![ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್](https://urtv24.com/wp-content/uploads/2024/12/WhatsApp-Image-2024-12-12-at-22.37.00-6787e1d3-300x169.jpg)
ಕನ್ನಡದ ವಿಕ್ರಾಂತ್ ರೋಣ ಸಿನಿಮಾದ ‘ರಾ ರಾ ರಕ್ಕಮ್ಮ’ ಹಾಡಿಗೆ ಸೊಂಟ ಬಳುಕಿಸಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ, ಬಾಲಿವುಡ್ ನಟಿ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಇಬ್ಬರೂ ನಟಿಯರು ಸುಕೇಶ್ ಚಂದ್ರಶೇಖರ್ ವಿರುದ್ಧದದ 200 ಕೋಟಿ ವಂಚನೆ ಪ್ರಕರಣದ ಆರೋಪಿಗಳಾಗಿದ್ದಾರೆ ಎನ್ನುವುದು ವಿಶೇಷ. ಇದೇ ಕಾರಣಕ್ಕಾಗಿಯೇ ಜಾಕ್ವೆಲಿನ್ ಮೇಲೆ ನೋರಾ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸುಕೇಶ್ ವಂಚನೆ ಪ್ರಕರಣದಲ್ಲಿ ಈ ನಟಿಯರ ಹೆಸರು ಕೇಳಿ ಬಂದಿತ್ತು. ಜಾರಿ ನಿರ್ದೇಶನಾಲಯ ಕೂಡ ಇಬ್ಬರನ್ನೂ ಕರೆಯಿಸಿ ವಿಚಾರಣೆಗೆ ಒಳಪಡಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೋರಾ ಫತೇಹಿ ವಿರುದ್ಧ ಜಾಕ್ವೆಲಿನ್ ಮಾನಹಾನಿ ಆಗುವಂತಹ ಮತ್ತು ದುರುದ್ದೇಶಪೂರಿತ ಕಾರಣಗಳನ್ನು ನೀಡುತ್ತಿದ್ದಾರಂತೆ. ಅದರಿಂದಾಗಿ ತಮಗೆ ಮಾನ ಹಾನಿ ಆಗುತ್ತಿದೆ ಎಂದು ನೋರಾ ಆರೋಪಿಸಿದ್ದಾರೆ.
ಈ ಇಬ್ಬರೂ ನಟಿಯರು ಮೂಲತಃ ವಿದೇಶಿಗರಾಗಿದ್ದು, ಬಾಲಿವುಡ್ ನಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಇವರು ಸುಕೇಶ್ ಸಂಪರ್ಕಕ್ಕೂ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಲವು ಬಾರಿ ಈ ನಟಿಯರನ್ನು ಜಾರಿ ನಿರ್ದೇಶನಾಲಯವು ವಿಚಾರಣೆಗಾಗಿ ಕರೆದಿದೆ. ಆದರೆ, ಈ ಕೇಸ್ ಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ನಟಿಯರು ಹೇಳಿಕೆ ಕೊಡುತ್ತಲೇ ಬಂದಿದ್ದಾರೆ. ಸುಕೇಶ್ ತಮಗೆ ನೇರವಾಗಿ ಪರಿಚಯವೇ ಇಲ್ಲವೆಂದು ನೋರಾ ಹೇಳಿದ್ದರೆ, ಅವನಿಂದ ಯಾವುದೇ ಉಡುಗೊರೆ ಪಡೆದಿಲ್ಲ ಎಂದು ಜಾಕ್ವೆಲಿನ್ ವಾದಿಸಿದ್ದಾರೆ.
ಈ ಇಬ್ಬರೂ ನಟಿಯರು ಏನೇ ಹೇಳಿದರೂ, ಈಗಾಗಲೇ ಕೋರ್ಟ್ ಕಟಕಟೆಯಲ್ಲಿ ನಿಂತು ಬಂದಿದ್ದಾರೆ. ಜಾರಿ ನಿರ್ದೇಶನಾಲಯವು ಇಬ್ಬರ ಮೇಲೂ ಗುರುತರ ಆರೋಪ ಮಾಡಿ ಜಾರ್ಜ್ ಶೀಟ್ ಕೂಡ ಸಲ್ಲಿಸಲಾಗಿದೆ. ನೂರಾರು ಕೋಟಿಯ ವಂಚನೆಯ ಪ್ರಕರಣ ಇದಾಗಿದ್ದರಿಂದ, ಗಂಭೀರವಾಗಿ ಈ ಪ್ರಕರಣವನ್ನು ತಗೆದುಕೊಳ್ಳಲಾಗಿದೆ. ಇಬ್ಬರೂ ಇಕ್ಕಟ್ಟಿಗೆ ಸಿಲುಕಿದ್ದರೂ, ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿ, ಬೇರೆ ಕಾರಣಗಳಿಂದಾಗಿ ಮತ್ತೆ ಕೋರ್ಟ್ ಮೆಟ್ಟಿಲು ಹತ್ತುವಂತಾಗಿದೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist