ಗುರುವಾರ, ಮೇ 2, 2024
ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?-ಪ್ರಜ್ವಲ್ ರೇವಣ್ಣಗೆ ಕಠೋರ ಶಿಕ್ಷೆ ನೀಡಿ: ನಾವು ಬೆಂಬಲಿಸುತ್ತೇವೆ; ಅಮಿತ್ ಶಾ-ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ-ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಕಟ ಮಾಡದಂತೆ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ತಂದ ಕೆ.ಎಸ್‌. ಈಶ್ವರಪ್ಪ ಪುತ್ರ ಕೆ.ಇ .ಕಾಂತೇಶ್‌!-ದಾರಿ ತಪ್ಪಿದ್ದು ಮಹಿಳೆಯರಲ್ಲ, ನಿಮ್ಮ ಮಗ - ಪ್ರಕಾಶ್ ರೈ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆಗೆ ಇಳಿದ ಶಿಕ್ಷಕರಿಗೆ ಶಾಕ್; ಕಾಂಡೋಮ್, ಗರ್ಭನಿರೋಧಕ ಮಾತ್ರೆ ಪತ್ತೆ!

Twitter
Facebook
LinkedIn
WhatsApp
ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆಗೆ ಇಳಿದ ಶಿಕ್ಷಕರಿಗೆ ಶಾಕ್; ಕಾಂಡೋಮ್, ಗರ್ಭನಿರೋಧಕ ಮಾತ್ರೆ ಪತ್ತೆ!

ಇತ್ತೀಚೆಗೆ  ಶಾಲೆಯಲ್ಲಿ ಮಕ್ಕಳ (School Student) ಕಾಟಕ್ಕೆ ಬೇಸತ್ತ ಶಿಕ್ಷಕರು (Teacher) ರಾಜೀನಾಮೆಗೆ ಮುಂದಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಬೆಂಗಳೂರಿನ (Bengaluru) ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್​ ಪರಿಶೀಲನೆ (School Bag Checking) ನಡೆಸಿದ ಶಿಕ್ಷಕರು ಒಂದು ಕ್ಷಣ ಶಾಕ್ ಆಗಿದ್ದಾರೆ. ಬ್ಯಾಗ್​ನಲ್ಲಿ ಪತ್ತೆಯಾದ ವಸ್ತುಗಳನ್ನು ಕಂಡು ಶಿಕ್ಷಕರು ಈ ವಿಷಯವನ್ನ ಶಾಲಾ ಅಡಳಿತ ಮಂಡಳಿಯ (School Administration) ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗಳು ಪೋಷಕರಿಗೆ ಮಕ್ಕಳ (Children Behavior) ನಡವಳಿಕೆ ಮೇಲೆ ನಿಗಾ ಇರಿಸುವಂತೆ ಸಲಹೆ ನೀಡಿದೆ. ಇದರ ಜೊತೆಗೆ ಮಕ್ಕಳ ಬ್ಯಾಗ್​ಗಳನ್ನು ಪರಿಶೀಲನೆ ಮತ್ತು ಅವರ ಶಾಲಾ ಹಾಜರಾತಿ (School Attendance) ಬಗ್ಗೆಯೂ ಗಮನ ನೀಡುವಂತೆ ಸೂಚನೆ ನೀಡಿದೆ. ಅದರಲ್ಲಿಯೂ 9 ಮತ್ತು 10ನೇ ತರಗತಿ ಮಕ್ಕಳ ಬ್ಯಾಗ್​ಗಳಲ್ಲಿ ಈ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.


ಬೆಂಗಳೂರು ನಗರದ ಹಲವು ಶಾಲಾ ಮಕ್ಕಳ ಬ್ಯಾಗ್​ಗಳಲ್ಲಿ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿವೆಯಂತೆ. ಇದರ ಜೊತೆಗೆ ಸಿಗರೇಟ್, ಲೈಟರ್, ಫೆವಿಕಾಲ್ ಮುಂತಾದ ವಸ್ತುಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ಕಾಂಡೋಮ್, ಗರ್ಭ ನಿರೋಧಕ‌ ಮಾತ್ರೆ ಪತ್ತೆ


9 ಮತ್ತು 10ನೇ ತರಗತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬ್ಯಾಗ್ ಗಳಲ್ಲಿ ಕಾಂಡೋಮ್, ಗರ್ಭ ನಿರೋಧಕ‌ ಮಾತ್ರೆ ಪತ್ತೆಯಾಗಿರುವ ಮಾಹಿತಿ ತಿಳಿದು ಬಂದಿದೆ.

 

ಮಕ್ಕಳಿಗೆ ಕೌನ್ಸಿಲಿಂಗ್ ನೀಡಲು ಸಲಹೆ


ಈ ಬಗ್ಗೆ ಎಚ್ಚರವಹಿಸುವಂತೆ ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಮಕ್ಕಳು ಮನೆಗೆ ಬರುವ ಮತ್ತು ಹೊರಡು ವೇಳೆ ಹಾಗೂ ನಡವಳಿಕೆ ಬಗ್ಗೆ  ಗಮನ ಹರಿಸುವಂತೆ ಸೂಚನೆ ನೀಡಿದೆ. ನಗರದ ಕೆಲವು ಶಾಲೆಗಳಲ್ಲಿ 10 ದಿನಗಳ ಕಾಲ ರಜೆ ಘೋಷಿಸಿ ಕೌನ್ಸಿಲಿಂಗ್ ನೀಡುವಂತೆ ಸಲಹೆ ನೀಡಲಾಗಿದೆ.

ಮೊಬೈಲ್ ತರುತ್ತಿರುವ ಮಕ್ಕಳು


ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದ ಹಿನ್ನೆಲೆ ಬ್ಯಾಗ್ ಪರಿಶೀಲನೆ ಮಾಡಲಾಗಿತ್ತು. ಶಾಲೆಯಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಬ್ಯಾಗ್​ನೊಳಗೆ ಇರಿಸಿಕೊಂಡು ಫೋನ್ ತರುತ್ತಿರೋದು ಬ್ಯಾಗ್​ ಪರಿಶೀಲನೆ ನಡೆಸುವ ವೇಳೆ ಬೆಳಕಿಗೆ ಬಂದಿದೆ.


ಕ್ಯಾಮ್ಸ್ ಆತಂಕ


ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳುವಂತೆ ಶಾಲಾ ಶಿಕ್ಷಣ ಒಕ್ಕೂಟ ಕ್ಯಾಮ್ಸ್ ಆಗ್ರಹಿಸಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆ ತಪ್ಪು ದಾರಿಗೆ ಹೋಗುವ ಆತಂಕವನ್ನು ಕ್ಯಾಮ್ಸ್ ಸಂಘಟನೆ ವ್ಯಕ್ತಪಡಿಸಿದೆ.


ಮಕ್ಕಳ ಕಿರುಕುಳಕ್ಕೆ ಬೇಸತ್ತು ಶಿಕ್ಷಕರೇ ರಾಜೀನಾಮೆ ನೀಡೋ ಸ್ಥಿತಿ!


ಮಕ್ಕಳು ನೀಡುತ್ತಿರುವ ಕಾಟಕ್ಕೆ ಶಿಕ್ಷಕರೇ ಹೆದರಿ ಕಂಗಾಲಾಗಿ ಹೋಗಿದ್ದಾರೆ. ಶಾಲೆಯಲ್ಲಿ ಕೆಲ ಮಕ್ಕಳ ದುರ್ವರ್ತನೆಯಿಂದ ಶಿಕ್ಷಕರು ಬೇಸತ್ತು ಹೋಗಿದ್ದಾರೆ ಅಷ್ಟೇ ಅಲ್ಲ ಇವರ ವರ್ತನೆ ಅಸಭ್ಯ ನಡುವಳಿಕೆಗಳು ಶಿಕ್ಷಕರಿಗೆ ಸಂಕಷ್ಟವಾಗಿ ಪರಿಣಮಿಸಿದೆ. ಇತರೆ ಮಕ್ಕಳ ಶಿಕ್ಷಣ ಹಕ್ಕು ಉಲ್ಲಂಘನೆ ಆಗ್ತಿದೆಯೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರನ್ನೇ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆಂದು ಆರೋಪ


ಹೌದು ಶಿಕ್ಷಕರನ್ನು ಬಹುವಚನದಲ್ಲಿ ಮಾತನಾಡಿಸುವುದು ಅವರಿಗೆ ತಕ್ಕ ಗೌರವ ನೀಡುವುದು ಮೊದಲಿನಿಂದಲೂ ನಡೆದುಕೊಂಡು ಬಂದ ರೂಢಿ. ಆದರೀಗ ಬಹುವಚನ ಬಿಡಿ, ಏಕವಚನವೂ ಅಲ್ಲ, ಬದಲಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿದೆ. ಗುಂಪುಗಾರಿಕೆ, ಹೊಡೆದಾಟ, ಬಡಿದಾಟವನ್ನ ಇವರು ಶಾಲೆಗಳಲ್ಲೇ ಆರಂಭಿಸಿ ಬಿಟ್ಟಿದ್ದಾರಂತೆ ಹೀಗೆಂದು ಶಿಕ್ಷಕರೇ ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ