ಶನಿವಾರ, ಮೇ 18, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿಧಾನಸೌಧದ ಒಳಗೆ ಎಣ್ಣೆ ಬಾಟ್ಲಿ ತಂದ ಪೊಲೀಸ್ ಪೇದೆ- ಕೈ ಜಾರಿ ಬಿದ್ದು ಪೀಸ್, ಪೀಸ್

Twitter
Facebook
LinkedIn
WhatsApp
parvathi 1

ಬೆಂಗಳೂರು: ಪೊಲೀಸ್ ಪೇದೆಯೊಬ್ಬ ವಿಧಾನಸೌಧ (Vidhanasoudha) ದೊಳಗೆ ಎಣ್ಣೆ ಬಾಟ್ಲಿ ತಂದು ಫಜೀತಿಗೆ ಸಿಲುಕಿದ ಪ್ರಸಂಗವೊಂದು ನಡೆದಿದೆ.

ಹೌದು. ಕೆಂಗಲ್ ಗೇಟ್ (Kengal Gate) ಬಳಿ ಪೊಲೀಸಪ್ಪನ ಎಣ್ಣೆ ಬಾಟ್ಲಿ ಪುರಾಣ ನಡೆದಿದೆ. ವಿಧಾನಸೌಧ ಒಳಗಡೆಯಿಂದ ಹೊರೆಗೆ ಹೋಗುತ್ತಿದ್ದ ಮಫ್ತಿಯಲ್ಲಿದ್ದ ಪೊಲೀಸ್ ಪೇದೆ, ಬ್ಯಾಗ್ ನಲ್ಲಿ ಮದ್ಯದ ಬಾಟ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಹೀಗೆ ಹೊರಗೆ ಹೋಗುವಾಗ ಬಾಟ್ಲಿ ಕೈ ಜಾರಿ ಬಿದ್ದಿದೆ. ಪರಿಣಾಮ ಪೀಸ್ ಪೀಸ್ ಆಗಿದೆ. ಆತುರವಾಗಿ ಚೂರಾದ ಬಾಟ್ಲಿ ಪೀಸ್ ಎತ್ತಿಕೊಂಡು ಪೇದೆ ಅಲ್ಲಿಂದ ಹೋಗಿದ್ದಾರೆ.

ಇತ್ತ ವಿಚಾರ ತಿಳಿಯುತ್ತಿದ್ದಂತೆಯೇ ಮಾಧ್ಯಮದವರು ಸ್ಥಳಕ್ಕೆ ತೆರಳಿದ್ದು, ಕ್ಯಾಮೆರಾ ಕಂಡ ಕೂಡಲೇ ಪೊಲೀಸ್ ಪೇದೆ ವಿಧಾನಸೌಧದಿಂದ ಪರಾರಿಯಾಗಿದ್ದಾರೆ. ಸದ್ಯ ವಿಧಾನಸೌಧ ಭದ್ರತೆ ಪೊಲೀಸರು, ಬಾಟ್ಲಿ ತಂದ ಪೊಲೀಸ್ ಪೇದೆ ಯಾರು ಅಂತ ಮಾಹಿತಿ ನೀಡಿಲ್ಲ. 

ಹಾಗಾದ್ರೆ ವಿಧಾನಸೌಧಕ್ಕೆ ಮದ್ಯದ ಬಾಟ್ಲಿ ಬಂದಿದ್ದು ಹೇಗೆ?, ಭದ್ರತೆ ತಪ್ಪಿಸಿ ಮದ್ಯದ ಬಾಟ್ಲಿ ವಿಧಾನಸೌಧದ ಒಳಗೆ ಹೋಗಿದ್ದು ಹೇಗೆ?, ವಿಧಾನಸೌಧದ ಒಳಗಿಂದ ಮದ್ಯದ ಬಾಟ್ಲಿ ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದರು..?, ಪೊಲೀಸರೇ ಹೀಗೆ ಮಾಡಿದ್ರೆ ವಿಧಾನಸೌಧಕ್ಕೆ ರಕ್ಷಣೆ ಹೇಗೆ ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ