ಗುರುವಾರ, ಮೇ 2, 2024
ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!-ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?-ಪ್ರಜ್ವಲ್ ರೇವಣ್ಣಗೆ ಕಠೋರ ಶಿಕ್ಷೆ ನೀಡಿ: ನಾವು ಬೆಂಬಲಿಸುತ್ತೇವೆ; ಅಮಿತ್ ಶಾ-ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೆಎಸ್‌ಆರ್‌ಟಿಸಿ ಹೊಸ ಬಸ್‌ಗಳಿಗೆ ಸೂಕ್ತ ಬ್ರಾಂಡ್‌ ನೇಮ್‌ ನೀಡಿ: 25,000 ಬಹುಮಾನ ಗೆಲ್ಲಿ

Twitter
Facebook
LinkedIn
WhatsApp
ಕೆಎಸ್‌ಆರ್‌ಟಿಸಿ ಹೊಸ ಬಸ್‌ಗಳಿಗೆ ಸೂಕ್ತ ಬ್ರಾಂಡ್‌ ನೇಮ್‌ ನೀಡಿ: 25,000 ಬಹುಮಾನ ಗೆಲ್ಲಿ

ಬೆಂಗಳೂರು(ನ.30):  ಕೆಎಸ್‌ಆರ್‌ಟಿಸಿ ನೂತನವಾಗಿ ಆರಂಭಿಸುತ್ತಿರುವ ವೋಲ್ವೊ ಮಲ್ಟಿಆಕ್ಸಲ್‌ ಸ್ಲೀಪರ್‌ ಬಸ್‌ ಮತ್ತು ಎಲೆಕ್ಟ್ರಿಕ್‌ ಬಸ್‌ಗಳಿಗೆ ಸೂಕ್ತ ಬ್ರಾಂಡ್‌ ನೇಮ್‌, ಟ್ಯಾಗ್‌ ಲೈನ್‌ ಹಾಗೂ ಗ್ರಾಫಿಕ್ಸ್‌ ವಿನ್ಯಾಸವನ್ನು ಸಾರ್ವಜನಿಕರಿಂದ ಆಹ್ವಾನಿಸಿದೆ.

ಪ್ರಯಾಣಿಕರಿಗೆ ಅತ್ಯುನ್ನತ ಶೇಣಿಯ ಪ್ರವಾಸ ಅನುಭವ ನೀಡುವ ಉದ್ದೇಶದಿಂದ ಬಿಎಸ್‌ 4 – 9600 ವೋಲ್ವೊ ಮಲ್ಟಿಆಕ್ಸಲ್‌ ಸ್ಲೀಪರ್‌ ಬಸ್‌ ಮತ್ತು ಒಲೆಕ್ಟ್ರಾ ಎಲೆಕ್ಟ್ರಿಕ್‌ ಬಸ್‌ ಸೇವೆ ಆರಂಭಿಸಲು ಮುಂದಾಗಿದೆ. ಈ ಬಸ್‌ಗಳಿಗೆ ಬ್ರಾಂಡ್‌ ನೇಮ್‌, ಟ್ಯಾಗ್‌ ಲೈನ್‌ ಹಾಗೂ ಗ್ರಾಫಿಕ್ಸ್‌ ವಿನ್ಯಾಸವನ್ನು ಸಾರ್ವಜನಿಕರಿಂದ ಆಹ್ವಾನಿಸಲಾಗಿದೆ. 

ಉತ್ತಮ ಟ್ಯಾಗ್‌ಲೈನ್‌ ನೊಂದಿಗೆ ಬ್ರಾಂಡ್‌ ಹೆಸರು ಸೂಚಿಸಿದರೆ ಪ್ರತಿ ಬಸ್‌ಗೆ 10 ಸಾವಿರ ರು., ಉತ್ತಮ ಗ್ರಾಫಿಕ್ಸ್‌ಗೆ 25 ಸಾವಿರ ರು. ನಗದು ಬಹುಮಾನ ನೀಡಲಾಗುವುದು .ಡಿಸೆಂಬರ್‌ 5ರೊಳಗೆ [email protected] ವಿಳಾಸಕ್ಕೆ ಇ ಮೇಲ್‌ ಕಳಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ