ಬುಧವಾರ, ಮೇ 1, 2024
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ-ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಕಟ ಮಾಡದಂತೆ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ತಂದ ಕೆ.ಎಸ್‌. ಈಶ್ವರಪ್ಪ ಪುತ್ರ ಕೆ.ಇ .ಕಾಂತೇಶ್‌!-ದಾರಿ ತಪ್ಪಿದ್ದು ಮಹಿಳೆಯರಲ್ಲ, ನಿಮ್ಮ ಮಗ - ಪ್ರಕಾಶ್ ರೈ-ಪೆನ್ ಡ್ರೈವ್ ಪ್ರಕರಣ: ಅಪ್ಪ- ಮಗನಿಗೆ ನೋಟಿಸ್!-ತೆಲಂಗಾಣದ ನಿಜಾಮಾಬಾದ್ ಕ್ಷೇತ್ರದ ಚುನಾವಣಾ AICC ಉಸ್ತುವಾರಿಯಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನೇಮಕ-ಅನೈತಿಕ ಸಂಬಂಧ ಶಂಕೆ ಕಾರಿಗೆ ಬೆಂಕಿ ಹಚ್ಚಿ ವ್ಯಕ್ತಿಯ ಬರ್ಬರ ಕೊಲೆ!-Commercial LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ. ಇಳಿಕೆ-ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!-ನಮ್ಮದು ಮತ್ತು ರೇವಣ್ಣಕುಟುಂಬವೇ ಬೇರೆ ಬೇರೆ; ಕುಮಾರಸ್ವಾಮಿ-ಹೆತ್ತ ತಂದೆಯನ್ನೇ ಹಿಗ್ಗಾಮುಗ್ಗಾ ಮುಖಕ್ಕೆ ಜಾಡಿಸಿ ಮಗನಿಂದ ಕ್ರೂರ ಕೃತ್ಯ ; ಇಲ್ಲಿದೆ ವಿಡಿಯೋ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹೊರಗಿನಿಂದ ಬಂದ ಮೇಲೆ ಸೊಸೆ ಮನೆಮಗಳೇ. ನಾನು ಕೂಡ ಮನೆಯವನೇ. ತನ್ನ ಟೀಕಾಕಾರರಿಗೆ ಟಾ೦ಗ್ ನೀಡಿದ ಸಿದ್ದರಾಮಯ್ಯ.

Twitter
Facebook
LinkedIn
WhatsApp
ಹೊರಗಿನಿಂದ ಬಂದ ಮೇಲೆ ಸೊಸೆ ಮನೆಮಗಳೇ. ನಾನು ಕೂಡ ಮನೆಯವನೇ. ತನ್ನ ಟೀಕಾಕಾರರಿಗೆ ಟಾ೦ಗ್ ನೀಡಿದ ಸಿದ್ದರಾಮಯ್ಯ.

ಮೈಸೂರು:ಸೊಸೆ ಮನೆಗೆ ಬರುವವರೆಗೂ ಹೊರಗಿನವಳು, ಬಂದ ಮೇಲೆ ಮನೆಯವಳೇ. ಅಂತೆಯೇ ನಾನು ಹೊರಗಿನಿಂದ ಬಂದು ಮನೆಯವನೇ ಆಗಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಯಾರು ಎಂಬ ಬಗ್ಗೆ ಚರ್ಚೆಯೇ ನಡೆದಿಲ್ಲ. ನನ್ನ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಸಮನ್ವಯ ಸಮಿತಿ ರಚನೆ ಆಗುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಮೂಲ ವಲಸಿಗ ಎಂಬ ಪ್ರಶ್ನೆಯು ಇಲ್ಲ. ಸಿಎಂ ಯಾರಾಗಬೇಕೆಂಬುದು ಚುನಾವಣೆ ಫಲಿತಾಂಶ ನಂತರ‌. ಇದನ್ನು ಶಾಸಕರು, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಚುನಾವಣೆ ಇನ್ನೂ ಎರಡೂವರೆ ವರ್ಷ ಇದೆ. ಈಗಲೇ ಸಿಎಂ ಅಭ್ಯರ್ಥಿ ಬಗ್ಗೆ ಮಾತುಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.

ಲಸಿಕೆ ವಿಚಾರವಾಗಿ ಮಾತನಾಡಿ, ಲಸಿಕೆ ವಿಚಾರದಲ್ಲಿ ಸುಧಾಕರ್ ಸುಳ್ಳು ಹೇಳುತ್ತಿದ್ದಾರೆ. ವಾಕ್ಸಿನ್ ಸ್ಟಾಕ್ ಇದ್ದರೆ ಜನ ಯಾಕೆ ಕ್ಯೂ ನಿಲ್ಲುತ್ತಿದ್ದರು. ಲಸಿಕೆಗಾಗಿ ಜನರು ಪರದಾಡುತ್ತಿದ್ದಾರೆ. ಸರ್ಕಾರಕ್ಕೆ ವಾಕ್ಸಿನ್ ಪೂರೈಸಲು ಆಗುತ್ತಿಲ್ಲ. ಸರ್ಕಾರದಲ್ಲಿ ಸಚಿವರ ನಡುವೆ ಸಮನ್ವಯತೆ ಇಲ್ಲ. ವಾಕ್ಸಿನ್ ಹಂಚಿಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರ ವಿಫಲವಾಗಿವೆ‌. ಸರಿಯಾದ ಯೋಜನೆಯಿಲ್ಲದ ಕಾರಣ ಜನ ಅಲೆಯುವಂತೆ ಮಾಡಿದೆ ಎಂದು ಟೀಕಿಸಿದರು.

ಯೂತ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಅದೇ ಪ್ರತ್ಯೇಕವಾದ ವ್ಯವಸ್ಥೆ, ಆದರೂ ನಾನು ಸಲಹೆ ಕೊಟ್ಟಿದ್ದೆ. ಪ್ರತ್ಯೇಕ ಚುನಾವಣೆ ನಡೆದ ಮೇಲೆ ಅವರ ಆಯ್ಕೆ ಆಗಿದೆ. ಹೊಂದಾಣಿಕೆಯಿಂದ ಒಬ್ಬರನ್ನು ನೇಮಿಸಿ ಎಂದು ಹೇಳಿದ್ದೆ. ಇದರಲ್ಲಿ ನನ್ನದಾಗಲಿ, ಡಿಕೆಶಿಯವರದ್ದಾಗಲಿ ಪಾತ್ರ ಇರುವುದಿಲ್ಲ. ಈ ವಿಚಾರದಲ್ಲಿ ಗೊಂದಲಗಳು ಬೇಡ ಎಂದು ತಿಳಿಸಿದರು.

ತುರ್ತಾಗಿ ಮುಂಗಾರು ಅಧಿವೇಶನ ಕರೆಯಲಿ
ತುರ್ತಾಗಿ ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ಕರೆಯಬೇಕು. ಇಂತಹ ತುರ್ತು ಪರಿಸ್ಥಿತಿಯಲ್ಲಿ ಅಧಿವೇಶನ ಕರೆಯದೇ ಇನ್ನು ಯಾವ ಸಂದರ್ಭದಲ್ಲಿ ಕರೆಯುತ್ತಾರೆ? ವಿರೋಧ ಪಕ್ಷಗಳನ್ನು ಎದುರಿಸಲು ಆಡಳಿತ ಪಕ್ಷಕ್ಕೆ ಭಯವಿದೆ. ಹೀಗಾಗಿಯೇ ಅಧಿವೇಶನ ಕರೆಯುತ್ತಿಲ್ಲ. ಅಧಿವೇಶನ ಕರೆದರೆ ಸರ್ಕಾರದ ಬಣ್ಣ ಬದಲಾಗುತ್ತೆ ಎಂಬುದು ಅವರಿಗೆ ಗೊತ್ತಿದೆ. ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆ ಇದ್ದರೆ ಅಧಿವೇಶನ ಕರೆಯಬೇಕು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !! Twitter Facebook LinkedIn WhatsApp ಮಂಗಳೂರು:

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು