45ರ ವಯಸ್ಸಿಗೆ ಕೊನೆಯುಸಿರೆಳೆದ ಅಮೆರಿಕಾದ ಜನಪ್ರಿಯ ನಟಿ
ವಾಷಿಂಗ್ಟನ್: ಅಮೆರಿಕಾ ಟಿವಿ ಲೋಕದ ಜನಪ್ರಿಯ ನಟಿ ಅನ್ನಿ ವರ್ಶಿಂಗ್ (45) ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ನಟಿಯ ನಿಧನದ ಸುದ್ದಿಯನ್ನು ಕ್ಲೌಡ್ ಫಂಡಿಂಗ್ ಸಂಸ್ಥೆ ʼಗೋ ಫಂಡ್ ಮಿʼ ಹಾಗೂ ನಟಿಯ ಪತಿ ಸ್ಟೀಫನ್ ಫುಲ್ ಅಧಿಕೃತವಾಗಿ ಹೇಳಿದ್ದಾರೆ.
2020ರಲ್ಲಿ 45 ನೇ ವಯಸ್ಸಿನ ನಟಿ ಅನ್ನಿ ವರ್ಶಿಂಗ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಯಾವ ಮಾದರಿಯ ಕ್ಯಾನ್ಸರ್ ಎನ್ನುವುದು ಇದುವರೆಗೆ ತಿಳಿದು ಬಂದಿಲ್ಲ. ಕ್ಯಾನ್ಸರ್ ಪರಿಣಾಮ ನಟಿ ಕೊನೆಯುಸಿರೆಳೆದಿದ್ದಾರೆ.
2022ರಲ್ಲಿ ಟಿವಿ ಲೋಕಕ್ಕೆ ಕಾಲಿಟ್ಟ ಅನ್ನಿ ವರ್ಶಿಂಗ್ “ಸ್ಟಾರ್ ಟ್ರೆಕ್: ಎಂಟರ್‌ಪ್ರೈಸ್” ( Star Trek: Enterprise) ಎನ್ನುವ ಟಿವಿ ಸಿರೀಸ್ ನಲ್ಲಿ ಕಾಣಿಸಿಕೊಂಡು, 2009ರಲ್ಲಿ ಬಂದ” 24” ಟಿವಿ ಸಿರೀಸ್ ನಿಂದ ಜನಪ್ರಿಯತೆ ಪಡೆದುಕೊಂಡಿದ್ದರು. ದಿ ವ್ಯಾಂಪೈರ್ ಡೈರೀಸ್,’ ಮಾರ್ವೆಲ್‌ನ ‘ರನ್‌ಅವೇಸ್ ನಲ್ಲೂ ಕಾಣಿಸಿಕೊಂಡಿದ್ದರು.
“ದಿ ಲಾಸ್ಟ್ ಆಫ್ ಅಸ್” ಗೇಮ್ ಆಧಾರಿತ ಸಿರೀಸ್ ನಲ್ಲಿ ಟೆಸ್ ಪಾತ್ರವನ್ನು ಮಾಡಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ನಟಿಯ ನಿಧನಕ್ಕೆ ಹಾಲಿವುಡ್ ಲೋಕ ಕಂಬನಿ ಮಿಡಿದಿದೆ.