ಬುಧವಾರ, ಮೇ 15, 2024
ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!-ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ರೇವಣ್ಣ ಪ್ಲೈಟ್ ಹತ್ತದೆ ಮತ್ತೆ ವಿದೇಶದಲ್ಲಿ; ಎಸ್ಐಟಿ ಮುಂದಿನ ನಡೆ ಏನು.?-ನಟಿ ವೈಷ್ಣವಿ ಗೌಡಗೆ ಟ್ರಾಫಿಕ್ ಪೊಲೀಸರಿಂದ ದಂಡ; ಮಂಗಳೂರಿನ ಜಯಪ್ರಕಾಶ್‌ ಎಕ್ಕೂರುರವರಿಂದ ದೂರು.!-8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಖಾಸಗಿ ಶಾಲೆಯ ಮಾಲೀಕನ ಬಂಧನ!-Breaking NEWS: ಲಾರಿಗೆ ಡಿಕ್ಕಿ ಹೊಡೆದು ಬಸ್‌ಗೆ ಬೆಂಕಿ; 6 ಮಂದಿ ಸಾವು-Rakhi Sawant: ಹೃದಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ರಾಖಿ ಸಾವಂತ್; ಫೋಟೋ ವೈರಲ್!-Gold Rate: ನಿಮ್ಮ ನಗರದಲ್ಲಿ ಆಭರಣದ ಬೆಲೆ ಹೇಗಿದೆ.!-ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಲಾಕ್‌ಡೌನ್‌ನಿಂದ ಶೇ. 41ರಷ್ಟು ಜನರಿಗೆ ಉದ್ಯೋಗ ನಷ್ಟ

Twitter
Facebook
LinkedIn
WhatsApp
ಲಾಕ್‌ಡೌನ್‌ನಿಂದ ಶೇ. 41ರಷ್ಟು ಜನರಿಗೆ ಉದ್ಯೋಗ ನಷ್ಟ

ಬೆಂಗಳೂರು: ಲಾಕ್‌ಡೌನ್‌ ಸಮಯದಲ್ಲಿ ಶೇ. 41ರಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದು, ಕೊರೊನಾ ಸಾಂಕ್ರಾಮಿಕ ರೋಗ ಬಂದು ಒಂದೂವರೆ ವರ್ಷ ಕಳೆದರೂ ಶೇ. 21ರಷ್ಟು ಜನರು ಹಿಂದಿನ ವೇತನ ಪಡೆದುಕೊಳ್ಳಲು ಸಾಧ್ಯವಾಗದಿರುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಕೊರೊನಾ ಸಮಯದಲ್ಲಿ ಬೆಂಗಳೂರು ನಗರದಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರ ಕುರಿತು ಅಜೀಂ ಪ್ರೇಮ್‌ ಜೀ ವಿಶ್ವವಿದ್ಯಾಲಯವು ಕೈಗೊಂಡ “ಕೊರೊನಾ ಸಾಂಕ್ರಾಮಿಕ ಪರಿಣಾಮಗಳು’ ಕುರಿತ ಸಮೀಕ್ಷೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.
ನಗರದ 33 ವಾರ್ಡ್‌ಗಳಲ್ಲಿ 3 ಸಾವಿರ ಕುಟುಂಬಗಳಲ್ಲಿ ಸಮೀಕ್ಷೆ ನಡೆಸಿದ್ದು, ಲಾಕ್‌ಡೌನ್‌ ವೇಳೆ ಜನರ ಜೀವನೋಪಾಯ, ಉದ್ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರ ಮತ್ತು ಆರ್ಥಿಕತೆ ಮೇಲೆ ಉಂಟಾದ ಪರಿಣಾಮಗಳನ್ನು ಕುರಿತು ಸಮೀಕ್ಷೆ ನಡೆಸಿದೆ. ವಾಹನ ಚಾಲಕರು, ದಿನಗೂಲಿ ನೌಕರರು, ಮನೆಗೆಲಸದವರು ಮತ್ತು ಕಾರ್ಖಾನೆಗಳ ಕಾರ್ಮಿಕರನ್ನು ಒಳಗೊಂಡ ಸಮೀಕ್ಷೆಯನ್ನು 2021ರ ಅಕ್ಟೋಬರ್‌ ತಿಂಗಳಿನಲ್ಲಿ ನಡೆಸಲಾಗಿದೆ.

ಶೇ. 80 ಮಂದಿಗೆ ಕನಿಷ್ಠ ವೇತನವೂ ಇರಲಿಲ್ಲ
2020ರ ಲಾಕ್‌ಡೌನ್‌ ಅವಧಿಯ ಅನಂತರವೂ ಉದ್ಯೋಗ ಮತ್ತು ಆದಾಯ ನಷ್ಟಗಳು ಮುಂದುವರಿದಿವೆ. ಫೆಬ್ರವರಿ 2021ರಲ್ಲಿ ಶೇ. 41ರಷ್ಟು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದು, ಶೇ. 21ರಷ್ಟು ಜನರಿಗೆ ಆದಾಯ ಕುಂಠಿತವಾಗಿದೆ. ದಿನಗೂಲಿ ಕಾರ್ಮಿಕರು, ಮನೆಗೆಲಸ ಮಾಡುವವರು ಮತ್ತು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿರುವ ಶ್ರಮಿಕರು ಅತ್ಯಂತ ಹೆಚ್ಚು ಹಾನಿಗೆ ತುತ್ತಾಗಿದ್ದಾರೆ. 2021ರ ಅಕ್ಟೋಬರ್‌ನಲ್ಲಿಯೂ ಶೇ. 21ರಷ್ಟು ಪುರುಷರು ಮತ್ತು ಶೇ. 15ರಷ್ಟು ಮಹಿಳೆಯರು ಉದ್ಯೋಗ ಕಳೆದುಕೊಂಡ ಸ್ಥಿತಿ ಮುಂದುವರಿದಿದೆ ಎಂದರು. ಶೇ. 80ರಷ್ಟು ಜನರಿಗೆ ರಾಷ್ಟ್ರೀಯ ಕನಿಷ್ಠ ವೇತನ (ಪ್ರತಿ ದಿನಕ್ಕೆ 119 ರೂ.) ಕೂಡ ಕಡಿಮೆಯಾಗಿದೆ. ಅದೇ ರೀತಿ ಆಹಾರ ಅಭದ್ರತೆ ಕೂಡ ತೀವ್ರವಾಗಿ ಏರಿಕೆ ಕಂಡಿದೆ. ಶೇ. 40ರಷ್ಟು ಕುಟಂಬಗಳ ಜನರು ಕೊರೊನಾ ಪೂರ್ವದಲ್ಲಿ ಸೇವಿಸುತ್ತಿದ್ದ ಆಹಾರಕ್ಕಿಂತ ಕಡಿಮೆ ಪ್ರಮಾಣದ ಆಹಾರವನ್ನು ಸೇವಿಸಿದ್ದಾರೆ.
ಸಾಲ ತೀರಿಸುವುದಕ್ಕಾಗಿ ಸಾಲ
ಕೊರೊನಾ ಸಮಯದಲ್ಲಿ ಜನರು ಈ ಹಿಂದೆ ಮಾಡಿದ್ದ ಹಳೆಯ ಸಾಲವನ್ನು ತೀರಿಸಲು ಹೊಸದಾಗಿ ಸಾಲ ಮಾಡಿಕೊಂಡಿದ್ದಾರೆ. ಶೇ. 11ರಷ್ಟು ಜನರು ಜೀವನ ನಿರ್ವಹಣೆ ಮತ್ತು ಹಳೆಯ ಸಾಲವನ್ನು ತೀರಿಸಲು ಹೊಸ ಸಾಲ ಮಾಡಿದ್ದಾರೆ. ಶೇ. 15ರಷ್ಟು ಜನರು ಒಡವೆಗಳನ್ನು ಮಾರಿ ಅಥವಾ ಗಿರವಿ ಇಟ್ಟಿರುವುದು ತಿಳಿದು ಬಂದಿದೆ.
ಬಿಪಿಎಲ್‌ ಕುಟಂಬಗಳಿಗೆ ಪಡಿತರ ಬಂಪರ್‌ ಲಾಕ್‌ಡೌನ್‌ ಸಮಯದಲ್ಲಿ ಶೇ. 55ರಷ್ಟು ಬಿಪಿಎಲ್‌ ಪಡಿತರ ಚೀಟಿದಾರರು ಕೊರೊನಾ ಪೂರ್ವಕ್ಕಿಂತ ಹೆಚ್ಚಿನ ಧಾನ್ಯಗಳನ್ನು ಪಡೆದಿದ್ದಾರೆ. ಶೇ. 32ರಷ್ಟು ಜನರು ಕೆಲವು ತಿಂಗಳು ಮಾತ್ರ ಹೆಚ್ಚಿನ ರೇಷನ್‌ ಪಡೆದಿರುವುದು ತಿಳಿದು ಬಂದಿದೆ.

ಜನರಿಗೆ ತಲುಪದ ಜನಧನ
ರಾಜ್ಯ ಸರಕಾರವು ನಗದು ಮೂಲಕ ನೀಡಿದ ನೆರವು ಕೇವಲ ಶೇ. 3ರಷ್ಟು ಜನರಿಗೆ ಮಾತ್ರ ತಲುಪಿದೆ. ಈ ಪೈಕಿ ಶೇ. 78ರಷ್ಟು ಮಹಿಳೆಯರ ಕುಟುಂಬಗಳಲ್ಲಿ ಜನಧನ ಖಾತೆ ಇರಲಿಲ್ಲ. ಇನ್ನು ಖಾತೆ ಇರುವ ಶೇ. 75ರಷ್ಟು ಕುಟುಂಬಗಳಿಗೆ ಸ್ವಲ್ಪ ಮಾತ್ರ ಹಣ ಸಿಕ್ಕಿದೆ. ಶೇ. 40ರಷ್ಟು ಜನರಿಗೆ 1,500 ರೂ. ಜಮಾ ಆಗಿದೆ.

ಸಿಗದ ಪೌಷ್ಟಿಕಾಂಶಗಳು
ಸಾಂಕ್ರಾಮಿಕ ಕಾಲದಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದೆ. ಆದರೆ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವ, ಗರ್ಭಣಿ/ಬಾಣಂತಿ ಕುಟುಂಬಗಳಿಗೆ ದೊರಕುವ ಪೂರಕ ಪೋಷಕಾಂಶಗಳು ಶೇ. 38ರಿಂದ ಶೇ. 24ಕ್ಕೆ ಕುಸಿದಿದೆ.

ಮೂಲಸೌಕರ್ಯ ವಂಚಿತ ಕುಟುಂಬಗಳು
– ಸರ್ವೆಯಲ್ಲಿ ಶೇ. 8ರಷ್ಟು ಜನರಿಗೆ ವೈಯಕ್ತಿಕವಾಗಿ ಅಥವಾ ಸಾರ್ವಜನಿಕವಾಗಿ ಯಾವುದೇ ಶೌಚಾಲಯಗಳಿಲ್ಲ. ಬಯಲುಗಳನ್ನೇ ಆಶ್ರಯಿಸಿದ್ದಾರೆ.
-ಶೇ. 33ರಷ್ಟು ಜನರು ಸಾರ್ವಜನಿಕವಾಗಿ ಪೈಪುಗಳಲ್ಲಿ ಬರುವ ನಳ್ಳಿ ನೀರನ್ನೇ ಆಶ್ರಯಿಸಿದ್ದಾರೆ. ಶೇ. 6ರಷ್ಟು ಜನರು ಟ್ಯಾಂಕರ್‌ಗಳಿಂದ ನೀರನ್ನು ಖರೀದಿಸುತ್ತಾರೆ.
-ಶೇ. 91.5ರಷ್ಟು ಜನರಿಗೆ ಸ್ವಂತ ಮನೆಯಿಲ್ಲ
– ಶೇ. 74ರಷ್ಟು ಜನರಿಗೆ ಬೈಕ್‌ಗಳಿಲ್ಲ
– ಶೇ. 44ರಷ್ಟು ಜನರ ಮನೆಗಳಲ್ಲಿ ವಾಷಿಂಗ್‌ ಮೆಷಿನ್‌, ಫ್ರಿಡ್ಜ್ ಮತ್ತು ಮಿಕ್ಸಿಗಳಿಲ್ಲ

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ