ಶುಕ್ರವಾರ, ಮೇ 10, 2024
ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು-ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!!-ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಪೊಲೀಸ್ ವಶಕ್ಕೆ; ಏನಿದು ಪ್ರಕರಣ?-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಕ್ಯಾಮೆರಾಗಳ ಮುಂದೆನೇ ನಾಯಕ ಕೆ ಎಲ್ ರಾಹುಲ್ ಗೆ ತರಾಟೆಗೆ ತೆಗೆದುಕೊಂಡ LSG ಮಾಲೀಕ ; ಅಭಿಮಾನಿಗಳು ಆಕ್ರೋಶ..!-ಮನೆಯಲ್ಲಿ ನೇಣುಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ-SSLC ಪಲಿತಾಂಶ ಪ್ರಕಟ; ಇಲ್ಲಿದೆ ಲಿಂಕ್-ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ-ಜೆಪಿ ನಡ್ಡಾ ಮತ್ತು ಅಮಿತ್ ಮಾಲವೀಯಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ಸಮನ್ಸ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾರಿಗೆ ಡಿಕ್ಕಿ ಹೊಡೆದು ಕಾಂಪೌಂಡ್‌ಗೆ ಗುದ್ದಿದ್ದ ಬಸ್: ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ

Twitter
Facebook
LinkedIn
WhatsApp
ಕಾರಿಗೆ ಡಿಕ್ಕಿ ಹೊಡೆದು ಕಾಂಪೌಂಡ್‌ಗೆ ಗುದ್ದಿದ್ದ ಬಸ್: ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ

ತಿರುವನಂತಪುರ: ಕೇರಳ ರಾಜ್ಯ ಸಾರಿಗೆ ಇಲಾಖೆಯ ಬಸ್‌ಗಳು ಅತೀವೇಗಕ್ಕೆ ಖ್ಯಾತಿ ಹಾಗೂ ಕುಖ್ಯಾತಿ ಪಡೆದಿವೆ. ಅಲ್ಲಿನ ಚಾಲಕರು ನಿರ್ವಾಹಕರು ಕೂಡ ಸಮಯದ ನಿರ್ವಹಣೆಗೆ ಖ್ಯಾತಿ ಪಡೆದಿದ್ದಾರೆ. ಇಂತಹ ಕೇರಳ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಭೀಕರ ಅಪಘಾತಕ್ಕೆ ಒಳಗಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಅಪಘಾತದ ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಭಯ ಮೂಡಿಸುತ್ತಿದೆ. 

ಸುದ್ದಿಸಂಸ್ಥೆ ಎಎನ್‌ಐ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. 37 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಮೊದಲಿಗೆ ವೇಗವಾಗಿ ಬರುತ್ತಿದ್ದ ಕೇರಳ ಸಾರಿಗೆ ಸಂಸ್ಥೆ ಬಸ್‌ ಹಾಗೂ ಕಾರಿನ ಮಧ್ಯೆ ಅಪಘಾತವಾಗಿದೆ. ಕಾರು ಹಾಗೂ ಬಸ್‌ ಎರಡು ವಾಹನಗಳು ಅತೀವೇಗದಲ್ಲಿ ಬಂದು ಮುಖಾಮುಖಿಯಾಗಿದ್ದು, ಕಾರಿಗೆ ಡಿಕ್ಕಿ ಹೊಡೆದ ನಂತರ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ಚರ್ಚ್‌ನ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದ್ದು, ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾಂಪೌಂಡ್ ಹಾಗೂ ಕಾಂಪೌಂಡ್ ಮೇಲೆ ನಿರ್ಮಿಸಿದ ಗೋಪುರದಂತಹ ರಚನೆ ಬಸ್ ಮೇಲೆ ಬಿದ್ದಿದೆ. ಈ ಅವಘಡದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಶನಿವಾರ ಈ ದುರಂತ ನಡೆದಿದೆ. ಕೇರಳದ ಪತ್ತನತ್ತಿಟ್ಟ ಜಿಲ್ಲೆಯ (Pathanamthitta district) ಕಿಝವಲ್ಲೂರ್ (Kizhavallor)ಈ ಅವಘಡ ಸಂಭವಿಸಿದೆ.  ಕಾರಿಗೆ ಡಿಕ್ಕಿ ಹೊಡೆ ಬಳಿಕ ಬಸ್‌, ಸಮೀಪದ ಚರ್ಚ್‌ಗೋಡೆಗೆ ಡಿಕ್ಕಿ ಹೊಡೆದಿದೆ.  ಈ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು,  ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ವೇಗವಾಗಿ ಬರುತ್ತಿದ್ದ ಬಸ್‌ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿಗೆ ಡಿಕ್ಕಿ ಹೊಡೆದು ಉಲ್ಟಾ ತಿರುಗಿದ ಬಸ್ ಸಮೀಪದ ಚರ್ಚ್‌ನ ಕಾಂಪೌಂಡ್‌ಗೆ ಗುದ್ದಿ, ಅದನ್ನು ಕ್ಷಣದಲ್ಲಿ ನೆಲಕ್ಕೆ ಕೆಡವಿದೆ. ಮಧ್ಯಾಹ್ನ 1.50 ರ ಸುಮಾರಿಗೆ ಈ ಘಟನೆ ನಡೆದಿದ್ದು, ವರದಿಯ ಪ್ರಕಾರ, ಈ ಅಪಘಾತದಲ್ಲಿ 15 ಜನ ಗಾಯಗೊಂಡಿದ್ದಾರೆ. ಈ ಬಸ್‌ ಪತ್ತನತಿಟ್ಟದಿಂದ ತಿರುವನಂತಪುರಕ್ಕೆ (Thiruvananthapuram)ಕ್ಕೆ ತೆರಳುತ್ತಿದ್ದು, ಕೊಚ್ಚಿ ಪ್ರದೇಶದ ಅಲುವಾದ ಜನರನ್ನು ಕರೆದೊಯ್ಯುತ್ತಿತ್ತು.  ಘಟನೆಯಲ್ಲಿ ಬಸ್‌ ಚಾಲಕ ಹಾಗೂ ಕೆಲವು ಮಹಿಳಾ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೆ ಕೆಲವು ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ