ಶುಕ್ರವಾರ, ಮೇ 3, 2024
ಅಮೇಥಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಹಿನ್ನೆಲೆ ಏನು?-ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬೆಂಬಲಿಸುವಂತೆ ನೇಹಾ ತಂದೆ ನಿರಂಜನ ಹಿರೇಮಠ ಮನವಿ..!-ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!-ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಗೆ ಕೈ ತಪ್ಪಿದ ಟಿಕೆಟ್ ; ಆದರೂ ಮಗನಿಗೆ ಬಿಜೆಪಿ ಟಿಕೆಟ್ ಘೋಷಣೆ.!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ಚುನಾವಣೆ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತದೆ ; ಸಿ.ಟಿ ರವಿ-ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.!-ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಏಸುರಾಜ್ ಕ್ರಿಶ್ಚಿಯನ್ ಎಂಬ ಆರೋಪ ಸುಳ್ಳು; ರಾಮಲಿಂಗಾ ರೆಡ್ಡಿ-ರಾಮಲಿಂಗೇಶ್ವರ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾವು ಸಂವಿಧಾನ ಬದಲಾವಣೆ ಮಾಡುವುದಿಲ್ಲ; ಬಿಜೆಪಿ ಶಾಸಕ ಶಿವರಾಜ್​ ಪಾಟೀಲ್-ಅಮೇಠಿ ಬದಲು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಹೇಗೆ..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

FIFA World Cup ಪೋಲೆಂಡ್ ಸವಾಲು ಗೆದ್ದ ಅರ್ಜೆಂಟೀನಾ ನಾಕೌಟ್‌ಗೆ ಲಗ್ಗೆ

Twitter
Facebook
LinkedIn
WhatsApp
FIFA World Cup ಪೋಲೆಂಡ್ ಸವಾಲು ಗೆದ್ದ ಅರ್ಜೆಂಟೀನಾ ನಾಕೌಟ್‌ಗೆ ಲಗ್ಗೆ

ದೋಹಾ(ಡಿ.01): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ತನ್ನ ಪಾಲಿನ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಪೋಲೆಂಡ್ ಎದುರು 2-0 ಅಂತರದ ಗೆಲುವು ದಾಖಲಿಸುವ ಮೂಲಕ ಅಗ್ರಸ್ಥಾನಿಯಾಗಿಯೇ ಪ್ರೀ ಕ್ವಾರ್ಟರ್ ಫೈನಲ್‌ಗೇರುವಲ್ಲಿ ಯಶಸ್ವಿಯಾಗಿದೆ. ಇನ್ನು ಸೋಲಿನ ಹೊರತಾಗಿಯೂ ಪೋಲೆಂಡ್ ತಂಡ ಕೂಡಾ ‘ಸಿ’ ಗುಂಪಿನಿಂದ ಎರಡನೇ ತಂಡವಾಗಿ ನಾಕೌಟ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ.

ಸೌದಿ ಅರೇಬಿಯಾ ಎದುರು ಮೆಕ್ಸಿಕೋ ತಂಡವು 2-1 ಅಂತರದ ಗೆಲುವು ದಾಖಲಿಸಿದ ಬೆನ್ನಲ್ಲೇ ಪೋಲೆಂಡ್ ತಂಡವು ಕೂಡಾ ಒಂದು ಗೆಲುವು ಹಾಗೂ ಒಂದು ಡ್ರಾ ಸಹಿತ 4 ಅಂಕಗಳೊಂದಿಗೆ ನಾಕೌಟ್‌ಗೇರುವಲ್ಲಿ ಯಶಸ್ವಿಯಾಗಿದೆ. ಮೆಕ್ಸಿಕೊ ಕೂಡಾ 4 ಅಂಕಗಳು ಗಳಿಸಿತ್ತಾದರೂ ಮೆಕ್ಸಿಕೋಗಿಂತ ಪೋಲೆಂಡ್ ಒಂದು ಹೆಚ್ಚಿಗೆ ಗೋಲು ದಾಖಲಿಸಿದ್ದರಿಂದ ಜೆಸ್ಲಾವ್ ಮೆಕ್ನಿವಿಜ್ ನೇತೃತ್ವದ ಪೋಲೆಂಡ್ ತಂಡವು ನಾಕೌಟ್‌ ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ.

ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ಎದುರು ಆಘಾತಕಾರಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತ್ತು. ಹೀಗಾಗಿ ಪೋಲೆಂಡ್ ಎದುರಿನ ಪಂದ್ಯವು ಅರ್ಜೆಂಟೀನಾ ಪಾಲಿಗೆ ನಾಕೌಟ್ ಪ್ರವೇಶಿಸುವ ದೃಷ್ಟಿಯಿಂದ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿತ್ತು. ಆರಂಭದಿಂದಲೇ ಅರ್ಜೆಂಟೀನಾ ತಂಡವು ಚೆಂಡಿನ ಮೇಲೆ ಹಿಡಿತ ಸಾಧಿಸಿತಾದರೂ, ಮೊದಲಾರ್ಧದಲ್ಲಿ ಗೋಲು ಬಾರಿಸಲು ಯಶಸ್ವಿಯಾಗಲಿಲ್ಲ. ಆದರೆ ದ್ವಿತಿಯಾರ್ಧದ ಮೊದಲ ನಿಮಿಷದಲ್ಲೇ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ಸ್‌ ಆಕರ್ಷಕ ಗೋಲು ಬಾರಿಸುವ ಮೂಲಕ ಅರ್ಜೆಂಟೀನಾ ಪಡೆಯಲ್ಲಿ ಸಂತಸದ ಅಲೆ ಮೂಡುವಂತೆ ಮಾಡಿದರು. ಇನ್ನು ಇದಾದ 20 ನಿಮಿಷಗಳ ಬಳಿಕ ಜೂಲಿಯನ್ ಅಲ್ವರೆಜ್‌ ಮಿಂಚಿನ ಗೋಲು ಬಾರಿಸುವ ಮೂಲಕ ಅರ್ಜೆಂಟೀನಾ ತಂಡವು 2-0 ಮುನ್ನಡೆ ಸಾಧಿಸಲು ನೆರವಾದರು. ಇನ್ನು ಪೋಲೆಂಡ್ ತಂಡವು ಗೋಲು ಬಾರಿಸುವ ಯತ್ನಕ್ಕೆ ಅರ್ಜೆಂಟೀನಾ ತಂಡವು ಅವಕಾಶ ನೀಡಲಿಲ್ಲ.

ಅರ್ಜೆಂಟೀನಾ ತಂಡವು ಮೊದಲಾರ್ಧದಲ್ಲೇ ಗೋಲು ಬಾರಿಸಿ ಮುನ್ನಡೆ ಸಾಧಿಸುವ ಯತ್ನವನ್ನು ಪೋಲೆಂಡ್‌ ಗೋಲ್‌ ಕೀಪರ್ ವಿಫಲಗೊಳಿಸಿದರು. ಪೋಲೆಂಡ್ ಗೋಲ್ ಕೀಪರ್ ವೊಚೆಕ್ ಸ್ಟ್ಯಾನ್ಸೆ ಅದ್ಭುತ ಗೋಲು ಕೀಪಿಂಗ್ ಮಾಡುವ ಮೂಲಕ ಗಮನ ಸೆಳೆದರು. ಲಿಯೋನೆಲ್ ಮೆಸ್ಸಿಗೆ ಸಿಕ್ಕಿದ್ದ ಪೆನಾಲ್ಟಿ ಗೋಲು ಅವಕಾಶವನ್ನು ವಿಫಲಗೊಳಿಸುವಲ್ಲಿಯೂ ಪೋಲೆಂಡ್ ಗೋಲ್ ಕೀಪರ್ ವೊಚೆಕ್ ಸ್ಟ್ಯಾನ್ಸೆ ಯಶಸ್ವಿಯಾದರು. ಅಂದಹಾಗೆ ಇದು ಮೆಸ್ಸಿ ಫುಟ್ಬಾಲ್ ಜೀವನದಲ್ಲಿ 31ನೇ ಬಾರಿಗೆ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ವಿಫಲವಾಗಿದ್ದು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ