ಬುಧವಾರ, ಮೇ 8, 2024
ಲಂಚ ಸ್ವೀಕಾರ; ರೆಂಡ್ ಆ್ಯಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ PDO-ಐದನೇ ಬಾರಿ ರಷ್ಯಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ವ್ಲಾಡಿಮಿರ್ ಪುಟಿನ್-ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್‌ ಇನ್ನಿಲ್ಲ-ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ; ಇಲಾಖೆಯಿಂದ ಯಾವುದೇ ವೇತನ ಬಾಕಿ ಇಲ್ಲ - ದಿನೇಶ್‌ ಗುಂಡೂರಾವ್‌-ಡಿಕೆಶಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು, ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಲಿ : ಎಚ್‌ಡಿ ಕುಮಾರಸ್ವಾಮಿ-ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸಿಕ್ಕಾಪಟ್ಟೆ ಟ್ರೋಲ್!!-ಹರಿಯಾಣ ಸರ್ಕಾರ ಬೆಂಬಲಿಸುತ್ತಿದ್ದ ಮೂವರು ಶಾಸಕರು ಕಾಂಗ್ರೆಸ್ ಸೇರ್ಪಡೆ..!-ಟಿ-20 ವಿಶ್ವಕಪ್ ಗೆ ಪ್ರಕಟಗೊಂಡ ಎಲ್ಲಾ ತಂಡದಲ್ಲಿ ಯಾರೆಲ್ಲಾ ಆಟಗಾರರಿದ್ದಾರೆ? ಬಲಿಷ್ಠ ತಂಡ ಯಾವುದು?-ಕರ್ನಾಟಕದಲ್ಲಿ ಸಂಜೆ 5 ಗಂಟೆವರೆಗೆ ಶೇಕಡಾ 66.05 ರಷ್ಟು ಮತದಾನ..!-ಕಳೆದ ಐದು ತಿಂಗಳಿಂದ ರಿಜಿಸ್ಟ್ರೇಷನ್ ಸರ್ವರ್ ಸಮಸ್ಯೆ ಮುಗಿಯದ ಕಥೆ!10 ನಿಮಿಷದ ಡಾಕ್ಯೂಮೆಂಟ್ಗೆ ಅಪ್ಲೋಡೆಗೆ ಬೇಕು ಮೂರರಿಂದ ನಾಲ್ಕು ದಿನ!!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

2 ಮದುವೆಯಾದ ಟೆಕ್ಕಿ – ವಾರದಲ್ಲಿ 3 ದಿನ ಮೊದಲ ಪತ್ನಿಗೆ, 3 ದಿನ ಇನ್ನೊಬ್ಬಳಿಗೆ, ಸಂಡೇ ಫ್ರೀ

Twitter
Facebook
LinkedIn
WhatsApp
shutterstock 1697156779 1
 

ಭೋಪಾಲ್: ಸಾಫ್ಟ್‌ವೇರ್ ಇಂಜಿನಿಯರೊಬ್ಬ (Software Engineer) ಇಬ್ಬರನ್ನು ಮದುವೆಯಾಗಿದ್ದು, ಅವರಿಬ್ಬರೊಂದಿಗಿರಲು ಸಮಯವನ್ನು ನಿಗದಿ ಮಾಡಿ ಸುದ್ದಿಯಾಗಿದ್ದಾನೆ.

ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರೊಬ್ಬ 2 ಮದುವೆಯಾಗಿದ್ದ. ಆದರೆ ಇನ್ನೊಂದು ಮದುವೆ ಆಗಿರುವುದು ಮೊದಲ ಪತ್ನಿಗೆ ತಿಳಿದಿರಲಿಲ್ಲ. ತಿಳಿದ ನಂತರ ಕೋರ್ಟ್‍ಗೆ ಹೋಗಿದ್ದಾಳೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ಲ್ಯಾನ್‍ವೊಂದನ್ನು ಹುಡುಕಿದ್ದಾನೆ.

ಈ ಪ್ಲ್ಯಾನ್‍ನಂತೆ ತನ್ನ ಇಬ್ಬರು ಪತ್ನಿಯರನ್ನು ಒಟ್ಟಿಗೆ ಕೂರಿಸಿ ನಿರ್ಧಾರಕ್ಕೆ ಬಂದಿದ್ದಾನೆ. ಇದರ ಪ್ರಕಾರ ವಾರದಲ್ಲಿ 3 ದಿನ ಮೊದಲ ಪತ್ನಿಗಾದರೆ ಉಳಿದ ಮೂರು ದಿನ ಮತ್ತೋರ್ವ ಪತ್ನಿಯೊಂದಿಗೆ ಇರಲು ಸಮಯವನ್ನು ನಿಗದಿ ಮಾಡಿದ್ದಾನೆ. ಉಳಿದಂತೆ ಇನ್ನೊಂದು ದಿನ ಅಂದರೆ ಭಾನುವಾರ ತನ್ನಿಷ್ಟದಂತೆ ಸಮಯ ಕಳೆಯಲು ನಿರ್ಧರಿಸಿದ್ದು, ಇದಕ್ಕೆ ಆತನ ಪತ್ನಿಯರು ಒಪ್ಪಿಗೆ ಸೂಚಿಸಿದ್ದಾರೆ.

ಏನಿದು ಪ್ರಕರಣ?: 2008ರಲ್ಲಿ ವ್ಯಕ್ತಿಯು 26 ವರ್ಷದ ಮಹಿಳೆಯನ್ನು ವಿವಾಹವಾಗಿದ್ದ. ಆ ವೇಳೆ ಆತ ಗುರುಗ್ರಾಮನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. 2 ವರ್ಷಗಳ ಕಾಲ ದಂಪತಿ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಅಷ್ಟೇ ಅಲ್ಲದೇ ಅವರಿಗೆ ಓರ್ವ ಮಗನು ಇದ್ದ. ಆದರೆ 2020ರಲ್ಲಿ ಕೊರೊನಾ ಪ್ರಾರಂಭವಾದಾಗಿನಿಂದ ದಂಪತಿ ವರ್ಕ್ ಫ್ರಂ ಹೋಮ್‍ನಿಂದಾಗಿ ಗ್ವಾಲಿಯರ್‍ಗೆ ಬಂದರು. ಅದಾದ ಕೆಲ ತಿಂಗಳ ನಂತರ ವ್ಯಕ್ತಿಯೊಬ್ಬನೇ ಗುರುಗ್ರಾಮ್‍ಗೆ ಹಿಂದಿರುಗಿದ.

ಗ್ವಾಲಿಯರ್‌ನಿಂದ ಗುರುಗ್ರಾಮಕ್ಕೆ ಪತ್ನಿಯು ಬರುತ್ತಿರುವುದಾಗಿ ಹೇಳಿದ್ದಾಳೆ. ಆ ವೇಳೆ 2021ರಲ್ಲೇ ಆ ಪತಿಗೆ ಅದೇ ಕಂಪನಿಯ ತನ್ನ ಸಹೋದ್ಯೋಗಿಯೊಂದಿಗೆ ಮದುವೆಯಾಗಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲದೇ 2ನೇ ಪತ್ನಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. 

ಈ ಹಿನ್ನೆಲೆಯಲ್ಲಿ ಮೊದಲ ಪತ್ನಿ ಜೀವನಾಂಶ ಕೋರಿ ಗ್ವಾಲಿಯರ್‍ನ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಈ ವೇಳೆ ವಕೀಲರೊಬ್ಬರು ಮೊದಲ ಪತ್ನಿ ವಿರೋಧಿಸಿದರೆ ಶಿಕ್ಷೆ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಆತ ತನ್ನ ಇಬ್ಬರು ಪತ್ನಿಯರನ್ನು ಸೇರಿಸಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಮೂವರು ಸೇರಿ ನ್ಯಾಯಾಲಯಕ್ಕೆ ಹೊಗದಿರಲು ಒಪ್ಪಂದವನ್ನು ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಒಪ್ಪಂದದ ಪ್ರಕಾರ ವ್ಯಕ್ತಿಯು ವಾರದ ಮೂರು ದಿನಗಳನ್ನು ತನ್ನ ಹೆಂಡತಿಯರಲ್ಲಿ ಒಬ್ಬಳೊಂದಿಗೆ ಮತ್ತು ಮುಂದಿನ ಮೂರು ದಿನಗಳನ್ನು ಇನ್ನೊಬ್ಬಳೊಂದಿಗೆ ಕಳೆಯಬೇಕು. ಅವರು ಆಯ್ಕೆ ಮಾಡಿದವರ ಜೊತೆ ಭಾನುವಾರ ಕಳೆಯಬಹುದಾಗಿದೆ. ಒಂದು ವೇಳೆ ಈ ಒಪ್ಪಂದವನ್ನು ತಪ್ಪಿದರೆ ಒಪ್ಪಂದವನ್ನು ಉಲ್ಲಂಘಿಸಿದರೆ ಮೊದಲ ಪತ್ನಿ ನ್ಯಾಯಾಲಯಕ್ಕೆ ಹೋಗಬಹುದು ಎಂದು ನಿರ್ಧರಿಸಿಕೊಂಡಿದ್ದಾರೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ