ಬುಧವಾರ, ಏಪ್ರಿಲ್ 24, 2024
EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!-ಶುಕ್ರವಾರ ಮತದಾನದಂದು ಮತಗಟ್ಟೆಯಲ್ಲಿ ಮೊಬೈಲ್ ಫೋನ್ ಕೊಂಡೊಯ್ಯಲು ನಿಷೇಧ..!-164.53 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಕೊಂಡ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್!-ರಾಮನ ಚಿತ್ರವಿದ್ದ ಪೇಪರ್ ಪ್ಲೇಟ್‌ನಲ್ಲಿ ನಾನ್‌ವೆಜ್‌ ಬಿರಿಯಾನಿ ಮಾರಾಟ; ಆಕ್ರೋಶದ ಬಳಿಕ ಮಾಲೀಕ ಅರೆಸ್ಟ್.!-ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗಮಾಡಿದ್ದಾರೆ; ಮೋದಿಗೆ ಮಾಂಗಲ್ಯದ ಬೆಲೆಯೇ ಗೊತ್ತಿಲ್ಲ: ಪ್ರಿಯಾಂಕಾ ಗಾಂಧಿ-ಬರ್ತ್ ಡೇ ಕೇಕ್ ತಿಂದು ಬಾಲಕಿ ಸಾವು ಪ್ರಕರಣ: ಅಸಲಿ ಕಾರಣ ಬಯಲು.!-ವಿಟ್ಲ: ಬಾವಿಯೊಂದಕ್ಕೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೇ ಕ್ಲಿನಿಂಗ್ ಗೆ ಇಳಿದ ಇಬ್ಬರು ಇಬ್ಬರು ಕಾರ್ಮಿಕರು ಸಾವು..
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಆತ್ಮಹತ್ಯೆಗೆ ಯತ್ನಿಸಿದವನ ರಕ್ಷಿಸಿದ ಫೇಸ್‌ಬುಕ್‌..!

Twitter
Facebook
LinkedIn
WhatsApp
fab 620x342 1

ಗಾಜಿಯಾಬಾದ್‌(ಫೆ.03): ಇದೊಂದು ವಿಚಿತ್ರ ಘಟನೆ. ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಹೇಗೆ ಸದ್ಬಳಕೆ ಮಾಡಿಕೊಂಡು ಜೀವ ರಕ್ಷಿಸಬಹುದು ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಫೇಸ್‌ಬುಕ್‌ನ ಮಾತೃ ಕಂಪನಿ ‘ಮೆಟಾ’ದ್ದೇ ಆದ ಸಾಮಾಜಿಕ ಮಾಧ್ಯಮ ‘ಇನ್‌ಸ್ಟಾಗ್ರಾಂ’ನಲ್ಲಿ ಲೈವ್‌ ಪ್ರಸಾರ ಮಾಡಿ ಆತ್ಮಹತ್ಯೆಗೆ ಯತ್ನಿಸಿದವನನ್ನು ಪೊಲೀಸರಿಗೆ ಮಾಹಿತಿ ನೀಡಿ ಫೇಸ್‌ಬುಕ್‌ ಕಂಪನಿ ರಕ್ಷಿಸಿದೆ. ಯುವಕ ಅಭಯ್‌ ಶುಕ್ಲಾ ಎಂಬಾತನೇ ಆತ್ಮಹತ್ಯೆ ಯತ್ನದಿಂದ ರಕ್ಷಿಸಲ್ಪಟ್ಟ ಯುವಕ. ಈತ ಇನ್‌ಸ್ಟಾಗ್ರಾಂ ಲೈವ್‌ ಆರಂಭಿಸಿದ ಕೇವಲ 13 ನಿಮಿಷದೊಳಗೆ ಪೊಲೀಸರು ಆತನ ಮನೆಗೆ ಆಗಮಿಸಿ ರಕ್ಷಣೆ ಮಾಡಿದ್ದಾರೆ.

ಆಗಿದ್ದೇನು?:

ಅಭಯ್‌ನ ತಂಗಿ ಮದುವೆಗೆಂದು ಅಮ್ಮ 90 ಸಾವಿರ ರು. ಹಣ ಇಟ್ಟಿದ್ದರು. ಆದರೆ ಉದ್ಯಮದಲ್ಲಿ ಹೂಡಿಕೆ ಮಾಡಲು ಅಮ್ಮನಿಂದ ಈ ಹಣವನ್ನು ಪಡೆದಿದ್ದ. ಆದರೆ ಉದ್ಯಮ ಲಾಭ ಮಾಡದೇ ನಷ್ಟ ಅನುಭವಿಸಿದ ಕಾರಣ ಭಯದಿಂದ ಖಿನ್ನತೆಗೆ ಒಳಗಾಗಿದ್ದ. ಸಾವಿಗೆ ಶರಣಾಗಲು ಇನ್‌ಸ್ಟಾಗ್ರಾಂ ಲೈವ್‌ ಮೂಲಕ ತನ್ನ ಅಳಲು ತೋಡಿಕೊಂಡು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ.

ವಿಷಯವು ಫೇಸ್‌ಬುಕ್‌-ಇನ್‌ಸ್ಟಾಗ್ರಾಂ ಮಾತೃಸಂಸ್ಥೆಯಾದ ‘ಮೆಟಾ’ ಗಮನಕ್ಕೆ ಬಂತು. ಮೆಟಾ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿತು. ಆಗ 13 ನಿಮಿಷಗಳಲ್ಲಿ ಯುವಕನ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನ್ನು ರಕ್ಷಿಸಿದ್ದಾರೆ. ನಂತರ ಅವನಿಗೆ ಆತ್ಮಸ್ಥೈರ್ಯ ತುಂಬಿ ಮುಂದೆ ಈ ತಪ್ಪು ಮಾಡದಿರುವಂತೆ ಸೂಚಿಸಿದ್ದಾರೆ. ಅಭಯ್‌ ಕೂಡ ತಪ್ಪು ಒಪ್ಪಿಕೊಂಡು ಮುಂದೆ ಹೀಗೆ ಮಾಡಲ್ಲ ಎಂದಿದ್ದಾನೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ