ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶ್ರದ್ಧಾ ಭೀಕರ ಹತ್ಯೆ ಪ್ರಕರಣ – ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟ ಕಿರಾತಕ

Twitter
Facebook
LinkedIn
WhatsApp
ಶ್ರದ್ಧಾ ಭೀಕರ ಹತ್ಯೆ ಪ್ರಕರಣ – ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟ ಕಿರಾತಕ

ನವದೆಹಲಿ: ಪ್ರಿಯಕರ ಅಫ್ತಾಬ್‍ನಿಂದಲೇ ಶ್ರದ್ಧಾ (Shraddha Walkar) ಭೀಕರ ಹತ್ಯೆ ಪ್ರಕರಣವು ದಿನೇ ದಿನೇ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಅಫ್ತಾಬ್ (Aftab Poonawala) ತನ್ನ ನಂಬಿ ಬಂದವಳ ಹತ್ಯೆ ಮಾಡಿದ್ದು ಹೇಗೆ ಎಂಬುದನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಖಾಕಿ ಎದುರು ಎಳೆಎಳೆಯಾಗಿ ಹತ್ಯೆ ಕಥನವನ್ನು ಕಿರಾತಕ ಬಿಚ್ಚಿಟ್ಟಿದ್ದು, ಅಫ್ತಾಬ್ ಹೇಳಿದ ಕಥೆ ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಪೊಲೀಸರ ಮುಂದೆ ಹೇಳಿದ್ದೇನು..?: ನಾನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಮೂಲದವ. ಡೇಟಿಂಗ್ ಆ್ಯಪ್‍ (Dating App) ನಲ್ಲಿ ಶ್ರದ್ಧಾ ಪರಿಚಯವಾಗಿತ್ತು. ಬಳಿಕ ಮುಂಬೈನ ಕಾಲ್ ಸೆಂಟರ್‍ನಲ್ಲಿ ಇಬ್ಬರು ಒಟ್ಟಿಗೆ ಕೆಲಸಕ್ಕೆ ಸೇರಿದೆವು. ನಮ್ಮ ಆತ್ಮೀಯತೆ ಹೆಚ್ಚಿ ಪ್ರೀತಿಸಲು ಪ್ರಾರಂಭಿಸಿದೆವು. 2019ರಲ್ಲಿ ಕೆಲಸ ಆರಂಭಿಸಿದ ನಮಗೆ ಎಲ್ಲವೂ ಸರಿಯಾಗಿತ್ತು. ನಮ್ಮ ಮದುವೆ (Marriage) ಬಗ್ಗೆ ಶ್ರದ್ಧಾ ಅವಳ ಮನೆಯಲ್ಲಿ ಪ್ರಸ್ತಾಪಿಸಿದಳು. ಅದಕ್ಕೆ ವಿರೋಧ ವ್ಯಕ್ತವಾಯಿತು. ವಿರೋಧ ಬಳಿಕ ನಾವು ಮುಂಬೈನ ನೈಗಾಂವ್‍ನಲ್ಲಿ ವಾಸಿಸಲು ಪ್ರಾರಂಭಿಸಿದೆವು. 

ಕೆಲವು ದಿನಗಳ ಬಳಿಕ ದೆಹಲಿಗೆ ಶಿಫ್ಟ್ ಆದೆವು. ದೆಹಲಿಯಿಂದ ಹಿಮಾಚಲ ಪ್ರದೇಶ 9Himachal Pradesh) ಕ್ಕೆ ಭೇಟಿ ನೀಡಿ ಮತ್ತೆ ದೆಹಲಿಗೆ ಮರಳಿದೆವು. ದೆಹಲಿಯ ಪಹರ್‍ಗಂಜ್‍ನ ಹೋಟೆಲ್‍ನಲ್ಲಿ ಒಂದು ದಿನ ಉಳಿದುಕೊಂಡೆವು. ನಂತರ ದಕ್ಷಿಣ ದೆಹಲಿಯ ಸೈದುಲಾಜಾಬ್‍ನಲ್ಲಿರುವ ಹಾಸ್ಟೆಲ್‍ನಲ್ಲಿ ತಂಗಿದ್ದೆವು. ಮೇ 15ರಂದು ಮೆಹ್ರೋಲಿ (Mehroli) ಯ ಛತ್ತರಪುರ ಪಹಾಡಿಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ಒಟ್ಟಿಗೆ ಇದ್ದೆವು. ಮೇ 18ರಂದು ಮದುವೆ ವಿಚಾರಕ್ಕೆ ಜಗಳ ಆರಂಭವಾಯಿತು. ನಾನು ಅವಳ ಬಾಯಿ ಮುಚ್ಚುವ ಪ್ರಯತ್ನ ಮಾಡಿದೆ. ಬಳಿಕ ಕತ್ತು ಹಿಸುಕಿದೆ ಅವಳು ಸಾವನ್ನಪ್ಪಿದಳು. 

ಮೇ 19ರಂದು ದೇಹದ ವಿಲೇವಾರಿ ಮಾಡುವ ಬಗ್ಗೆ ಚಿಂತಿಸಿದೆ. ಬಳಿಕ ಮಾರ್ಕೆಟ್‍ನಿಂದ 23,500 ರೂಪಾಯಿ ನೀಡಿ ಫ್ರಿಡ್ಜ್ (Fridge) ಖರೀದಿಸಿದೆ. ಸಣ್ಣ ಹರಿತವಾದ ಗರಗಸ ಖರೀದಿಸಿದೆ. ಮೇ 20ರಂದು ಅವಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ತುಂಬಿದೆ. ನಿತ್ಯ ರಾತ್ರಿ ಒಂದು ಗಂಟೆಯ ಬಳಿಕ ಕವರ್ ಗಳನ್ನು ಕಾಡಿನ ಮಧ್ಯಕ್ಕೆ ಹೋಗಿ ಎಸೆದು ಬರ್ತಿದ್ದೆ. ಯಾರಿಗೂ ಸಂಶಯ ಬಾರದಿರಲು ಅದೇ ಏರಿಯಾದಲ್ಲಿ ಓಡಾಡುತ್ತಿದ್ದೆ, ರಾತ್ರಿ ಹೆಚ್ಚು ಸದ್ದು ಆಗದಂತೆ ನೋಡಿಕೊಳ್ಳಲು ನೀರಿನ ಮೋಟರ್ (Motor) ಆನ್ ಮಾಡುತ್ತಿದ್ದೆ. ವಾಸನೆ ತಡೆಯಲು ಅಗರಬತ್ತಿ ಬಳಸುತ್ತಿದ್ದೆ. ಕೊಲೆಯ ಬಳಿಕ ದೇಹ ವೀಲೆವಾರಿ ಮಾಡಲು ಟೆಲಿವಿಷನ್ ಅಪರಾಧ ಸರಣಿ ‘ಡೆಕ್ಸ್ಟರ್’ ನೆರವಾಯಿತು. ಗೂಗಲ್‍ನಿಂದಲೂ ನಾನು ಮಾಹಿತಿ ಕಲೆ ಹಾಕಿ ಕೆಲಸ ಮಾಡಿ ಮುಗಿಸಿದೆ ಎಂಬುದಾಗಿ ತಿಳಿಸಿದ್ದಾನೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ