ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹೋಳಿಯಾಡಿ ಸ್ನಾನಕ್ಕೆಂದು ತೆರಳಿದ ದಂಪತಿ ಉಸಿರುಗಟ್ಟಿ ಸಾವು

Twitter
Facebook
LinkedIn
WhatsApp
womens premier league who will win royal challengers bangalore women vs up warriorz sportstiger 1678370214778 original 1

ಮುಂಬೈ: ಚಳಿಗಾಲದಲ್ಲಿ ಎಲ್ಲರೂ ಬಿಸಿ ಬಿಸಿಯಾದ ನೀರಿನಿಂದ ಸ್ನಾನ ಮಾಡೋಕೆ ಇಷ್ಟ ಪಡ್ತಾರೆ. ಆದರೆ ಈ ಗೀಸರ್‌ಗಳು ಕೆಲವೊಮ್ಮೆ ಜೀವಕ್ಕೇ ಮಾರಕವಾಗುತ್ತವೆ. ಗೀಸರ್ ಬ್ಲಾಸ್ಟ್ ಆಗುವುದು, ಗೀಸರ್‌ನಿಂದ ಗ್ಯಾಸ್ ಸೋರಿಕೆಯಾಗುವ ಬಗ್ಗೆ ನಾವು ಈ ಹಿಂದೆಯೇ ಕೇಳಿದ್ದೇವೆ. ಹಾಗೆಯೇ ಸದ್ಯ, ಗೀಸರ್ ಗ್ಯಾಸ್ ಸೋರಿಕೆಯಿಂದ ನವವಿವಾಹಿತರು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಬಾತ್‌ರೂಮ್‌ನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ನವ ವಿವಾಹಿತರ ಶವ ಪತ್ತೆಯಾಗಿದೆ. ಹೋಳಿ ಹಬ್ಬದ ಬಳಿಕ ಸ್ನಾನಕ್ಕೆಂದು ತೆರಳಿದ ಇಬ್ಬರು ಗ್ಯಾಸ್ ಸೋರಿಕೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 

ಮುಂಬೈನ ಘಾಟ್‌ಕೋಪರ್‌ನ ದೀಪಕ್ ಷಾ ಮತ್ತು ಟೀನಾ ಶಾ ಕುಕ್ರೇಜಾ ಟವರ್‌ನಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಹೋಳಿ ಹಬ್ಬದ (Holi festival) ಬಳಿಕ ಸ್ನಾನಕ್ಕೆಂದು ಗೀಸರ್ ಆನ್ ಮಾಡಿದ್ದರು. ಮನೆಯ ಬಾತ್ ರೂಮ್ ನಲ್ಲಿದ್ದ ಗೀಸರ್ ನಿಂದ ಗ್ಯಾಸ್ ಸೋರಿಕೆಯಾಗಿ (Gas  ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಆಕಸ್ಮಿಕ ಸಾವು (Death) ದಾಖಲಿಸಿಕೊಂಡಿದ್ದಾರೆ. ಈ ಎರಡೂ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರಾಜವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ.

ಪೊಲೀಸರ ಪ್ರಕಾರ, ಶಾ ಅವರ ಮನೆಗೆ ಕೆಲಸಕ್ಕೆ ಬರುತ್ತಿದ್ದ ಮಹಿಳೆ (Woman)ಯೊಬ್ಬರು ಕಾಲಿಂಗ್‌ಬೆಲ್‌ ಬಾರಿಸಿದರೂ ಯಾರೂ ಬಾಗಿಲು ತೆರೆಯಲಿಲ್ಲ. ನಂತರ ಈ ಮಾಹಿತಿಯನ್ನು ಪೊಲೀಸರಿಗೆ ನೀಡಲಾಯಿತು. ಪೊಲೀಸರು ಡುಪ್ಲಿಕೇಟ್ ಕೀಲಿಯಿಂದ ಬಾಗಿಲು ತೆರೆದಾಗ ಬಾತ್ ರೂಮ್‌ನಲ್ಲಿ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ (Hospital) ಸಾಗಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಗೀಸರ್ ಗ್ಯಾಸ್ ಏಕೆ ಸೋರಿಕೆಯಾಗುತ್ತದೆ?
ಬಹುತೇಕರು ಚಳಿಗಾಲದಲ್ಲಿ ಗೀಸರ್ ಬಳಸುತ್ತಾರೆ. ಕಳೆದ ಕೆಲ ದಿನಗಳಿಂದ ಗೀಸರ್ ನಿಂದ ಗ್ಯಾಸ್ ಸೋರಿಕೆಯಾಗಿ ಹಲವರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸಣ್ಣ ತಪ್ಪು ಕೂಡ ಪ್ರಾಣಾಪಾಯಕ್ಕೆ ಕಾರಣವಾಗುವ ಅನೇಕ ನಿದರ್ಶನಗಳಿವೆ. ಬಾತ್‌ರೂಮ್‌ನಲ್ಲಿ ಗಾಳಿ ಇಲ್ಲದಿದ್ದರೆ, ನೀವು ಬಕೆಟ್‌ಗ ಬಿಸಿನೀರನ್ನು ತುಂಬಿಸುವಾಗ ಬಾತ್‌ರೂಮ್‌ ಬಾಗಿಲು ತೆರೆಯಿರಿ. ಗೀಸರ್‌ಗಳು ಎರಡು ವಿಧಗಳಿವೆ. ಒಂದು ಅನಿಲ ಚಾಲಿತ ಮತ್ತು ಇನ್ನೊಂದು ವಿದ್ಯುತ್ ಚಾಲಿತ. ನೀವು ಮನೆಯಲ್ಲಿ ಯಾವುದೇ ಗೀಸರ್ ಬಳಸುತ್ತಿದ್ದರೂ ಆ ಬಗ್ಗೆ ಎಚ್ಚರಿಕೆಯಿಂದ ಇರೋದು ಒಳ್ಳೇದು. 

ಈ ವಿಷಯಗಳನ್ನು ನೆನಪಿಡಿ
ಗ್ಯಾಸ್ ಸಿಲಿಂಡರ್ ಚಾಲಿತ ಗೀಸರ್ ಅನಿಲ ಸೋರಿಕೆಯಾದಾಗ ಸ್ಫೋಟಗೊಳ್ಳುತ್ತದೆ, ಆದರೆ ಎಲೆಕ್ಟ್ರಿಕ್ ಗೀಸರ್ ಹೆಚ್ಚು ಸಮಯ ಚಾಲನೆಯಲ್ಲಿದ್ದರೆ ಬಾಯ್ಲರ್ ಸ್ಫೋಟಕ್ಕೆ ಗುರಿಯಾಗುತ್ತದೆ. ಗ್ಯಾಸ್ ಗೀಸರ್ ಕಾರ್ಬನ್ ಮಾನಾಕ್ಸೈಡ್‌ನಿಂದ ಮಾಡಲ್ಪಟ್ಟಿದೆ. ಇದು ಸ್ನಾನಗೃಹದಲ್ಲಿ ಸಾಕಷ್ಟು ಗಾಳಿ ಇಲ್ಲದಿದ್ದರೆ ವ್ಯಕ್ತಿಗೆ ಉಸಿರುಗಟ್ಟಲು ಕಾರಣವಾಗಬಹುದು. ಎಲೆಕ್ಟ್ರಿಕ್ ಗೀಸರ್ ದೀರ್ಘಕಾಲದವರೆಗೆ ಮುಂದುವರಿದರೆ, ಹೆಚ್ಚಿನ ಶಾಖದಿಂದ ಸೋರಿಕೆಯಾಗುವ ಸಾಧ್ಯತೆಯಿದೆ. ಗೀಸರ್ ಹಳೆಯದಾಗಿದ್ದರೆ ಆಗಾಗ ಚೆಕ್ ಮಾಡಿಸುತ್ತಿರಬೇಕು.

ಗ್ಯಾಸ್ ಗೀಸರ್ ಅನ್ನು ಸುರಕ್ಷಿತವಾಗಿ ಬಳಸುವುದು ಹೇಗೆ?
ಗ್ಯಾಸ್​​ ಗೀಸರ್​​ನಲ್ಲಿ ಯಾವುದೇ ಲೀಕ್​ ಕಂಡು ಬಂದರೆ ಕೂಡಲೇ ಸ್ವಿಚ್​ ಆಫ್ ಮಾಡಬೇಕು. ಕಾಲಕಾಲಕ್ಕೆ ಗ್ಯಾಸ್​ ಗೀಸರ್​ ಪರಿಶೀಲನೆ ಮಾಡುತ್ತಿರಬೇಕು. ಸ್ನಾನದ ಕೋಣೆಯಲ್ಲಿ ಎಕ್ಸಾಸ್ಟ್ ಫ್ಯಾನ್ ಅಳವಡಿಸಲೇಬೇಕು. ಗೀಸರ್ ಬಳಸುವಾಗ, ಗೀಸರ್ ಆನ್​ ಇರುವ ಸಂದರ್ಭದಲ್ಲಿ ಎಕ್ಸಾಸ್ಟ್​ ಫ್ಯಾನ್ ಆನ್​ ಮಾಡಿಕೊಳ್ಳಬೇಕು. ಗೀಸರ್​ನಲ್ಲಿ ಯಾವುದೇ ಸೋರಿಕೆ (Leakage) ಕಂಡು ಬಂದರೂ ಅದನ್ನು ಬಳಸದೆ ತಕ್ಷಣ ಸರಿಪಡಿಸಬೇಕು. ಸ್ನಾನದ ರೂಮ್​​ನಲ್ಲಿ ಕನಿಷ್ಠ ಒಂದು ಕಿಟಕಿಯಾದರೂ ಇರುವಂತೆ ನೋಡಿಕೊಳ್ಳಬೇಕು. ಸ್ನಾನ ಮಾಡುವಾಗ ಕಿಟಕಿ ತೆರೆದಿಟ್ಟುಕೊಳ್ಳಬೇಕು. ಸ್ನಾನ ರೂಮ್​​ನಲ್ಲಿ ಇರುವಾಗ ಉಸಿರಾಟದ ಸಮಸ್ಯೆ, ಕೆಮ್ಮು ಕಂಡು ಬಂದರೆ ಕೂಡಲೇ ಹೊರ ಬಂದು ತಾಜಾ ಗಾಳಿ ತೆಗೆದುಕೊಳ್ಳಬೇಕು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ