ಶುಕ್ರವಾರ, ಮೇ 17, 2024
ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!-ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ರೇವಣ್ಣ ಪ್ಲೈಟ್ ಹತ್ತದೆ ಮತ್ತೆ ವಿದೇಶದಲ್ಲಿ; ಎಸ್ಐಟಿ ಮುಂದಿನ ನಡೆ ಏನು.?-ನಟಿ ವೈಷ್ಣವಿ ಗೌಡಗೆ ಟ್ರಾಫಿಕ್ ಪೊಲೀಸರಿಂದ ದಂಡ; ಮಂಗಳೂರಿನ ಜಯಪ್ರಕಾಶ್‌ ಎಕ್ಕೂರುರವರಿಂದ ದೂರು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

100 ಜನ ಮನೆಗೆ ನುಗ್ಗಿ ಯುವತಿಯ ಕಿಡ್ನಾಪ್; ತೆಲಂಗಾಣದಲ್ಲೊಂದು ಆಘಾತಕಾರಿ ಘಟನೆ

Twitter
Facebook
LinkedIn
WhatsApp
100 ಜನ ಮನೆಗೆ ನುಗ್ಗಿ ಯುವತಿಯ ಕಿಡ್ನಾಪ್; ತೆಲಂಗಾಣದಲ್ಲೊಂದು ಆಘಾತಕಾರಿ ಘಟನೆ

ಹೈದರಾಬಾದ್: ತೆಲಂಗಾಣದ (Telangana) ರಂಗಾ ರೆಡ್ಡಿ ಜಿಲ್ಲೆಯ ಆದಿಬಟ್ಲಾದಲ್ಲಿ ಮನೆಗೆ ನುಗ್ಗಿದ ಸುಮಾರು 100 ಜನರು ಶುಕ್ರವಾರ 24 ವರ್ಷದ ಯುವತಿಯನ್ನು ಆಕೆಯ ಮನೆಯಿಂದ ಅಪಹರಿಸಿದ್ದಾರೆ. ವೈಶಾಲಿ ಎಂಬ ಯುವತಿಯ ಪೋಷಕರು ನೀಡಿರುವ ದೂರಿನ ಪ್ರಕಾರ, ಸುಮಾರು 100 ಪುರುಷರು ಅವರ ಮನೆಗೆ ನುಗ್ಗಿ ಅವರ ಮನೆಗಳನ್ನು ಧ್ವಂಸಗೊಳಿಸಿದ್ದಾರೆ. ನಂತರ ಬಲವಂತವಾಗಿ ಅವರ ಮಗಳನ್ನು ಮನೆಯಿಂದ ಎಳೆದುಕೊಂಡು ಹೋಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪುರುಷರು ಆ ಯುವತಿಯ ಸಂಬಂಧಿಕರಿಗೆ ಥಳಿಸುವ ದೃಶ್ಯ ಕಂಡು ಬರುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ತೆಲಂಗಾಣದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 24 ವರ್ಷದ ಯುವತಿಯನ್ನು ಶುಕ್ರವಾರ ಪುರುಷರ ದೊಡ್ಡ ಗುಂಪೊಂದು ಮನೆಯಿಂದ ಅಪಹರಿಸಿದೆ. ರಂಗಾ ರೆಡ್ಡಿ ಜಿಲ್ಲೆಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 16 ಆರೋಪಿಗಳನ್ನು ಬಂಧಿಸಲಾಗಿದ್ದು, 6 ಗಂಟೆಯೊಳಗೆ ಯುವತಿಯನ್ನು ರಕ್ಷಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಇತರರನ್ನು ಕೂಡ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

ಪ್ರಮುಖ ಆರೋಪಿಯಾಗಿರುವ 26 ವರ್ಷದ ನವೀನ್ ರೆಡ್ಡಿ ಈಗಾಗಲೇ ವೈಶಾಲಿಯೊಂದಿಗೆ ಮದುವೆಯಾಗಿರುವುದಾಗಿ ತಿಳಿಸಿದ್ದಾನೆ. ನಾನು ನನ್ನ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಲು ಸಾಕಷ್ಟು ಪ್ರಯತ್ನಿಸಿದೆ. ಆಕೆ ಡೆಂಟಿಸ್ಟ್​ ಆದ ಬಳಿಕ ಆಕೆಯ ಅಪ್ಪ-ಅಮ್ಮ ಅವಳ ಮನಸನ್ನು ಬದಲಾಯಿಸಿ, ನನ್ನಿಂದ ದೂರ ಮಾಡಿದ್ದಾರೆ. ಹೀಗಾಗಿ, ಅವರ ಮನೆಗೆ ನುಗ್ಗಿ ಆಕೆಯನ್ನು ಎಳೆದುಕೊಂಡು ಹೋಗಿದ್ದೇವೆ ಎಂದು ನವೀನ್ ರೆಡ್ಡಿ ಪೊಲೀಸರಿಗೆ ತಿಳಿಸಿದ್ದಾನೆ.

ಆರೋಪಿಗಳ ವಿರುದ್ಧ ಕೊಲೆ ಯತ್ನ ಮತ್ತು ಅಪಹರಣ ಸೇರಿದಂತೆ ಇತರೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಅಪಹರಣಕ್ಕೆ ಒಳಗಾದ ಯುವತಿ ದಂತ ವೈದ್ಯೆ ಎನ್ನಲಾಗಿದೆ. ಎಎನ್‌ಐ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಗುಂಪೊಂದು ಆ ಯುವತಿಯ ಮನೆಯೊಳಗೆ ನುಗ್ಗುತ್ತಿರುವುದನ್ನು ನೋಡಬಹುದು. ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಮನೆಯ ಬಳಿ ನಿಲ್ಲಿಸಿದ್ದ ಕಾರಿಗೆ ಹಾನಿ ಮಾಡುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ