ಶುಕ್ರವಾರ, ಮಾರ್ಚ್ 14, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

`ಕಾಂತಾರ’ ಸಿನಿಮಾ ನೋಡಿ ಆಸ್ಪತ್ರೆಗೆ ದಾಖಲಾಗಿದ್ದ ಸೋನು ಶ್ರೀನಿವಾಸ್ ಗೌಡ

Twitter
Facebook
LinkedIn
WhatsApp
amul milk 500x500 4

ಬಾಕ್ಸಾಫೀಸ್‌ನಲ್ಲಿ `ಕಾಂತಾರ’ (Kantara) ಕೋಟಿ ಕೋಟಿ ಲೂಟಿ ಮಾಡಿ ದಾಖಲೆ ಬರೆದ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ಡಿವೈನ್ ಸ್ಟಾರ್ ಆಗಿ ರಿಷಬ್ ಶೆಟ್ಟಿ (Rishab Shetty) ಮಿಂಚ್ತಿದ್ದಾರೆ. `ಕಾಂತಾರ’ ಸಿನಿಮಾ ಕಥೆಗೆ ಇಡೀ ದೇಶವೇ ಹಾಡಿ ಹೊಗಳುತ್ತಿದೆ. ಹೀಗಿರುವಾಗ `ಕಾಂತಾರ’ ಚಿತ್ರ ನೋಡಿ ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡಗೆ (Sonu Srinivas Gowda) ಜ್ವರ ಬಂದಿತ್ತಂತೆ. ಈ ಹಿಂದಿನ ವಿಚಾರವನ್ನು ಸೋನು ಇದೀಗ ರಿವೀಲ್ ಮಾಡಿದ್ದಾರೆ.

May be an image of 1 person, standing, sunglasses and outdoors

ಸೋಷಿಯಲ್ ಮೀಡಿಯಾ ಸೆನ್ಸೆಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಸೋನು, ಬಿಗ್ ಬಾಸ್ ಒಟಿಟಿಯಲ್ಲಿ (Bigg Boss Kannada Ott) ತಮ್ಮದೇ ಶೈಲಿಯಲ್ಲಿ ಛಾಪು ಮೂಡಿಸಿದ್ದರು. ದೊಡ್ಮನೆಯಿಂದ ಬಂದ ಮೇಲೆ ಮೊದಲು ನೋಡಿದ್ದೆ ಕಾಂತಾರ ಸಿನಿಮಾವಾಗಿದ್ದು, ಚಿತ್ರ ನೋಡಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.

May be an image of 2 people, people standing, jewelry and outdoors

ನನ್ನ ಸ್ನೇಹಿತರು `ಕಾಂತಾರ’ ಸಿನಿಮಾ ನೋಡು ಎಂದು ಹೇಳಿದ್ದರು. ಆಗ ನಾನು ಸಿನಿಮಾ ನೋಡುವ ಆಸಕ್ತಿ ಕಳೆದುಕೊಂಡಿದ್ದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಹೊರ ಹೋಗಲು ನನಗೆ ಮನಸ್ಸು ಇರಲಿಲ್ಲ. ಎಲ್ಲರು ಹೇಳುತ್ತಿದ್ದಾರೆ ಎಂದು ರಾತ್ರಿ ಶೋಗೆ ಅಕ್ಕನನ್ನು ಕರೆದುಕೊಂಡು ಹೋದೆ. ಸಿನಿಮಾ ಪೂರ್ತಿ ಇರುವುದು ಮಂಗಳೂರು ಭಾಷೆಯಲ್ಲಿ, ಆರಂಭದಲ್ಲಿ ಸಿನಿಮಾ ಏನೂ ಅರ್ಥವಾಗುತ್ತಿರಲಿಲ್ಲ. ಹಾಗೆ ಹೋಗ್ತಾ ಹೋಗ್ತಾ ಸಿನಿಮಾ ಸೂಪರ್ ಆಗಿದೆ. ಚಿತ್ರದ ಕೊನೆ 20 ನಿಮಿಷ ಇದ್ಯಲ್ಲ ಗುರು ಸೂಪರ್ ಎಂದು ವಾಹಿನಿಯ ಸಂದರ್ಶನದಲ್ಲಿ ಸೋನು ಮಾತನಾಡಿದ್ದಾರೆ

KANTARA MOVIE CROSSED 85 CRORES IN HINDI BELT BOX-OFFICE - Filmybowl Best Telugu Files News, Telugu Fil Updates, Film News Updates, Tollywood News Updates

`ಕಾಂತಾರಾ’ ಸಿನಿಮಾ ನೋಡಿ ಕೊಂಡು ಮನೆಗೆ ಬಂದು ಮಲಗಿದ್ದಾಗ ರಾತ್ರಿ ನನಗೆ ಚಳಿ ಜ್ವರ ಬಂದಿತ್ತು. ಸ್ವಲ್ಪ ಆರೋಗ್ಯ ಕೆಟ್ಟಿತ್ತು, ಜೊತೆಗೆ ಈ ಚಳಿ ಜ್ವರ ಇದ್ದ ಕಾರಣ ಆಸ್ಪತ್ರೆಗೆ ಹೋದೆ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಬೆಂಗಳೂರಿನಲ್ಲಿ ಒಂದು ವಾರ ಮಂಡ್ಯದಲ್ಲಿ ಒಂದು ವಾರ ಆಸ್ಪತ್ರೆಯಲ್ಲಿದ್ದೆ. ಈ ಚಿತ್ರದ ಕೊನೆ 20 ನಿಮಿಷ ನೋಡಿ ನನಗೆ ಹೇಗೆ ಅನಿಸಿತ್ತು ಅಂದ್ರೆ ಈ ರೀತಿಯ ಸಿನಿಮಾಗಳನ್ನು ಮಾಡಲು ಹೇಗೆ ಸಾಧ್ಯ. ಕೆಲವೊಂದು ಸಿನಿಮಾಗಳಲ್ಲಿ ತುಂಬಾ ಗ್ರಾಫಿಕ್ಸ್ ಮಾಡಿರುತ್ತಾರೆ ಆದರೆ `ಕಾಂತಾರ’ ತುಂಬಾ ಸಿಂಪಲ್ ಮತ್ತು ವಿಭಿನ್ನವಾಗಿ ಮಾಡಿದ್ದಾರೆ ಎಂದು ಚಿತ್ರದ ಬಗ್ಗೆ ಸೋನು ಹಾಡಿ ಹೊಗಳಿದ್ದಾರೆ.

May be an image of 1 person, standing and outdoors

ಬಿಗ್ ಬಾಸ್ ಒಟಿಟಿ ನಂತರ ಈಗ ಸಿನಿಮಾಗಾಗಿ ಸೋನು ಎದುರು ನೋಡ್ತಿದ್ದಾರೆ. ಸೋನು ಅವರದ್ದೇ ಯೂಟ್ಯೂಬ್, ಸೋಷಿಯಲ್ ಮೀಡಿಯಾ ಪ್ರಮೋಷನ್ ಅಂತಾ ಬ್ಯುಸಿಯಾಗಿದ್ದಾರೆ.

May be an image of 1 person, standing and indoor

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist