ಇಂದಿನಿಂದ ಮತ್ತೆ ಅಮುಲ್ ಹಾಲಿನ ಬೆಲೆ ಏರಿಕೆ

ಗಾಂಧಿನಗರ: ಅಮುಲ್ ಬ್ರ‍್ಯಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ಮತ್ತೆ ಹಾಲಿನ ಬೆಲೆ ಏರಿಕೆ ಮಾಡಿದೆ.
ಹಾಲಿನ ಬೆಲೆ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಿದೆ. ದರ ಪರಿಕ್ಷರಣೆಯ ನಂತರ ಅಮುಲ್ ಗೋಲ್ಡ್ ಹಾಲಿನ ಬೆಲೆ ಪ್ರತಿ ಲೀಟರ್‌ಗೆ 66 ರೂ. ಆಗಿದೆ. ಅಮುಲ್ ತಾಜಾ 1 ಲೀಟರ್‌ಗೆ 54 ರೂ. ಹಾಗೂ ಅಮುಲ್ ಎ2 ಎಮ್ಮೆ ಹಾಲಿನ ದರ ಪ್ರತಿ ಲೀಟರ್‌ಗೆ 70 ರೂ.ಗಳಿಗೆ ಏರಿಕೆ ಕಂಡಿದೆ. ಈ ದರ ಫೆ.3ರಿಂದಲೇ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜಿಸಿಎಂಎಂಎಫ್ 2022ರ ಅಕ್ಟೋಬರ್‌ನಲ್ಲಿ ಗೋಲ್ಡ್, ತಾಜಾ ಹಾಗೂ ಶಕ್ತಿ ಬ್ರ್ಯಾಂಡ್‌ಗಳ ಹಾಲಿನ ಬೆಲೆಯನ್ನು 2 ರೂ. ಹೆಚ್ಚಿಸಿತ್ತು.
ಇದೀಗ ಫೆ.3ರಿಂದ ಜಾರಿಗೆ ಬರುವಂತೆ ಅಮುಲ್ ಪ್ಯಾಕೆಟ್ ಹಾಲಿನ ಬೆಲೆಯನ್ನು ಪರಿಷ್ಕರಿಸಿದೆ. ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ ಆಗಿರುವುದು ಹಾಗೂ ದನಗಳ ಮೇವಿನ ವೆಚ್ಚ ಏರಿಕೆಯಾಗಿರುವುದರಿಂದ ಹಾಲಿನ ದರ ಹೆಚ್ಚಿಸಲಾಗಿದೆ ಎಂದು ಅಮಲ್ ಹೇಳಿದೆ.