆ 48,899 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್ ಗಳಲ್ಲಿಇತ್ತೀಚಿನ(29-03-2022) ಅಡಿಕೆ ಬೆಲೆ ಹೇಗಿದೆ ಎಂಬುದನ್ನು ನೋಡಿ.
ಶಿವಮೊಗ್ಗ (ಶಿವಮೊಗ್ಗ ಜಿಲ್ಲೆ) – ರಾಶಿ ಅಡಿಕೆ – 45,099 ರೂ.
ತುಮಕೂರು (ತುಮಕೂರು ಜಿಲ್ಲೆ) – ರಾಶಿ ಅಡಿಕೆ – 44,950 ರೂ.
ಬಂಟ್ವಾಳ (ದಕ್ಷಿಣ ಕನ್ನಡ) – ಹಳೆದು – 48,000 – 54,500 ರೂ.
ಬಂಟ್ವಾಳ (ದಕ್ಷಿಣ ಕನ್ನಡ) – ಹೊಸದು – 32,000 – 38,000 ರೂ.
ಬಂಟ್ವಾಳ (ದಕ್ಷಿಣ ಕನ್ನಡ)- ಕೋಕ – 12,500 – 25,000 ರೂ.
ಮಂಗಳೂರು (ದಕ್ಷಿಣ ಕನ್ನಡ) – ಹೊಸದು – 25,876 -31,000 ರೂ.
ಪುತ್ತೂರು (ದಕ್ಷಿಣ ಕನ್ನಡ) – ಕೋಕ – 11,000 – 26,000 ರೂ.
ಪುತ್ತೂರು (ದಕ್ಷಿಣ ಕನ್ನಡ) – ಹೊಸದು – 32,000 – 38,000 ರೂ.
ಕೊಪ್ಪ (ಚಿಕ್ಕಮಗಳೂರು ಜಿಲ್ಲೆ) – ರಾಶಿ ಅಡಿಕೆ -44,399 ರೂ.
ದಾವಣಗೆರೆ (ದಾವಣಗೆರೆ ಜಿಲ್ಲೆ) – ರಾಶಿ ಅಡಿಕೆ -44,169 ರೂ.