ಸುಳ್ಯ: ತೋಟಕ್ಕೆ ಬಂದು ಕೆರೆಗೆ ಬಿದ್ದ ನಾಲ್ಕು ಕಾಡಾನೆಗಳು
Twitter
Facebook
LinkedIn
WhatsApp
ಸುಳ್ಯ, ಏ 13 : ಆಹಾರ ಹುಡುಕುತ್ತಾ ಬಂದ ಕಾಡಾನೆಗಳ ತೋಟಕ್ಕೆ ನುಗ್ಗಿ ಅಲ್ಲಿದ್ದ ಕೆರೆಗೆ ಬಿದ್ದ ಘಟನೆ ಸುಳ್ಯದ ಅಜ್ಜಾವರ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಸನತ್ ರೈ ಎಂಬವರ ತೋಟದಲ್ಲಿದ್ದ ಕೆರೆಗೆ ಎರಡು ಮರಿಯಾನೆ ಮತ್ತು ಎರಡು ದೊಡ್ಡ ಆನೆ ಬಿದ್ದಿವೆ. ಆಹಾರ ಅರಸುತ್ತಾ ಬಂದಿದ್ದ ಕಾಡಾನೆಗಳು ತೋಟದಲ್ಲಿ ಬಾಳೆಗಿಡ- ಅಡಿಕೆ ಮರ ಹುಡಿ ಮಾಡಿದ್ದು, ಬಳಿಕ ಕೆರೆಗೆ ಬಿದ್ದಿವೆ
ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಆಗಮಿಸಿ ಕಾರ್ಯಾಚರಣೆಗೆ ಸಿದ್ದತೆ ನಡೆಸಿದ್ದಾರೆ.ಜೆಸಿಬಿ ಬಳಸಿ ಕೆರೆಯನ್ನು ಅಗಲ ಮಾಡಿ ಕಾಡಾನೆಗಳನ್ನು ಹೊರತೆಗೆಯಲು ಪ್ರಯತ್ನ ಮಾಡುತ್ತಿದ್ದಾರೆ. ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಸುಳ್ಯ ಅಜ್ಜಾವರ, ಮಂಡೆಕೋಲು ಮುಂತಾದ ಭಾಗದಲ್ಲಿ ಕಾಡಾನೆ ಹಾವಳಿ ಇದೆ.