ಶುಕ್ರವಾರ, ಏಪ್ರಿಲ್ 26, 2024
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಸ್​​ನಲ್ಲಿ ಅಗ್ನಿ ದುರಂತ, ಕಂಡಕ್ಟರ್​​ ಸಜೀವ ದಹನ, ಡ್ರೈವರ್ ಪಾರು

Twitter
Facebook
LinkedIn
WhatsApp
ಬಸ್​​ನಲ್ಲಿ ಅಗ್ನಿ ದುರಂತ, ಮಲಗಿದ್ದ ಕಂಡಕ್ಟರ್​​ ಸಜೀವ ದಹನ, ಡ್ರೈವರ್ ಪಾರು

ಬೆಂಗಳೂರು: ಬಿಎಂಟಿಸಿ ಬಸ್​​ನಲ್ಲಿ(BMTC Bus) ಬೆಂಕಿ ಕಾಣಿಸಿಕೊಂಡಿದ್ದು, ಮಲಗಿದ್ದ ಕಂಡಕ್ಟರ್ (conductor)​ ಸಜೀವ ದಹನವಾಗಿರುವ ಘಟನೆ ಬೆಂಗಳೂರಿನ ಲಿಂಗಧೀರನಹಳ್ಳಿ ಬಿಎಂಟಿಸಿ ಬಸ್​ ನಿಲ್ದಾಣದಲ್ಲಿ ನಡೆದಿದೆ. ಮುತ್ತಯ್ಯಸ್ವಾಮಿ ಮೃತದ ದುರ್ವೈವಿ(45). ಇಂದು (ಮಾರ್ಚ್ 10) ನಸುಕಿನಲ್ಲಿ ಬಸ್​ನಲ್ಲಿ ಏಕಾಏಕಿ ಬೆಂಕಿ ದುರಂತ ಸಂಭವಿಸಿದ್ದು, ಬಸ್​ನಲ್ಲೇ ನಿದ್ದೆಗೆ ಜಾರಿದ್ದ ಕಂಡಕ್ಟರ್​ ಸುಟ್ಟು ಕರಕಲಾಗಿದ್ದಾರೆ.

ರಾತ್ರಿ ರೂಟ್ ಮುಗಿಸಿ ಲಿಂಗಧೀರನಹಳ್ಳಿ ಬಸ್ ನಿಲ್ದಾಣದಲ್ಲಿ ಬಸ್​ನಲ್ಲಿ ಚಾಲಕ ಹಾಗೂ ನಿರ್ವಾಹಕ ಮಲಗಿದ್ದರು. ಬೆಳಗ್ಗೆ ಚಾಲಕ ಪ್ರಕಾಶ್ ಎದ್ದು ಶೌಚಕ್ಕೆ ಹೋದಾಗ ಬಸ್​ನಲ್ಲಿ ದಿಢೀರ್​ ಬೆಂಕಿ ಕಾಣಿಸಿಕೊಂಡಿದೆ. ದುರ್ಘಟನೆಯಲ್ಲಿ ನಿರ್ವಾಹಕ ಮುತ್ತಯ್ಯಸ್ವಾಮಿ ಮೃತಪಟ್ಟಿದ್ದರೆ, ಅದೃಷ್ಟವಶಾತ್ ಶೌಚಕ್ಕೆ ಹೋಗಿದ್ದ​ ಬಸ್​ ​ಚಾಲಕ ಪ್ರಕಾಶ್  ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾರ್ಗ ಸಂಖ್ಯೆ- 243/1, ಸುಮ್ಮನಹಳ್ಳಿ ಡಿಪೋ-31ಗೆ ಸೇರಿದ ಬಸ್​ನಲ್ಲಿ ಮುತ್ತಯ್ಯಸ್ವಾಮಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ರೂಟ್​ ಮುಗಿಸಿ ಲಿಂಗದೀರನಹಳ್ಳಿ ಬಸ್​ ನಿಲ್ದಾಣದಲ್ಲಿ ನಿಂತಿದೆ. ನಿಂತಿದ್ದ ಬಸ್​ನಲ್ಲೇ ಚಾಲಕ ಹಾಗೂ ನಿರ್ವಾಹಕ ಮಲಗಿದ್ದರು. ಆದ್ರೆ, ಚಾಲಕ ಬೆಳಗ್ಗೆ ಎದ್ದು ಶೌಚಾಲಯಕ್ಕೆ ಹೋದಾಗ ಈ ದುರ್ಘಟನೆ ಸಂಭವಿಸಿದೆ.  ಇನ್ನು ವಿಷಯ ತಿಳಿದು  ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ನಿರ್ವಾಹಕ ಮುತ್ತಯ್ಯಸ್ವಾಮಿ ಮೂಲತಃ ಗದಗ ಜಿಲ್ಲೆಯ ಹಾಲೂರಿನವರು. ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಬೆಂಗಳೂರಲ್ಲಿ ಮೊತ್ತೊಂದು ಅಗ್ನಿ ಅವಘಡ: ಐದಾರು ಗುಜರಿ ಗೋಡೌನ್‌ಗಳಿಗೆ ಹೊತ್ತಿಕೊಂಡ ಬೆಂಕಿ:

ಬೆಂಗಳೂರು: ತಡರಾತ್ರಿ 5 ರಿಂದ 6 ಗುಜರಿ ಗೋಡೌನ್‌ಗಳಲ್ಲಿ ಅಗ್ನಿ ಅವಘಡ ಸಂಭವಿಸಿ ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನಗರದ ನಾಯಂಡಹಳ್ಳಿ (Nayandahalli) ಬಳಿಯ ಪ್ರಮೋದ್ ಲೇಔಟ್‌ನಲ್ಲಿ ನಡೆದಿದೆ. 

ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ 10 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿಯನ್ನು ನಂದಿಸಿಸುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸುಮಾರು 3-4 ಎಕರೆ ಜಾಗಕ್ಕೆ ಬೆಂಕಿ ವ್ಯಾಪಿಸಿತ್ತು. ತಡರಾತ್ರಿ ಗೋಡೌನ್​ಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ, ಪಕ್ಕದಲ್ಲೆ ಕಾರ್ಯನಿರ್ವಹಿಸುತ್ತಿದ್ದ ಮಾರ್ಷಲ್​ಗಳು ಸ್ಥಳಕ್ಕೆ ದೌಡಾಯಿಸಿ, ಗೌಡೌನಲ್ಲಿ ಮಲಗಿದ್ದ ಹಲವರನ್ನು ಎಬ್ಬಿಸಿ ಆಚೆ ಕಳುಹಿಸಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿದೆ.

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಫರ್ನೀಚರ್ ಅಂಗಡಿ

ಆನೇಕಲ್: ಫರ್ನೀಚರ್ ಅಂಗಡಿದೊಂದರಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿ ಫರ್ನೀಚರ್ ವಸ್ತುಗಳ ಹೊತ್ತಿ ಉರಿದಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರ ದೊಮ್ಮಸಂದ್ರ ಮುಖ್ಯ ರಸ್ತೆಯಲ್ಲಿ ನಿನ್ನೆ (ಮಾ.9) ರಂದು ನಡೆದಿತ್ತು. ಶಾಟ್ ಸೆರ್ಕ್ಯುಟ್​ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ರಘು ರೆಡ್ಡಿ ಎಂಬುವವರಿಗೆ ಸೇರಿದ ಜಾಗದಲ್ಲಿ ಫರ್ನೀಚರ್ ವ್ಯವಹಾರಕ್ಕೆ ಅಂಗಡಿ ಬಾಡಿಗೆಗೆ ನೀಡಲಾಗಿತ್ತು. ಈ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭಿವಿಸಿದ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 45 ಲಕ್ಷದಷ್ಟು ಬೆಲೆ ಬಾಳುವ ಫರ್ನೀಚರ್ ಸಾಮಾನು ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ.

ಬೆಂಕಿ ಅನಾಹುತದಿಂದ ಅಕ್ಕಪಕ್ಕದ ಅಂಗಡಿಗಳ ಮಾಲಿಕರಿಗೂ ಆತಂಕ ವ್ಯಕ್ತವಾಗಿತ್ತು. ಕೆಲ ಗಂಟೆಗಳ ಕಾಲ ಅಂಗಡಿಗಳನ್ನು ಮುಚ್ಚಿಸಲಾಗಿತ್ತು. ಹಾಗೇ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಫುಲ್‌ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೈಕೊಂಡರಹಳ್ಳಿ, ದೊಮ್ಮಸಂದ್ರ, ಬಡವಾಣೆ ಪವರ್ ಕಟ್  ಮಾಡಲಾಗಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ