ವಿಷ ಸೇವಿಸಿ ಪ್ರೇಮಿಗಳಿಬ್ಬರ ಆತ್ಮಹತ್ಯೆ
Twitter
Facebook
LinkedIn
WhatsApp
ಯಾದಗಿರಿ: ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ (Yadgir) ಜಿಲ್ಲೆಯ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮದಲ್ಲಿ ನಡೆದಿದೆ.
ಶಹಾಪುರದ ಹುರುಸಗುಂಡಗಿ ಗ್ರಾಮದವರಾದ ಸುವರ್ಣ (20) ಮತ್ತು ಈಶಪ್ಪ (22) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇವರಿಬ್ಬರು 5 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. 2 ವರ್ಷದ ಹಿಂದೆ ಸುವರ್ಣ ಬೇರೆಯವನನ್ನು ಮದುವೆಯಾಗಿ ಬೆಂಗಳೂರಿನಲ್ಲಿ ತನ್ನ ಗಂಡನ ಜೊತೆ ವಾಸವಾಗಿದ್ದಳು.
ಸುವರ್ಣ ತನ್ನ `ಗಂಡನಿಗೆ ಹೇಳದೆ ಬೆಂಗಳೂರಿನಿಂದ ಹುರುಸಗುಂಡಗಿ ಗ್ರಾಮಕ್ಕೆ ಬಂದಿದ್ದಳು. ಈಶಪ್ಪ ಹಾಗೂ ಸುವರ್ಣ ಇಡೀ ರಾತ್ರಿ ಜೊತೆಯಾಗಿದ್ದು ಬೆಳಿಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.