ಶುಕ್ರವಾರ, ಮೇ 3, 2024
ಅಮೇಥಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಹಿನ್ನೆಲೆ ಏನು?-ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬೆಂಬಲಿಸುವಂತೆ ನೇಹಾ ತಂದೆ ನಿರಂಜನ ಹಿರೇಮಠ ಮನವಿ..!-ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!-ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಗೆ ಕೈ ತಪ್ಪಿದ ಟಿಕೆಟ್ ; ಆದರೂ ಮಗನಿಗೆ ಬಿಜೆಪಿ ಟಿಕೆಟ್ ಘೋಷಣೆ.!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ಚುನಾವಣೆ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತದೆ ; ಸಿ.ಟಿ ರವಿ-ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.!-ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಏಸುರಾಜ್ ಕ್ರಿಶ್ಚಿಯನ್ ಎಂಬ ಆರೋಪ ಸುಳ್ಳು; ರಾಮಲಿಂಗಾ ರೆಡ್ಡಿ-ರಾಮಲಿಂಗೇಶ್ವರ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾವು ಸಂವಿಧಾನ ಬದಲಾವಣೆ ಮಾಡುವುದಿಲ್ಲ; ಬಿಜೆಪಿ ಶಾಸಕ ಶಿವರಾಜ್​ ಪಾಟೀಲ್-ಅಮೇಠಿ ಬದಲು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಹೇಗೆ..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವನಿತಾ ಪ್ರೀಮಿಯರ್‌ ಲೀಗ್‌:ಆರ್‌ಸಿಬಿ ವಿರುದ್ಧ ಭರ್ಜರಿ ಜಯಗಳಿಸಿದ ಮುಂಬೈ

Twitter
Facebook
LinkedIn
WhatsApp
Matthews Brunt

ಮುಂಬೈ : ಇಲ್ಲಿನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ವನಿತಾ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವನಿತೆಯರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 9 ವಿಕೆಟ್‌ಗಳಿಂದ ಅಮೋಘ ಗೆಲುವು ಸಾಧಿಸಿ ಸಂಭ್ರಮಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.4 ಓವರ್ ಗಳಲ್ಲಿ 155 ರನ್ ಗಳಿಗೆ ಆಲೌಟಾಯಿತು. ಸ್ಮೃತಿ ಮಂಧಾನ 23, ಎಸ್ ಡಿವೈನ್ 16 ರನ್ ಗಳಿಸಿದರು. ರಿಚಾ ಘೋಷ್28, ಕನಿಕಾ ಅಹುಜಾ 22, ಶ್ರೇಯಾಂಕಾ ಪಾಟೀಲ್ 23, ಮೇಗನ್ ಶುಟ್ಸ್ಟ್ 20 ರನ್ ಗಳಿಸಿ ತಂಡ ಗೌರವಯುತ ಮೊತ್ತ ಕಲೆ ಹಾಕಲು ನೆರವಾದರು.

index 3

ಮುಂಬೈ ಪರ ಹೇಲಿ ಮ್ಯಾಥ್ಯೂಸ್ 3 ವಿಕೆಟ್ ಪಡೆದರು. ಸೈಕಾ ಇಶಾಕ್ ಮತ್ತು ಅಮೆಲಿಯಾ ಕೆರ್ ತಲಾ 2 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಮುಂಬೈ ಹೇಲಿ ಮ್ಯಾಥ್ಯೂಸ್ ಅವರ ಸ್ಪೋಟಕ ಆಟದಿಂದ ಭರ್ಜರಿ ಗೆಲುವು ಸಾಧಿಸಿತು. 38 ಎಸೆತಗಳಲ್ಲಿ 13 ಬೌಂಡರಿ 1 ಸಿಕ್ಸರ್ ಸಹಿತ ಮತ್ತು 77 ರನ್ ಚಚ್ಚಿದ ಅವರು ಅಜೇಯರಾಗಿ ಉಳಿದರು. ಯಾಸ್ತಿಕಾ ಭಾಟಿಯಾ 23 ರನ್ ಗಳಿಸಿ ಔಟಾದರು. ನ್ಯಾಟ್ ಸ್ಕೈವರ್ 29 ಎಸೆತಗಳಲ್ಲಿ 55 ರನ್ ಬಾರಿಸಿ ಭರ್ಜರಿ ಗೆಲುವು ತಂದಿಟ್ಟರು. 14.2 ಓವರ್ ಗಲ್ಲಿ 1 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಜಯಭೇರಿ ಬಾರಿಸಿತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ