ರಾಣೆಬೆನ್ನೂರು ಶಹರ ಠಾಣೆಯ (Ranebennur Police Station) ಪಿಎಸ್ಐ ಸುನೀಲ ತೇಲಿ, ವಾಹನ ಚಾಲಕ ಸಚಿನ್ ಆರೋಪಿಗಳಾಗಿದ್ದಾರೆ.
40 ಸಾವಿರ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ PSI
Twitter
Facebook
LinkedIn
WhatsApp
ಹಾವೇರಿ: 40 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ರಾಣೇಬೆನ್ನೂರು (Ranebennur) ನಗರ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಪಿಎಸ್ಐ ವಾಹನ ಚಾಲಕ ಇಬ್ಬರೂ ಲೋಕಾಯುಕ್ತ (Karnataka Lokayukta) ಬಲೆ ಬಿದ್ದಿದ್ದಾರೆ.
ರಾಣೇಬೆನ್ನೂರು ನಗರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಮನೆ ಬಾಡಿಗೆ ವಸೂಲಿ ಮಾಡಿಕೊಡಲು 50 ಸಾವಿರ ರೂ. ಬೇಡಿಕೆಯಿಟ್ಟಿದ್ದರು. ಫೀರೋಜಾ ಎಂಬ ವ್ಯಕ್ತಿ 40 ಸಾವಿರ ರೂ. ಹಣವನ್ನ ಟೀ ಸ್ಟಾಲ್ನಲ್ಲಿ ಕೊಟ್ಟು ಹೋಗಿದ್ದರು. ಈ ಹಣವನ್ನ ಚಾಲಕ ತೆಗೆದುಕೊಂಡು ಪಿಎಸ್ಐಗೆ ಕೊಡುತ್ತಿದ್ದ ವೇಳೆ ರೇಡ್ ಹ್ಯಾಂಡ್ಆಗಿ ಸಿಕ್ಕಿ ಬಿದ್ದಿದ್ದಾರೆ.
ಹಾವೇರಿ ಲೋಕಾಯುಕ್ತ ಅಧಿಕಾರಿಗಳ ನೇತ್ರತ್ವದಲ್ಲಿ ದಾಳಿ ನಡೆಸಿದ್ದು, ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ.