ರಂಗಿತರಂಗದ ನಂತರ ಅನೂಪ್ ‘ರಾಜರಥ’ ಚಿತ್ರ ಮಾಡಿದರೂ, ಅದು ಹೇಳಿಕೊಳ್ಳುವಂತಹ ಗೆಲುವನ್ನು ತಂದುಕೊಡಲಿಲ್ಲ. ಆದರೂ, ಅವರು ಛಲ ಬಿಡದೇ ಭಾರೀ ಬಜೆಟ್ ಚಿತ್ರಕ್ಕೆ ಕೈ ಹಾಕಿ ಗೆಲುವು ಕಂಡರು. ಆದರೆ, ಆವಂತಿಕಾ ಶೆಟ್ಟಿಗೆ ಮಾತ್ರ ನಂತರದ ಸಿನಿಮಾಗಳಲ್ಲಿ ಅಷ್ಟೇನೂ ಯಶಸ್ಸು ಮತ್ತು ಬೇಡಿಕೆ ಬರಲಿಲ್ಲ. ಎರಡ್ಮೂರು ಚಿತ್ರಗಳನ್ನು ಮಾಡಿ, ತೆರೆಮರೆಗೆ ಸರಿದುಬಿಟ್ಟರು ಆವಂತಿಕಾ. ಈಗ ಮತ್ತೆ ಸಿನಿಮಾ ಮಾಡುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ.
‘ನನಗೆ ಅವಕಾಶ ಕೊಡಿ’ ಎಂದು ಪೋಸ್ಟ್ ಹಾಕಿದ ರಂಗಿತರಂಗ ಖ್ಯಾತಿಯ ನಟಿ
Twitter
Facebook
LinkedIn
WhatsApp
ಕನ್ನಡ ಸಿನಿಮಾ ರಂಗದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದ್ದ ‘ರಂಗಿತರಂಗ’ (Rangitaranga) ಚಿತ್ರವು ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಆನಂತರ ದೇಶ ವಿದೇಶಗಳಲ್ಲೂ ತನ್ನ ಗೆಲುವಿನ ಪತಾಕೆಯನ್ನು ಹಾರಿಸಿತ್ತು. ರಾತ್ರೋರಾತ್ರಿ ಅನೂಪ್ ಭಂಡಾರಿ (Anoop Bhandari)ಎಂಬ ನಿರ್ದೇಶಕ, ನಿರೂಪ ಭಂಡಾರಿ ಎನ್ನುವ ನಟ ಹಾಗೂ ಆವಂತಿಕಾ ಶೆಟ್ಟಿ (Avantika Shetty) ಎನ್ನುವ ನಟಿ ಫೇಮಸ್ ಆಗಿ ಬಿಟ್ಟರು. ಭಾರತೀಯ ಸಿನಿಮಾ ರಂಗದ ಅನೇಕ ದಿಗ್ಗಜರು ಈ ಚಿತ್ರದ ಬಗ್ಗೆ ಮಾತನಾಡಿದರು. ಆನಂತರ ಅನೂಪ್ ನಡೆದದ್ದು ಹಾದಿ ಆಯಿತು.
ಕುಟುಂಬದ ಸಮಸ್ಯೆಯ ಕಾರಣದಿಂದಾಗಿ ಆವಂತಿಕಾ ಸಿನಿಮಾ ರಂಗದಿಂದಲೇ ದೂರ ಸರಿದರಂತೆ. ನೆಮ್ಮದಿಗಾಗಿ ಆಧ್ಯಾತ್ಮದತ್ತ ಒಲವು ಬೆಳೆಸಿಕೊಂಡರಂತೆ. ಕೋವಿಡ್ ಮತ್ತಿತರ ಕಾರಣದಿಂದಾಗಿ ಬರೋಬ್ಬರಿ ಐದು ವರ್ಷಗಳಿಂದ ಅವರು ಯಾವುದೇ ಸಿನಿಮಾ ಮಾಡಿಲ್ಲ. ಮುಂಬೈನಲ್ಲೇ ಬೀಡುಬಿಟ್ಟಿದ್ದರಿಂದ ಕನ್ನಡ ಮಾತನಾಡಲು ಕೂಡ ಕಷ್ಟವಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಆವಂತಿಕಾ, ‘ನನಗೆ ಸಿನಿಮಾದಲ್ಲಿ ನಟಿಸುವ ಆಸಕ್ತಿಯಿದೆ. ಯಾರಾದರೂ ಅವಕಾಶ ಕೊಡಬೇಕು ಅಷ್ಟೆ. ಅವಕಾಶ ಕೊಟ್ಟರೆ ಖಂಡಿತವಾಗಿಯೂ ನಟಿಸುತ್ತೇನೆ. ಈ ಮೂಲಕ ಅವಕಾಶಕ್ಕಾಗಿ ಕೇಳುತ್ತಿದ್ದೇನೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ತಮ್ಮ ವೈಯಕ್ತಿಕ ಬದುಕಿನ ಬಗ್ಗೆಯೂ ಅವರು ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.