ಗುರುವಾರ, ಮೇ 2, 2024
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಹೇಗೆ..?-ಮಹಿಳೆ ಬಡ ಮತ್ತು ಹಸಿದಿರುವಾಗ ಅನ್ನ ಹಾಕಿ, ನಿಮ್ಮ ಅದನ್ನಲ್ಲ; ಪ್ರಜ್ವಲ್ ರೇವಣ್ಣ ವಿರುದ್ಧ ನಟಿ ಪೋಸ್ಟ್ ವೈರಲ್.!-ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!-ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಲಖನೌ ಸೂಪರ್‌ಜೈಂಟ್ಸ್‌ ಸವಾಲಿಗೆ ಸಜ್ಜಾದ ಆರ್‌ಸಿಬಿ

Twitter
Facebook
LinkedIn
WhatsApp
44996461 493101667837391 8618735242527637504 n 3

ಬೆಂಗ​ಳೂ​ರು(ಏ.10): ಮುಂಬೈ ವಿರುದ್ಧದ ದೊಡ್ಡ ಗೆಲು​ವಿ​ನೊಂದಿಗೆ 16ನೇ ಆವೃತ್ತಿ ಐಪಿ​ಎ​ಲ್‌ನಲ್ಲಿ ಶುಭಾರಂಭ ಮಾಡಿದ್ದ ಆರ್‌ಸಿಬಿ, ಕಳೆದ ಪಂದ್ಯ​ದಲ್ಲಿ ಕೋಲ್ಕತಾ ವಿರುದ್ಧ ಹೀನಾ​ಯ​ವಾಗಿ ಸೋತಿದ್ದರಿಂದ ನೆಟ್‌ ರನ್‌ರೇಟ್‌ ಪಾತಳಕ್ಕೆ ಕುಸಿದಿದೆ. ತವರಿಗೆ ವಾಪಸಾಗಿರುವ ತಂಡ ಮುಂದಿನ ಒಂದು ವಾರದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3 ಪಂದ್ಯಗಳನ್ನಾಡಲಿದ್ದು, ಮೂರರಲ್ಲೂ ಗೆಲ್ಲುವ ಮೂಲಕ ಆರಂಭಿಕ ಹಂತದಲ್ಲೇ ಪ್ಲೇ-ಆಫ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿ ನಿಲ್ಲಲು ಎದುರು ನೋಡುತ್ತಿದೆ.

ಸೋಮವಾರ ಆರ್‌ಸಿಬಿಗೆ ಲಖನೌ ಸೂಪರ್‌ ಜೈಂಟ್ಸ್‌ ಸವಾಲು ಎದುರಾಗಲಿದ್ದು, ಮೊದಲ ಪಂದ್ಯದಂತೆಯೇ ದೊಡ್ಡ ಜಯ ಸಾಧಿಸಲು ಎದುರು ನೋಡುತ್ತಿದೆ. ಮತ್ತೊಂದೆಡೆ ಲಖನೌ, 3ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಕಾಯುತ್ತಿದೆ.

 

ಡೆತ್‌ ಬೌಲಿಂಗ್‌ ತಲೆ​ಬಿ​ಸಿ: ಆರ್‌​ಸಿ​ಬಿ​ಯ ಡೆತ್‌ ಬೌಲಿಂಗ್‌ ಸಮಸ್ಯೆ ಈ ಬಾರಿಯೂ ಮುಂದು​ವ​ರಿ​ದಿದ್ದು, ಈ ಸಮ​ಸ್ಯೆಗೆ ಆದಷ್ಟು ಬೇಗ ಪರಿ​ಹಾರ ಕಂಡು​ಕೊ​ಳ್ಳ​ದಿ​ದ್ದರೆ ಗೆಲುವು ಕಷ್ಟ​. ಮುಂಬೈ ವಿರುದ್ಧ ಆರಂಭ​ದಲ್ಲಿ ಮೇಲುಗೈ ಸಾಧಿ​ಸಿ​ದ್ದರೂ ಕೊನೆ 5 ಓವ​ರ್‌​ಗ​ಳಲ್ಲಿ 69 ರನ್‌ ಬಿಟ್ಟು​ಕೊ​ಟ್ಟಿತ್ತು. ಕೆಕೆ​ಆ​ರ್‌ ವಿರುದ್ಧ ಮೊದಲ 11 ಓವರ್‌ಗಳನ್ನು ಅತ್ಯು​ತ್ತ​ಮ​ವಾ​ಗಿಯೇ ನಿಭಾ​ಯಿ​ಸಿದ್ದ ಆರ್‌​ಸಿಬಿ ಬಳಿಕ ಮಂಕಾ​ಗಿತ್ತು. ಕೊನೆ 9 ಓವ​ರಲ್ಲಿ 117 ರನ್‌ ಚಚ್ಚಿ​ಸಿ​ಕೊಂಡಿತ್ತು. ಟಾಪ್ಲಿ, ಹೇಜ​ಲ್‌​ವುಡ್‌ ಅನು​ಪ​ಸ್ಥಿ​ತಿ​ಯಲ್ಲಿ ಮೊಹ​ಮದ್‌ ಸಿರಾಜ್‌, ಹರ್ಷಲ್‌ ಮೇಲೆ ಭಾರೀ ನಿರೀಕ್ಷೆ ಇಡ​ಲಾ​ಗಿ​ದ್ದರೂ ಡೆತ್‌ ಓವ​ರ್‌​ಗ​ಳಲ್ಲಿ ಇಬ್ಬರೂ ವಿಫ​ಲ​ರಾ​ಗು​ತ್ತಿ​ದ್ದಾರೆ. ಮಧ್ಯಮ ವೇಗಿ ವೇಯ್ನ್‌ ಪಾರ್ನೆಲ್‌ ಅವ​ಕಾ​ಶದ ನಿರೀ​ಕ್ಷೆ​ಯ​ಲ್ಲಿದ್ದು, ಬ್ಯಾಟಿಂಗ್‌ ವಿಭಾ​ಗ​ದಲ್ಲೂ ಶಕ್ತಿ ತುಂಬ​ಬ​ಲ್ಲ​ರು.

ಇದೇ ವೇಳೆ ಬ್ಯಾಟಿಂಗ್‌​ನಲ್ಲಿ ವಿರಾಟ್‌ ಕೊಹ್ಲಿ-ಡು ಪ್ಲೆಸಿಸ್ ಹೊರ​ತು​ಪ​ಡಿಸಿ ಇತರೆ ಬ್ಯಾಟ​ರ್‌​ಗ​ಳಿಂದ ರನ್‌ ಹರಿ​ಯು​ತ್ತಿಲ್ಲ. ಕೋಲ್ಕತಾ ವಿರುದ್ಧ ಸ್ಪಿನ್‌ ದಾಳಿ​ಯನ್ನು ಎದು​ರಿ​ಸಲು ತೀವ್ರ ವೈಫಲ್ಯ ಅನು​ಭ​ವಿ​ಸಿದ್ದು, ಅಮಿತ್‌ ಮಿಶ್ರಾ, ಬಿಷ್ಣೋಯ್‌, ಕೃನಾಲ್‌ ಪಾಂಡ್ಯ ಅವ​ರಂತಹ ಸ್ಪಿನ್ನ​ರ್‌​ಗ​ಳನ್ನು ಹೊಂದಿ​ರುವ ಲಖನೌ ವಿರುದ್ಧ ಸಮರ್ಥ ಯೋಜ​ನೆ​ಯೊಂದಿಗೆ ಕಣ​ಕ್ಕಿ​ಳಿ​ಯ​ಬೇ​ಕಿ​ದೆ. ಮ್ಯಾಕ್ಸ್‌​ವೆಲ್‌, ಬ್ರೇಸ್‌​ವೆಲ್‌, ಶಾಬಾಜ್‌ ಅಹ್ಮದ್‌ ಆಲ್ರೌಂಡ್‌ ಪ್ರದ​ರ್ಶನ ನಿರ್ಣಾ​ಯಕ ಎನಿ​ಸಿ​ಕೊ​ಳ್ಳ​ಬ​ಹುದು. ಕಾರ್ತಿಕ್‌ ಕೂಡಾ ನಿರೀಕ್ಷೆ ಉಳಿ​ಸಿ​ಕೊ​ಳ್ಳ​ಬೇ​ಕಿ​ದೆ.

ಮತ್ತೊಂದೆಡೆ ಲಖನೌ ಆಲ್ರೌಂಡ್‌ ಪ್ರದ​ರ್ಶ​ನದ ಮೂಲ​ಕವೇ ಟೂರ್ನಿ​ಯಲ್ಲಿ ಗಮನ ಸೆಳೆ​ಯು​ತ್ತಿದೆ. ಕೈಲ್‌ ಮೇಯರ್ಸ್‌ ಪ್ರಚಂಡ ಲಯದಲ್ಲಿದ್ದು, ಡಿ ಕಾಕ್‌ ಕೂಡಾ ಈ ಪಂದ್ಯ​ದಲ್ಲಿ ಆಡ​ಬ​ಹುದು. ಆದರೆ ಕೆ.ಎ​ಲ್‌.​ರಾ​ಹುಲ್‌, ಮಾರ್ಕಸ್‌ ಸ್ಟೋಯ್ನಿಸ್‌ ಸ್ಥಿರತೆ ಕಾಯ್ದು​ಕೊ​ಳ್ಳ​ಬೇಕಾದ ಅಗ​ತ್ಯ​ವಿದೆ. ಕೆ.ಗೌ​ತಮ್‌, ದೀಪಕ್‌ ಹೂಡಾ ಬ್ಯಾಟಿಂಗ್‌ ಜೊತೆ ಬೌಲಿಂಗ್‌​ನಲ್ಲೂ ತಂಡಕ್ಕೆ ಅಗತ್ಯ ಕೊಡುಗೆ ನೀಡು​ತ್ತಿ​ದ್ದಾ​ರೆ.

ತಂಡದ ಬೌಲಿಂಗ್‌ ವಿಭಾಗ ಬಲಿ​ಷ್ಠ​ವಾ​ಗಿದ್ದು, 8-9 ಆಯ್ಕೆ​ಗ​ಳನ್ನು ಇಟ್ಟು​ಕೊಂಡು ಸಮ​ರ್ಥ​ವಾಗಿ ಬಳ​ಸಿ​ಕೊ​ಳ್ಳು​ತ್ತಿದೆ. 3 ಪಂದ್ಯ​ಗ​ಳಲ್ಲಿ 6 ವಿಕೆಟ್‌ ಪಡೆ​ದಿ​ರುವ ಬಿಷ್ಣೋ​ಯ್‌ಗೆ ಚಿಕ್ಕ ಬೌಂಡರಿಗಳನ್ನು ಹೊಂದಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್‌ ನಿಯಂತ್ರಿಸುವುದು ಸವಾಲಾಗಬಹುದು. ಆದರೂ ವಿಕೆಟ್‌ಗಳಿಗೆ ನಾಯಕ ರಾಹುಲ್‌, ಬಿಷ್ಣೋಯ್‌ ಮೇಲೆಯೇ ಹೆಚ್ಚು ಅವಲಂಬಿತರಾದರೆ ಅಚ್ಚರಿಯಿಲ್ಲ. ಕಳೆದ ಪಂದ್ಯಕ್ಕೆ ಅಲ​ಭ್ಯ​ರಾ​ಗಿದ್ದ ಪ್ರಮುಖ ವೇಗಿ ಮಾರ್ಕ್ ವುಡ್‌ ಈ ಪಂದ್ಯ​ದಲ್ಲಿ ಆಡುವ ನಿರೀಕ್ಷೆ ಇದೆ. ಗಾಯ​ಗೊಂಡಿದ್ದ ಆವೇಶ್‌ ಖಾನ್‌ ಭಾನುವಾರ ನೆಟ್ಸ್‌ನಲ್ಲಿ ಬೌಲ್‌ ಮಾಡಿದ್ದು, ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ.

ಒಟ್ಟು ಮುಖಾಮುಖಿ: 02

ಆರ್‌​ಸಿ​ಬಿ: 02

ಲಖನೌ: 00

ಸಂಭವನೀಯ ಆಟಗಾರರ ಪಟ್ಟಿ

ಆರ್‌​ಸಿ​ಬಿ: ಫಾಫ್ ಡು ಪ್ಲೆಸಿಸ್​(​ನಾ​ಯ​ಕ), ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಿಚೆಲ್ ಬ್ರೇಸ್‌​ವೆಲ್‌, ದಿನೇಶ್ ಕಾರ್ತಿಕ್‌, ಶಾಬಾಜ್‌ ಅಹಮ್ಮದ್, ಡೇವಿಡ್ ವಿಲ್ಲಿ, ಕರ್ಣ್‌ ಶರ್ಮಾ, ಹರ್ಷಲ್‌ ಪಟೇಲ್, ಆಕಾಶ್‌ದೀಪ್, ಮೊಹಮ್ಮದ್ ಸಿರಾಜ್‌.

ಲಖನೌ: ಕೈಲ್‌ ಮೇಯರ್ಸ್‌, ಕೆ ಎಲ್ ರಾಹುಲ್‌(ನಾಯಕ), ಕ್ವಿಂಟನ್ ಡಿ ಕಾಕ್‌, ದೀಪಕ್ ಹೂಡಾ, ಕೃನಾಲ್‌ ಪಾಂಡ್ಯ, ನಿಕೋಲಸ್ ಪೂರನ್‌, ಕೆ.ಗೌ​ತಮ್‌, ಆಯುಷ್ ಬದೋನಿ, ಜಯದೇವ್ ಉನಾ​ದ್ಕ​ತ್‌, ರವಿ ಬಿಷ್ಣೋಯ್‌, ಮಾರ್ಕ್‌ ವುಡ್‌.

ಪಂದ್ಯ: ಸಂ.7.30ಕ್ಕೆ,

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋ​ರ್ಟ್‌

ಬ್ಯಾಟಿಂಗ್‌ ಸ್ನೇಹಿ ಎನಿ​ಸಿ​ಕೊಂಡಿ​ರುವ ಚಿನ್ನ​ಸ್ವಾಮಿ ಕ್ರೀಡಾಂಗ​ಣದ ಪಿಚ್‌ನಲ್ಲಿ ಮತ್ತೊಮ್ಮೆ ರನ್‌ ಮಳೆ ಹರಿ​ಯುವ ನಿರೀಕ್ಷೆ ಇದೆ. ಇಲ್ಲಿ ದೊಡ್ಡ ಮೊತ್ತ ಕಲೆ​ಹಾ​ಕಿ​ದರೂ ರಕ್ಷಿ​ಸಿ​ಕೊ​ಳ್ಳು​ವುದು ಕಷ್ಟ. ಹೀಗಾಗಿ ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ದು​ಕೊ​ಳ್ಳುವ ಸಾಧ್ಯತೆ ಹೆಚ್ಚು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ