ಶನಿವಾರ, ಮೇ 11, 2024
ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!-ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು-ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!!-ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಪೊಲೀಸ್ ವಶಕ್ಕೆ; ಏನಿದು ಪ್ರಕರಣ?-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Budget 2023: ಧೂಮಪಾನಿಗಳಿಗೆ ಕಹಿ ಸುದ್ದಿ, ಧೂಮಪಾನ ಮತ್ತಷ್ಟು ದುಬಾರಿ!

Twitter
Facebook
LinkedIn
WhatsApp
1323424 m

ಹೊಸದಿಲ್ಲಿ: ಸಿಗರೇಟ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಮತ್ತೆ ಶಾಕ್ ನೀಡಿದೆ. ಸಿಗರೇಟ್ ಮೇಲಿನ ಅಬಕಾರಿ ಸುಂಕವನ್ನು ಶೇ 16ರಷ್ಟು ಹೆಚ್ಚಿಸಲಾಗಿದೆ. ಇದರಿಂದ ಸಿಗರೇಟ್ ಮತ್ತಷ್ಟು ತುಟ್ಟಿಯಾಗುವುದು ಖಚಿತವಾಗಿದೆ. ಎನ್‌ಸಿಸಿಡಿ (ರಾಷ್ಟ್ರೀಯ ವಿಪತ್ತು ಆಕಸ್ಮಿಕ ತೆರಿಗೆ) ಸುಂಕ ಏರಿಕೆಯಿಂದ ಧೂಮಪಾನಿಗಳ ಜೇಬು ಸುಡುವುದು ಖಾತರಿಯಾಗಿದೆ.

ಕೆಲವು ತಿಂಗಳ ಹಿಂದಷ್ಟೇ ಬಿಡಿ (ಸಿಂಗಲ್) ಸಿಗರೇಟ್ ಮಾರಾಟದ ಮೇಲೆ ನಿಷೇಧ ಹೇರುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು. ಕೇಂದ್ರ ಸರ್ಕಾರಕ್ಕೆ ಸಂಸದೀಯ ಸಮಿತಿಯು ಈ ಸಂಬಂಧ ಸಲಹೆ ನೀಡಿತ್ತು.

ಆಯವ್ಯದಲ್ಲಿ ಸಿಗರೇಟ್ ತೆರಿಗೆ ಏರಿಕೆ ಬಗ್ಗೆ ಪ್ರಕಟಿಸುತ್ತಿದ್ದಂತೆಯೇ ಷೇರು ಪೇಟೆಯಲ್ಲಿ ಸಿಗರೇಟ್ ಕಂಪೆನಿಗಳಿಗೆ ಆಘಾತ ಎದುರಾಗಿದೆ. ಐಟಿಸಿ ಷೇರುಗಳು ಶೇ 3.89ರಷ್ಟು ಕುಸಿತ ಕಂಡಿತ್ತು. ಆದರೆ ಮಧ್ಯಾಹ್ನದ ಬಳಿಕ ಕೊಂಚ ಚೇತರಿಕೆ ಉಂಟಾಗಿದೆ.

ತಂಬಾಕು ಉತ್ಪನ್ನಗಳು ದೇಶದ ಆರೋಗ್ಯ ಕ್ಷೇತ್ರದಲ್ಲಿ ಭಾರಿ ಹೊರೆ ಉಂಟಾಗಲು ಕಾರಣವಾಗುತ್ತಿದೆ. ಹೀಗಾಗಿ ಅವುಗಳ ಮೇಲೆ ಕಡಿವಾಣ ಹಾಕುವುದು ಕೇಂದ್ರ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಮುಖ್ಯವಾಗಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಭಾರತದಲ್ಲಿ ಭಾರಿ ಏರಿಕೆಯಾಗುತ್ತಿದೆ. ಇದಕ್ಕೆ ಬಹುಪಾಲು ಕಾರಣ ತಂಬಾಕು ಉತ್ಪನ್ನಗಳು ಎಂದು ಅಧ್ಯಯನಗಳು ತಿಳಿಸಿವೆ. ಜಿಎಸ್‌ಟಿ ಏರಿಕೆ ಮಾಡಿದ್ದರೂ ಧೂಮಪಾನಿಗಳ ಸಂಖ್ಯೆಯ ಕಡಿಮೆಯಾಗಿಲ್ಲ. ಹೀಗಾಗಿ ಜಿಎಸ್‌ಟಿ ಅಲ್ಲದೆ ಇತರೆ ಮಾರ್ಗಗಳಲ್ಲಿಯೂ ಅದಕ್ಕೆ ತೆರಿಗೆ ವಿಧಿಸುವ ಅವಕಾಶಗಳ ಬಗ್ಗೆ ಸಂಸದೀಯ ಸಮಿತಿ ಕಳೆದ ವರ್ಷ ಶಿಫಾರಸು ಮಾಡಿತ್ತು.

ಭಾರತದಲ್ಲಿ ಪ್ರತಿ ವರ್ಷವೂ ಶೇ 5ಕ್ಕಿಂತ ಹೆಚ್ಚು ಖಾಸಗಿ ಮತ್ತು ಸರ್ಕಾರಿ ಆರೋಗ್ಯ ಸಂಪನ್ಮೂಲಗಳು ಕ್ಯಾನ್ಸರ್ ಸಂಬಂಧಿ ಕಾಯಿಲೆಗಳಿಗೆ ವ್ಯಯವಾಗುತ್ತಿದೆ. 2017- 18ರಲ್ಲಿ ತಂಬಾಕಿನಿಂದ ಉಂಟಾದ ಆರ್ಥಿಕ ಹೊಡೆತವು ಜಿಡಿಪಿ ಮೇಲಿನ ಶೇ 1ರಷ್ಟಿತ್ತು.

ಬುಧವಾರ ಮಂಡಿಸಿದ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಿಗರೇಟ್ ಮೇಲಿನ ಎನ್‌ಸಿಸಿಡಿ ಸುಂಕವನ್ನು ಶೇ 16ರಷ್ಟು ಏರಿಸುವ ಪ್ರಸ್ತಾಪ ಮಾಡಿದ್ದಾರೆ. ಇದು ಜಾರಿಯಾದರೆ ಸಿಗರೇಟ್ ಬೆಲೆಯಲ್ಲಿ ಎಷ್ಟು ಬದಲಾವಣೆ ಆಗಬಹುದು? ವಿವರ ಇಲ್ಲಿದೆ.

ಸಿಗರೇಟ್ ಸರಕು ವಿವರಣೆಪ್ರತಿ 1000 ಸಿಗರೇಟ್‌ಗಳಿಗೆ ದರ (ಹಳೆಯ ಬೆಲೆ)ಪ್ರತಿ 1000 ಸಿಗರೇಟ್ ದರ (ಹೊಸ ಬೆಲೆ)
ಫಿಲ್ಟರ್ ಸಿಗರೇಟ್ ಹೊರತುಪಡಿಸಿ 65 ಎಂಎಂ ಮೀರದ ಉದ್ದ200230
ಫಿಲ್ಟರ್ ಸಿಗರೇಟ್ ಹೊರತುಪಡಿಸಿ 65 ಎಂಎಂಗಿಂತ ಹೆಚ್ಚಿರುವ ಆದರೆ 70 ಎಂಎಂ ಮೀರದ ಉದ್ದ250290
65 ಎಂಎಂ ಉದ್ದ ಮೀರದ ಫಿಲ್ಟರ್ ಸಿಗರೇಟ್440510
65 ಎಂಎಂ ಮೀರುವ ಆದರೆ 70ಎಂಎಂಗಿಂತ ಕಡಿಮೆ ಇರುವ ಫಿಲ್ಟರ್ ಸಿಗರೇಟ್440510
70 ಎಂಎಂಗಿಂತ ಹೆಚ್ಚಿನ ಆದರೆ 75 ಎಂಎಂ ಮೀರದ ಫಿಲ್ಟರ್ ಸಿಗರೇಟ್545630
ಇತರೆ ಸಿಗರೇಟ್‌ಗಳು735850
ತಂಬಾಕು ಉತ್ಪನ್ನಗಳ ಸಿಗರೇಟ್‌ಗಳು600690

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ