ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮುಂದುವರಿದ ಮಾಂಡಸ್ ಅಬ್ಬರ: ಇನ್ನೂ 3 ದಿನ ಮಳೆ, ಚಳಿ – ರಾಜ್ಯದ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

Twitter
Facebook
LinkedIn
WhatsApp
ಮುಂದುವರಿದ ಮಾಂಡಸ್ ಅಬ್ಬರ: ಇನ್ನೂ 3 ದಿನ ಮಳೆ, ಚಳಿ – ರಾಜ್ಯದ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರು: ಮಾಂಡಸ್ ಚಂಡಮಾರುತದ (Cyclone Mandous) ರೌದ್ರವತಾರ ಜೋರಾಗಿದೆ. ವಾತಾವರಣದ ಬದಲಾವಣೆಗೆ ರಾಜ್ಯದ ಜನ ಬೆಚ್ಚಿಬಿದ್ದಿದ್ದಾರೆ. ಈಗ ಮತ್ತೆ ಮಳೆಯ ಮುನ್ಸೂಚನೆಯನ್ನ ಹವಮಾನ ಇಲಾಖೆ ನೀಡಿದೆ. ಬೆಂಗಳೂರು (Bengaluru Rains) ಸೇರಿದಂತೆ ರಾಜ್ಯದ ಹಲವೆಡೆ ಇನ್ನೂ ಮೂರು ದಿನ ಚಳಿ ಜೊತೆಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ ರಾಜ್ಯದ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮೋಡಕವಿದ ವಾತಾವರಣ, ತುಂತುರು ಮಳೆ, ವಿಪರೀತ ಚಳಿಯ ವಾತಾವರಣ ಇದೆ. ಮಾಂಡಸ್ ಚಂಡಮಾರುತದ ಎಫೆಕ್ಟ್ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳಿಗೆ ತಟ್ಟಿದ್ದು, ಜನ ತತ್ತರಿಸಿ ಹೋಗಿದ್ದಾರೆ. ವೀಕೆಂಡ್ ಮಸ್ತಿಗೆ ಬ್ರೇಕ್ ಹಾಕಿರೋದಲ್ಲದೇ ಇದರ ಕಾಟ ಮುಂದುವರಿಯುವ ಎಚ್ಚರಿಕೆಯನ್ನ ಹವಾಮಾನ ಇಲಾಖೆ ನೀಡಿದೆ.

ಡಿಸೆಂಬರ್ 15ರವರೆಗೂ ಮೋಡ ಕವಿದ ವಾತಾವರಣ, ತುಂತುರು ಮಳೆ ಮತ್ತು ಚಳಿ ಇರುತ್ತೆ ಅಂತಾ ಹವಾಮಾನ ಇಲಾಖೆ ಹೈ ಅಲರ್ಟ್ ಅನ್ನು ನೀಡಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 14 ರವರೆಗೂ ಮಳೆ ಜೊತೆಗೆ ಮೋಡಕವಿದ ವಾತಾವರಣ ಇರೋ ಬಗ್ಗೆ ಕೂಡ ಎಚ್ಚರಿಸಿದೆ. ಇದಲ್ಲದೇ ಕರಾವಳಿ ಭಾಗದ ಮೀನುಗಾರರಿಗೆ ಡಿ. 15 ರವರೆಗೆ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲೂ ಬಿಟ್ಟು ಬಿಡದೆ ಮಳೆಯಾಗುವ ವರದಿಯನ್ನ ಹವಾಮಾನ ಇಲಾಖೆ ನೀಡಿದೆ.

2016 ವಾದ್ರಾ ಚಂಡಮಾರುತ ವೇಳೆ ಬೆಂಗಳೂರಿನಲ್ಲಿ ಗರಿಷ್ಟ ತಾಪಮಾನ ಅತ್ಯಂತ ಕಡಿಮೆ ದಾಖಲಾಗಿತ್ತು. ಸಾಮಾನ್ಯವಾಗಿ ಚಳಿಗಾಲದ ಡಿಸೆಂಬರ್ ತಿಂಗಳು ಗರಿಷ್ಟ 25-27 ಡಿಗ್ರಿ ಇರುತ್ತೆ. ಮಾಂಡಸ್ ಚಂಡಮಾರುತ ಪರಿಣಾಮ ತಾಪಮಾನ ಇಳಿಕೆಯಾಗಿದೆ.‌ ಬಂಗಾಳ ಉಪಸಾಗರ ವಾಯುಭಾರ ಕುಸಿತದ ಪರಿಣಾಮ ಕಳೆದೆರಡು ದಿನಗಳಿಂದ ಗರಿಷ್ಟ ತಾಪಮಾನ ಇಳಿಮುಖದ ಜೊತೆಗೆ ಚಳಿ ವಾತಾವರಣ ಮೂರು ದಿನ ಮುಂದುವರಿಕೆಯಾಗಲಿದ್ದು, ಕನಿಷ್ಠ ತಾಪಮಾನ ಕೂಡ ಇಳಿಕೆಯ ಎಚ್ಚರಿಕೆಯನ್ನ ನೀಡಿದೆ. ಇನ್ನೊಂದು ವಾರ ಕನಿಷ್ಟ ಗರಿಷ್ಟ ತಾಪಮಾನ ಇರಲಿದೆ ಅಂತಾ ವರದಿಯಾಗಿದಡೆ. 

ಚಂಡಮಾರುತದ ಪರಿಣಾಮದಿಂದಾಗಿ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಶುರುವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಒಂದಡೆ ವ್ಯಾಪಾರವಿಲ್ಲದೇ ಅಂಗಡಿಗಳು ಖಾಲಿ ಖಾಲಿಯಾಗಿವೆ. ಮತ್ತೊಂದಡೆ ವಿಪರೀತ ಚಳಿ, ಜಿಟಿಜಿಟಿ ಮಳೆಗೆ ಮನೆಯಿಂದ ಹೊರಬಾರದೇ ಜನ ಮನೆಯಲ್ಲೇ ಉಳಿಯುವಂತಾಗಿದೆ. ನಿನ್ನೆ ವೀಕೆಂಡ್ ಇದ್ರೂ ಮಾಲ್‌ಗಳು ಸೇರಿ ಇತರೆ ಶಾಪಿಂಗ್ ಸ್ಪಾಟ್‌ಗಳು ಖಾಲಿ ಖಾಲಿಯಾಗಿದ್ದವು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ