ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತ ಬಾಲಕಿ ಮೇಲೆ ಆ್ಯಸಿಡ್ ದಾಳಿ

Twitter
Facebook
LinkedIn
WhatsApp
ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತ ಬಾಲಕಿ ಮೇಲೆ ಆ್ಯಸಿಡ್ ದಾಳಿ

ರಾಮನಗರ: ಪ್ರೀತಿ ನಿರಾಕರಿಸಿದಳೆಂದು ಕುಪಿತಗೊಂಡ ಯುವಕನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಆ್ಯಸಿಡ್ ದಾಳಿ (Acid Attack At Ramanagara) ನಡೆಸಿದ ಕ್ರೂರ ಘಟನೆ ರಾಮನಗರ ಜಿಲ್ಲೆಯ ಕನಕಪುರ ನಗರದಲ್ಲಿ ನಡೆದಿದೆ. ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದ ಸುಮಂತ್ ಎಂಬ ಆರೋಪಿಯೇ ಈ ಕೃತ್ಯ ಎಸಗಿದ್ದು, ಘಟನೆ ನಂತರ ಆರೋಪಿ ಪರಾರಿಯಾಗಿದ್ದಾನೆ. ಗಾಯಾಳು ಬಾಲಕಿಯನ್ನು ಕೂಡಲೇ ಕನಕಪುರ ತಾಲೂಕು‌ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾಖಿಸಲಾಗಿದೆ. ಪ್ರಕರಣ ಸಂಬಂಧ ಸುಮಂತ್ ವಿರುದ್ಧ ಕನಕಪುರ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದ ಪಾಗಲ್‌ ಪ್ರೇಮಿ ಸುಮಂತ್​ಗೆ ಪಿಯುಸಿ ವ್ಯಾಸಾಂಗ ನಡೆಸುತ್ತಿರುವ ಅಪ್ರಾಪ್ತ ಬಾಲಕಿ ಮೇಲೆ ಪ್ರೇಮಾಂಕುರವಾಗಿದೆ. ಈ ಬಗ್ಗೆ ಹೇಮಂತ್ ಬಾಲಕಿ ಜೊತೆ ಹೇಳಿಕೊಂಡಿದ್ದಾನೆ. ಆದರೆ ಸುಮಂತ್ ಪ್ರೀತಿಯನ್ನು ಆಕೆ ನಿರಾಕರಿಸಿದ್ದಾಳೆ. ಇದರಿಂದ ಸುಮಂತ್ ಆಕ್ರೋಶಗೊಂಡು ಆಕೆ ಮೇಲೆ ಹೇಯ ಕೃತ್ಯ ಎಸಗಲು ಸಂಚು ರೂಪಿಸುತ್ತಾನೆ.

ಪ್ರೀತಿ ನಿರಾಕಿಸಿದ ಬಾಲಕಿಗೆ ದೂರವಾಣಿ ಕರೆ ಮಾಡಿದ ಸುಮಂತ್, ನಿನ್ನ ಜೊತೆ ಮಾತನಾಡಬೇಕು ಎಂದು ಹೇಳಿ ಬೈಪಾಸ್ ರಸ್ತೆ ಬಳಿ ಬರುವಂತೆ ಮನವಿ ಮಾಡಿಕೊಂಡಿದ್ದಾನೆ. ಅದರಂತೆ ಬಾಲಕಿ ತನ್ನ ತಮ್ಮನ ಜೊತೆ ತೆರಳಿ ಸುಮಂತ್​ನನ್ನು ಭೇಟಿಯಾಗುತ್ತಾಳೆ. ಈ ವೇಳೆ ಬಾಲಕಿಯ ಮುಖಕ್ಕೆ ಸುಮಂತ್ ಆ್ಯಸಿಡ್ ಎರಚಿ ಬೈಕ್​ ಮೂಲಕ ಪರಾರಿಯಾಗಿದ್ದಾನೆ. ಕೂಡಲೇ ಗಾಯಾಳು ಬಾಲಕಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸದ್ಯ ಬಾಲಕಿಯನ್ನು ಕತ್ತಲೆಗೆ ತಳ್ಳಲು ಯತ್ನಿಸಿದ ಆರೋಪಿ ಸುಮಂತ್​ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ