6,000 ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿದ ‘ಫಿಲಿಪ್ಸ್
Twitter
Facebook
LinkedIn
WhatsApp
ನವದೆಹಲಿ: 6,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಡಚ್ ಆರೋಗ್ಯ ತಂತ್ರಜ್ಞಾನ ಸಂಸ್ಥೆ ‘ಫಿಲಿಪ್ಸ್’ ಇಂದು ಘೋಷಿಸಿದೆ.‘ಸ್ಲೀಪ್‌ಆಪ್ನಿಯಾ’ ಎನ್ನಲಾಗುವ ನಿದ್ರೆಗೆ ಸಂಬಂಧಿಸಿದ ತೊಂದರೆಗೆ ಪರಿಹಾರವಾಗಿ ಫಿಲಿಪ್ಸ್ ಇತ್ತೀಚೆಗೆ ವೆಂಟಿಲೇಟರ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿತ್ತು.
ಅದರಲ್ಲಿ ಬಳಸಲಾಗುವ ಫೋಮ್ (ನೊರೆಯಂಥ ವಸ್ತು) ವಿಷಕಾರಿ ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಲಕ್ಷಾಂತರ ವೆಂಟಿಲೇಟರ್‌ಗಳನ್ನು ಹಿಂದಕ್ಕೆ ಪಡೆದಿದೆ. ಇದರ ನಷ್ಟವನ್ನು ತುಂಬಿಕೊಳ್ಳಲು ಸಂಸ್ಥೆಯ ಉದ್ಯೋಗಿಗಳನ್ನು ತೆಗೆಯುವ ನಿರ್ಧಾರಕ್ಕೆ ಬಂದಿದೆ.ಅರ್ಧದಷ್ಟು ಉದ್ಯೋಗ ಕಡಿತವನ್ನು ಈ ವರ್ಷ ಮಾಡಲಾಗುವುದು.
ಉಳಿದ ಅರ್ಧ ಉದ್ಯೋಗಿಗಳನ್ನು 2025ರ ವೇಳೆಗೆ ಕೆಲಸದಿಂದ ತೆಗೆಯಲಾಗುವುದು ಎಂದು ಕಂಪನಿ ಹೇಳಿದೆ. ತನ್ನ ಲಾಭದಾಯಕತೆಯನ್ನು ಮರಳಿ ಸಾಧಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಕಂಪನಿ ಈ ನಿರ್ಧಾರಕ್ಕೆ ಬಂದಿದೆ.