ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಟೀಚರ್‌ ಬಳಿ ಕೇಳಿದ್ದು 500ರೂ. ಕೈಸೇರಿದ್ದು 51 ಲಕ್ಷ ರೂ.! - 48 ಗಂಟೆಗಳಲ್ಲಿ ನಡೆಯಿತು ಮ್ಯಾಜಿಕ್

Twitter
Facebook
LinkedIn
WhatsApp
ಟೀಚರ್‌ ಬಳಿ ಕೇಳಿದ್ದು 500ರೂ. ಕೈಸೇರಿದ್ದು 51 ಲಕ್ಷ ರೂ.! – 48 ಗಂಟೆಗಳಲ್ಲಿ ನಡೆಯಿತು ಮ್ಯಾಜಿಕ್

ತಿರುವನಂತಪುರಂ, ಡಿ 20 : ಕೇರಳದ ಪಾಲಕ್ಕಾಡ್‌ನ‌ ಕೂಟ್ಟನಾಡ್‌ ಎಂಬಲ್ಲಿ ಮಹಿಳೆಯೊಬ್ಬರು ಮಕ್ಕಳಿಗೆ ಒಂದು ಹೊತ್ತಿನ ಊಟ ಹಾಕಲೂ ನನ್ನ ಬಳಿ ಹಣವಿಲ್ಲದಾಗ 500 ರೂ. ಕೊಡಬಹುದೇ ಎಂದು ಮಗನ ಟೀಚರ್‌ ಬಳಿ ಕೇಳಿಕೊಂಡಿದ್ದು, ಇದೀಗ ಅವರ ಖಾತೆಗೆ 48 ಗಂಟೆಗಳಲ್ಲಿ ಬರೋಬ್ಬರಿ 51 ಲಕ್ಷ ರೂ.ಗಳು ಬಂದು ಬಿದ್ದಿದೆ!

ಸುಭದ್ರಾ(46) ಎಂಬವರಿಗೆ ಮೂವರು ಮಕ್ಕಳು. ಕೂಲಿ ಕೆಲಸ ಮಾಡಿ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದ ಪತಿ ರಾಜನ್‌ ಕಳೆದ ಆಗಸ್ಟ್‌ನಲ್ಲಿ ಸಾವನ್ನಪ್ಪಿದ್ದು, ಅದಾದ ಬಳಿಕ ಕುಟುಂಬ ಬೀದಿಗೆ ಬಿತ್ತು. ಮಕ್ಕಳನ್ನು ಸಲಹುವುದೇ ಸುಭದ್ರಾಗೆ ದೊಡ್ಡ ಸವಾಲಾಗಿತ್ತು.

ಇನ್ನು ಅದರಲ್ಲಿಯೂ ಮೂವರು ಮಕ್ಕಳ ಪೈಕಿ ಒಂದು ಮಗುವಿಗೆ ಸೆರೆಬ್ರಲ್‌ ಪಾಲ್ಸಿ ಎಂಬ ರೋಗ ಇದ್ದು, ಹಾಸಿಗೆ ಹಿಡಿದಿರುವ ಆ ಮಗುವನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಇರುವ ಕಾರಣ ಸುಭದ್ರಾ ಕೆಲಸಕ್ಕೂ ಹೋಗಲು ಸಾಧ್ಯವಾಗಿತ್ತಿರಲಿಲ್ಲ.

ಹೀಗಿರುವ ಒಂದು ದಿನ ತನ್ನ ಕಿರಿಯ ಮಗನ ಹಿಂದಿ ಟೀಚರ್‌ ಗಿರಿಜಾ ಹರಿಕುಮಾರ್‌ಗೆ ಕರೆ ಮಾಡಿ, ‘ಮಕ್ಕಳಿಗೆ ಊಟ ಹಾಕಲು 500 ರೂ. ಕೊಡಬಹುದಾ ಎಂದು ಕೇಳಿಕೊಂಡಿದ್ದು, ಕೂಡಲೇ ಶಿಕ್ಷಕಿ ಗಿರಿಜಾ 1,000 ರೂ. ನೀಡಿದ್ದರು. ಕೆಲ ದಿನಗಳ ಅನಂತರ ಸುಭದ್ರಾರ ಮನೆಗೆ ಹೋದಾಗ ಗಿರಿಜಾ ಅವರಿಗೆ ಕುಟುಂಬದ ನೈಜ ಸ್ಥಿತಿ ನೋಡಿದ್ದಾರೆ.

ಸುಭದ್ರಾ ಮನೆಸ್ಥಿತಿ ನೋಡಿದ ಶಿಕ್ಷಕಿ ಗಿರಿಜಾ ಸಾಮಾಜಿಕ ಜಾಲತಾಣದಲ್ಲಿ ಈ ಕುಟುಂಬದ ಕಥೆಯನ್ನು ಬರೆದು, ಸಹಾಯ ಮಾಡಲಿಚ್ಛಿಸುವವರು ಮಾಡಲಿ ಎಂದು ಸುಭದ್ರಾರ ಬ್ಯಾಂಕ್‌ ಖಾತೆ ವಿವರವನ್ನು ಅಪ್‌ಲೋಡ್‌ ಮಾಡಿದ್ದರು. ಆದರೆ ಅಚ್ಚರಿ ಎಂಬಂತೆ ಕೇವಲ 48 ಗಂಟೆಗಳಲ್ಲಿ ಸುಭದ್ರಾರ ಖಾತೆಗೆ ಬರೋಬ್ಬರಿ 51 ಲಕ್ಷ ರೂ. ಬಂದು ಜಮೆಯಾಗಿದ್ದು, ಸಹಕರಿಸಿದ ಎಲ್ಲರಿಗೂ ಟೀಚರ್ ಮತ್ತು ಸುಭದ್ರಾ ಧನ್ಯವಾದ ಅರ್ಪಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ