ಸೋಮವಾರ, ಏಪ್ರಿಲ್ 29, 2024
ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!-ಪ್ರಜ್ವಲ್ ರೇವಣ್ಣನಿಂದ 300ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ಕೃತ್ಯ ; ಲಕ್ಷ್ಮಿ ಹೆಬ್ಬಾಳ್ಕರ್-Weather Alert: ಮುಂದಿನ 5 ದಿನ ರಾಜ್ಯದಲ್ಲಿ ಹಲವೆಡೆ ಬಿಸಿಗಾಳಿ ಎಚ್ಚರಿಕೆ..!-ಮೇ 1ರಂದು ನೇಹಾ ಮನೆಗೆ ಅಮಿತ್ ಶಾ ಭೇಟಿ ; ಮುರುಗೇಶ್ ನಿರಾಣಿ.!-ಲೈಂಗಿಕ ಹಗರಣ ಪ್ರಕರಣ; ಶಾಸಕ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿ ತನಿಖೆ ಆರಂಭ-ಪುತ್ತೂರು: ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು.!-ಸ್ವಾಭಿಮಾನಿ ರಾಜಕಾರಣಿ, ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ-ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ; ಪ್ರಜ್ವಲ್ ರೇವಣ್ಣ ಜೊತೆಗೆ ಹೆಚ್​​ಡಿ ರೇವಣ್ಣ ವಿರುದ್ಧವೂ ಎಫ್ಐಆರ್‌ ದಾಖಲು..!-ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.-ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ; ಜರ್ಮನಿಗೆ ಹಾರಿದ ಪ್ರಜ್ವಲ್‌ ರೇವಣ್ಣ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹೊಸ ವರ್ಷಾಚರಣೆಗೆ ಪೊಲೀಸ್‌ ಕಣ್ಗಾವಲು .

Twitter
Facebook
LinkedIn
WhatsApp
ಹೊಸ ವರ್ಷಾಚರಣೆಗೆ ಪೊಲೀಸ್‌ ಕಣ್ಗಾವಲು .

ಬೆಂಗಳೂರು : ಓಮೈಕ್ರಾನ್ ಹಾಗೂ ಕೊರೋನಾ ಸಂಕಷ್ಟದ ನಡುವೆ ನಗರದಲ್ಲಿ ಹೊಸವರ್ಷಾಚರಣೆ ಸಂಭ್ರಮ ಅಲ್ಲಲ್ಲಿ ಕಳೆಗಟ್ಟಿದೆ. ಆದರೆ ಖಾಕಿ ಪಡೆ ಮಾತ್ರ ವರ್ಷಾಚರಣೆ ಮೇಲೆ ಹದ್ದಿನ ಕಣ್ಣಿಟ್ಟಿದ್ದು ನೈಟ್ ಕರ್ಪ್ಯೂ ಸೇರಿದಂತೆ ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ಸಿದ್ಧವಾಗಿದೆ. ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯಲಿದೆ. ಹೊಸ ವರ್ಷದ ಭದ್ರತೆಗೆ ಹತ್ತು ಸಾವಿರ ಪೊಲೀಸರ ನಿಯೋಜಿಸಲಾಗಿದ್ದು , ಆಯಾ ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ನಗರದಾದ್ಯಂತ 40ಕ್ಕೂ ಅಧಿಕ KSRP ಹಾಗೂ CAR ತುಕಡಿಗಳು ಭದ್ರತೆಗೆ ನಿಯೋಜನೆ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳದಲ್ಲಿ ಇಲ್ಲ ಸಂಭ್ರಮಾಚರಣೆಗೆ ಅವಕಾಶವಿಲ್ಲ ಎಂದು ಖಾಕಿ ಪಡೆ ಹೇಳಿದೆ. ಎಂಜಿ ರೋಡ್, ಬ್ರಿಗೇಡ್ ರಸ್ತೆ ಸಂಜೆ 6 ಗಂಟೆಯಿಂದಲೇ ಫುಲ್‌ ಪೊಲೀಸ್ ಕಣ್ಗಾವಲಿನಲ್ಲಿರಲಿದ್ದು, ಆದೇಶ ಮೀರಿ ಸಂಭ್ರಮಾಚರಣೆ ಮಾಡಿದ್ರೆ ಕೇಸ್ ದಾಖಲಿಸಲು ಪೊಲೀಸರು ಸಿದ್ಧವಾಗಿದ್ದಾರೆ.

ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಜನರು ಬ್ರಿಗೇಡ್,ಎಂಜಿರೋಡ್ ಹಾಗೂ ಚರ್ಚ್ ಸ್ಟ್ರೀಟ್ ನಲ್ಲಿ ಹೊಸ ವರ್ಷವನ್ನು ಸ್ವಾಗತಿಸುತ್ತಿದ್ದರು. ಆದರೆ ಈ ಬಾರಿ ನೈಟ್ ಕರ್ಫ್ಯೂ ಇರೋ ಕಾರಣಕ್ಕೆ ಎಂಜಿ ರೋಡಲ್ಲಿ ಸಂಭ್ರಮಾಚರಣೆಗೆ ಅವಕಾಶವಿಲ್ಲ. ಹೀಗಾಗಿ ಹೊಸವರ್ಷದ ಸಂಭ್ರಮಕ್ಕೆ ಕೊಂಚ ಬ್ರೇಕ್ ಬಿದ್ದಂತಾಗಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್, ಕಬ್ಬನ್ ಪಾರ್ಕ್ ಚರ್ಚ್ ಸ್ಟ್ರೀಟ್ ಸುತ್ತಮುತ್ತ ಖಾಕಿ ಕಣ್ಗಾವಲು ಇರಿಸಲಾಗಿದ್ದು, 500ಕ್ಕೂ ಅಧಿಕ ಪೊಲೀಸರು ಈ ಭಾಗದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲದೇ ಇಡೀ ರಸ್ತೆಗಳನ್ನು ಬ್ಯಾರಿಗೇಟ್ ಹಾಕಿ ಬಂದ್ ಮಾಡಲಿರೋ ಪೊಲೀಸರು ಈಗಾಗಲೇ 200 ಕ್ಕೂ ಅಧಿಕ ಕ್ಯಾಮರಾಗಳನ್ನು ಅಳವಡಿಸಿ ಜನರ ಚಲನವಲನಗಳನ್ನು ರೆಕಾರ್ಡ್ ಮಾಡಲಿದ್ದಾರೆ.
ಇನ್ನು ಬಾರ್ , ರೆಸ್ಟೊರೆಂಟ್ ಹಾಗೂ ಪಬ್ ಮಾಲೀಕರಿಗೆ ಖಡಕ್ ಎಚ್ಚರಿಕೆರವಾನಿಸಿದ್ದು, ಎರಡು ವ್ಯಾಕ್ಸಿನೇಷನ್‌ ಪಡೆದಿದ್ರೆ ಮಾತ್ರ ಬಾರ್, ಪಬ್, ಹೋಟೆಲ್ ಗಳಿಗೆ ಎಂಟ್ರಿನೀಡಲು ಸೂಚಿಸಿದೆ. ಅಲ್ಲದೇ ರಾತ್ರಿ 9 ಗಂಟೆಯಿಂದಲೇ ಪಬ್, ರೆಸ್ಟೋರೆಂಟ್ ಮುಚ್ಚುವಂತೆ ಪೊಲೀಸರು ಸೂಚನೆ‌ನೀಡಿದ್ದು 10 ಗಂಟೆ ವೇಳೆಗೆ ಪಬ್ ,ಬಾರ್ ಗಳಲ್ಲಿ ಕೆಲಸ ಮಾಡೋ‌ ಸಿಬ್ಬಂದಿ ಮನೆ ಸೇರುವಂತೆ ಖಾಕಿ ಪಡೆ ಹೇಳಿದೆ. ಇನ್ನು ರಾತ್ರಿ 10 ಗಂಟೆಗೆ ಪೊಲೀಸರು ಫಿಲ್ಡ್ ಗಿಳಿಯಲಿದ್ದು ಕರ್ಪ್ಯೂ ವೇಳೆ ಕುಡಿದು ವಾಹನ ಚಲಾಯಿಸುವವರು ಹಾಗೂ ವಿನಾಕಾರಣ ರಸ್ತೆಗಿಳಿಯುವವರನ್ನು ಬೆಂಡೆತ್ತಲಿದ್ದಾರೆ. ಜೊತೆಗೆ ಡ್ರಿಂಕ್ ಡ್ರೈವ್ ಮಾಡಿದವರಿಗೆ ಡ್ರಿಂಕ್ ಡ್ರೈವ್ ಜೊತೆಗೆ NDMA ಕಾಯ್ದೆಯಡಿ ಕೇಸ್ ಹಾಕಲಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.

ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.

ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !. Twitter Facebook LinkedIn WhatsApp ಮಂಗಳೂರು: 2024 ಲೋಕಸಭಾ ಚುನಾವಣೆಯಲ್ಲಿ ಮಂಗಳೂರು

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು