ಶುಕ್ರವಾರ, ಮೇ 3, 2024
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಹೇಗೆ..?-ಮಹಿಳೆ ಬಡ ಮತ್ತು ಹಸಿದಿರುವಾಗ ಅನ್ನ ಹಾಕಿ, ನಿಮ್ಮ ಅದನ್ನಲ್ಲ; ಪ್ರಜ್ವಲ್ ರೇವಣ್ಣ ವಿರುದ್ಧ ನಟಿ ಪೋಸ್ಟ್ ವೈರಲ್.!-ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!-ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೋವಿಡ್‌ ಉಲ್ಬಣ: ಚೀನಾ ಆಸ್ಪತ್ರೆಗಳು ಹೌಸ್‌ ಫುಲ್‌..!

Twitter
Facebook
LinkedIn
WhatsApp
ಕೋವಿಡ್‌ ಉಲ್ಬಣ: ಚೀನಾ ಆಸ್ಪತ್ರೆಗಳು ಹೌಸ್‌ ಫುಲ್‌..!

ಬೀಜಿಂಗ್‌: ಕಳೆದ ಕೆಲ ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಹೊಸ ಕೋವಿಡ್‌ ಪ್ರಕರಣಗಳು (COVID Cases) ದಾಖಲಾಗುತ್ತಿರುವ ಚೀನಾದಲ್ಲಿ (China), ಪರಿಸ್ಥಿತಿ ನಿರ್ವಹಣದಲ್ಲಿ ಸರ್ಕಾರ (Government) ಭಾರೀ ವೈಫಲ್ಯ ಕಂಡಿದೆ. ದೇಶ ಇದೀಗ ಆರೋಗ್ಯ ತುರ್ತುಪರಿಸ್ಥಿತಿ (Health Emergency) ಎದುರಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಫೈನಾನ್ಷಿಯಲ್‌ ಟೈಮ್ಸ್‌ ವರದಿ ಮಾಡಿದೆ. ಈ ನಡುವೆ ಸತತ 5ನೇ ದಿನವೂ ಚೀನಾದಲ್ಲಿ ದಾಖಲೆಯ 40,000 ಪ್ರಕರಣಗಳು ದಾಖಲಾಗಿದ್ದು, ಸರ್ಕಾರ ಮತ್ತು ಜನರಲ್ಲಿ (People) ಆತಂಕ ಹುಟ್ಟಿಸಿದೆ. ಮತ್ತೊಂದೆಡೆ ಕೋವಿಡ್‌ ಪರಿಸ್ಥಿತಿ ನಿರ್ವಹಣೆಯಲ್ಲಿ ವೈಫಲ್ಯ ಮತ್ತು ಕಠಿಣ ಕ್ವಾರಂಟೈನ್‌ (Quarantine) ನಿಯಮ ಜಾರಿಗೊಳಿಸಿರುವ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಮತ್ತು ಕಮ್ಯುನಿಸ್ಟ್‌ ಸರ್ಕಾರದ (Communist Government) ವಿರುದ್ಧ ದೇಶದ ಹಲವೆಡೆ ಸೋಮವಾರವೂ ಪ್ರತಿಭಟನೆ (Protest) ನಡೆಸಲಾಗಿದ್ದು, ಅಧಿಕಾರದಿಂದ ಕೆಳಗಿಳಿಯುವಂತೆ ಆಗ್ರಹಿಸಲಾಗಿದೆ.

ಪರಿಸ್ಥಿತಿ ಗಂಭೀರ:
ದೇಶದಲ್ಲಿ ದಿನೇ ದಿನೇ ಕೋವಿಡ್‌ ಪ್ರಕರಣ ಹೆಚ್ಚುತ್ತಿರುವುದು ಸ್ಥಳೀಯರ ಆತಂಕ ಹೆಚ್ಚಿಸಿದೆ. ಇದರ ನಡುವೆಯೇ ಹಲವು ಪ್ರದೇಶಗಳಲ್ಲಿ ಕೋವಿಡ್‌ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಬೆಡ್‌, ಆಕ್ಸಿಜನ್‌ ಸಿಲಿಂಡರ್‌ ಮತ್ತು ವೆಂಟಿಲೇಟರ್‌ಗಳ ಕೊರತೆ ಎದುರಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಸೋಂಕು ನಿರ್ವಹಣೆಯಲ್ಲಿ ಸರ್ಕಾರದ ಈ ವೈಫಲ್ಯದ ಮನಗಂಡಿರುವ ಜನರು ಮುಂಜಾಗ್ರತಾ ಕ್ರಮವಾಗಿ ಸ್ವತಃ ಮನೆಯಲ್ಲೇ ಅಗತ್ಯ ವ್ಯವಸ್ಥೆ ಕಲ್ಪಿಸಿಕೊಳ್ಳಲು ಮುಂದಾಗಿದ್ದಾರೆ.

ಪರಿಣಾಮ ನವೆಂಬರ್‌ 11 ರಿಂದ ಕೋವಿಡ್‌ ಚಿಕಿತ್ಸೆ ನೀಡುವ ಸಾಧನಗಳ ಮಾರಾಟದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಆಕ್ಸಿಮೀಟರ್‌, ಆಕ್ಸಿಜನ್‌ ಸಿಲಿಂಡರ್‌ ಮತ್ತು ವೆಂಟಿಲೇಟರ್‌ ಖರೀದಿಗೆ ಜನ ಮುಂದಾಗಿದ್ದು, ಇವುಗಳ ಮಾರಾಟದಲ್ಲಿ 90 ಪಟ್ಟು ಹೆಚ್ಚಳ ಕಂಡುಬಂದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈ ಉಪಕರಣಗಳ ಕೊರತೆ ಎದುರಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಜೊತೆಗೆ ಒಂದು ವೇಳೆ ಕೋವಿಡ್‌ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ನೀತಿ ಕೈಬಿಟ್ಟರೆ ಕೋವಿಡ್‌ ಸ್ಫೋಟಗೊಂಡು ಸುಮಾರು 1.2 ಮನೆಗಳಲ್ಲಿ ವೆಂಟಿಲೇಟರ್‌ ಹಾಗೂ ಆಕ್ಸಿಜನ್‌ ಮಶೀನ್‌ಗಳ ಅಗತ್ಯ ಬೀಳಲಿದೆ ಎಂದು ವರದಿಗಳು ಹೇಳಿವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ