ಶುಕ್ರವಾರ, ಮೇ 3, 2024
ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ಅತ್ಯಾಚಾರ ಆರೋಪ ; ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು..!-4 ವರ್ಷಗಳ ಪದವಿ ಕೋರ್ಸ್ ನಿಯಮ ಸ್ಥಗಿತ: 3 ವರ್ಷದ ಡಿಗ್ರಿ ವ್ಯಾಸಂಗಕ್ಕೆ ಸರ್ಕಾರ ಸೂಚನೆ..!-ಮೊಬೈಲ್ ನಲ್ಲಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ; ಕುಸಿದು ಬಿದ್ದು ಸಾವು ಎಂದು ಕಥೆ..!-ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!-ಅಮೇಥಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಹಿನ್ನೆಲೆ ಏನು?-ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬೆಂಬಲಿಸುವಂತೆ ನೇಹಾ ತಂದೆ ನಿರಂಜನ ಹಿರೇಮಠ ಮನವಿ..!-ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!-ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಗೆ ಕೈ ತಪ್ಪಿದ ಟಿಕೆಟ್ ; ಆದರೂ ಮಗನಿಗೆ ಬಿಜೆಪಿ ಟಿಕೆಟ್ ಘೋಷಣೆ.!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ಚುನಾವಣೆ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತದೆ ; ಸಿ.ಟಿ ರವಿ-ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

`ಸೂರ್ಯ’ನ ಶಾಖಕ್ಕೆ ಕರಗಿದ ವಿಂಡೀಸ್ – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

Twitter
Facebook
LinkedIn
WhatsApp
`ಸೂರ್ಯ’ನ ಶಾಖಕ್ಕೆ ಕರಗಿದ ವಿಂಡೀಸ್ – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

ಟ್ರೆನಿನಾಡ್: ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಅಬ್ಬರ ಹಾಗೂ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಬಲದಿಂದ ಭಾರತ ತಂಡ 3ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು 7 ವಿಕೆಟ್ ಭರ್ಜರಿ ಸಾಧಿಸಿದೆ.

ಇಲ್ಲಿನ ವಾರ್ನರ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ, ಭಾರತಕ್ಕೆ 165 ರ ನ್‌ಗಳ ಗುರಿ ನೀಡಿತು. ಸಾಧಾರಣ ರನ್‌ಗಳ ಗುರಿ ಬೆನ್ನತ್ತಿದ ಭಾರತ 19 ಓವರ್‌ಗಳಲ್ಲೇ 3 ವಿಕೆಟ್ ನಷ್ಟಕ್ಕೆ 165 ರನ್‌ಗಳಿಸಿ ಮುನ್ನಡೆ ಸಾಧಿಸಿತು. ರೋಹಿತ್ ಶರ್ಮಾ ಬಳಗ ಈ ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಮುನ್ನಡೆ ಸಾಧಿಸಿದೆ.

`ಸೂರ್ಯ’ನ ಶಾಖಕ್ಕೆ ಕರಗಿದ ವಿಂಡೀಸ್ – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

165 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಅವರು ಬೆನ್ನಿನ ಸ್ನಾಯು ಸೆಳೆತಕ್ಕೆ ಒಳಗಾಗಿ 11 ರನ್‌ಗಳಿಸಿ ಪೆವಿಲಿಯನ್‌ಗೆ ಮರಳಿದರು. 

ಈ ವೇಳೆ ಮತ್ತೊಬ್ಬ ಆರಂಭಿಕನಾಗಿದ್ದ ಸೂರ್ಯಕುಮಾರ್ ಯಾದವ್‌ಗೆ 2ನೇ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಸಾಥ್ ನೀಡಿದರು. ಸೂರ್ಯಕುಮಾರ್ ಮತ್ತು ಶ್ರೇಯಸ್ ಅಯ್ಯರ್ 86 ರನ್ ಜೊತೆಯಾಟ ಆಡಿದರು.

`ಸೂರ್ಯ’ನ ಶಾಖಕ್ಕೆ ಕರಗಿದ ವಿಂಡೀಸ್ – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

ವಿಂಡೀಸ್ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಸೂರ್ಯಕುಮಾರ್ 8 ಬೌಂಡರಿ ಮತ್ತು 4 ಸಿಕ್ಸರ್ ಚಚ್ಚಿದರು. ಡೊಮಿನಿಕ್ ಡ್ರೇಕ್ಸ್ ಎಸೆತದಲ್ಲಿ ಔಟಾಗುವ ಮುನ್ನ ಅವರು ತಂಡವನ್ನು ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾಕ್ಕೆ ಆಸರೆಯಾದ ರಿಷಭ್ ಪಂತ್ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೊಂದಿಗೆ ಅಜೇಯ 33 ರನ್‌ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ದೀಪಕ್ ಹೂಡಾ ಅಜೇಯ 10 ಹಾಗೂ ಹಾರ್ದಿಕ್ ಪಾಂಡ್ಯ 4 ರನ್ ಗಳಿಸಿದರು. ಟೀಂ ಇಂಡಿಯಾ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ 35 ರನ್ ನೀಡಿ 2 ವಿಕೆಟ್ ಉರುಳಿಸಿದರು. ಹಾರ್ದಿಕ್ ಪಾಂಡ್ಯ, ಅರ್ಶ್ದೀಪ್ ಸಿಂಗ್ ತಲಾ ಒದೊಂದು ವಿಕೆಟ್ ಪಡೆದರು.

ಮೇಯರ್ಸ್ ಆಸರೆ: ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ ಕೈಲ್ ಮೇಯರ್ಸ್ ಅವರ ಅರ್ಧಶತಕದ ನೆರವಿನಿಂದ ಉತ್ತಮ ಮೊತ್ತ ಕಲೆಹಾಕಿತ್ತು. 50 ಎಸೆತಗಳನ್ನು ಎದುರಿಸಿದ ಮೇಯರ್ಸ್ 8 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 73 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಬ್ರೆಂಡನ್ ಕಿಂಗ್ 20 ರನ್, ನಾಯಕ ನಿಕೊಲಸ್ ಪೂರನ್ 22 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.

ಒಟ್ಟಿನಲ್ಲಿ ಟೀಂ ಇಂಡಿಯಾವನ್ನು ಕಟ್ಟಿಹಾಕುವಲ್ಲಿ ವೆಸ್ಟ್ ಇಂಡೀಸ್ ಬೌಲರ್‌ಗಳು ವಿಫಲವಾದ್ದರಿಂದ ಗೆಲುವು ಟೀಂ ಇಂಡಿಯಾ ಪಾಲಾಯಿತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!

ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!

ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..! Twitter Facebook LinkedIn WhatsApp ಉಡುಪಿ : ವಿಪರೀತ ಸೆಖೆ ಹಿನ್ನಲೆ ರಾತ್ರಿ ಮಲಗಲು ಮನೆಯ ಟೆರೇಸ್ ಮೆಲೆ

ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!

ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!

ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.! Twitter Facebook LinkedIn WhatsApp ಬಂಟ್ವಾಳ: ಬಿ.ಸಿ.ರೋಡ್ ನೇತ್ರಾವತಿ ಸೇತುವೆಯ‌ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ

ಅಂಕಣ