ಭಾನುವಾರ, ಮೇ 12, 2024
ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!-ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು-ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!!-ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಪೊಲೀಸ್ ವಶಕ್ಕೆ; ಏನಿದು ಪ್ರಕರಣ?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪೊಲೀಸ್ ಸಮವಸ್ತ್ರ ಧರಿಸಿ ವೃದ್ಧೆಯ ಚಿನ್ನ ಎಗರಿಸಿದ ನಾಲ್ವರು ಕಳ್ಳರ ಬಂಧನ

Twitter
Facebook
LinkedIn
WhatsApp
kochi crime.1.2015125

ಕೊಚ್ಚಿ: ಪೊಲೀಸರ ಸಮವಸ್ತ್ರ ಧರಿಸಿ ವೃದ್ಧೆಯ 7 ಪವನ್ ಚಿನ್ನ ದೋಚಿದ್ದ ಭಟ್ಕಳ ಮೂಲದ ನಾಲ್ವರು ದುಷ್ಕರ್ಮಿಗಳನ್ನು ರಾಜ್ಯ ಪೊಲೀಸರು ಬಂಧಿಸಿದ್ದಾರೆ.

ಇನ್ನೂ ಕೆಲವು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕರಾವಳಿ ಮೂಲದ ಗ್ಯಾಂಗ್ ಕೇರಳವನ್ನೇ ಹೆಚ್ಚು ಕೇಂದ್ರೀಕೃತವಾಗಿಸಿಕೊಂಡಿತ್ತು. ಇಂತಹ ಅನೇಕ ಅಪರಾಧಗಳನ್ನು ಎಸಗಿರುವ ಹಿನ್ನೆಲೆಯನ್ನು ಈ ಗ್ಯಾಂಗ್ ಹೊಂದಿದ್ದು, ತ್ರಿಶೂರ್ ಪೊಲೀಸ್ ತಂಡ ಕೊಚ್ಚಿಯನ್ನು ತಲುಪಿ, ವಿಚಾರಣೆ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿದೆ. ಎಸಿಪಿ ರಾಜಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.

ಕಳೆದ ಜ. 16 ರಂದು ಎರ್ನಾಕುಲಂನ ದಕ್ಷಿಣ ಮೇಲ್ಸೇತುವೆಯ ಬಳಿ ಈ ಗ್ಯಾಂಗ್, ವೃದ್ಧೆಯನ್ನು ತಡೆದು ಬೆಲೆ ಬಾಳುವ ವಸ್ತುಗಳನ್ನು ದೋಚಿತ್ತು. ನಾಲ್ವರು ಖದೀಮರು ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದರು ಮತ್ತು ವೃದ್ಧೆಯನ್ನು ಹೆದರಿಸಿ 7 ಪವನ್ ಚಿನ್ನವನ್ನು ದೋಚಿದ್ದರು.


ಸಂತ್ರಸ್ತ ಮಹಿಳೆಯ ಪ್ರಕಾರ ಈ ಗ್ಯಾಂಗ್ ಮಲಯಾಳಂ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿತ್ತು. ವೃದ್ಧೆ ಒದಗಿಸಿದ ಮೊಬೈಲ್ ಟವರ್ ಲೊಕೇಶನ್ ಮೂಲಕ ದಾಳಿಕೋರರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಇಂತಹ ಹಲವು ಗ್ಯಾಂಗ್’ಗಳು ನಗರದಲ್ಲಿ ಸಕ್ರಿಯವಾಗಿವೆ ಎಂದು ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ