‘ಸಣ್ಣ ವ್ಯಾಪಾರಿಗಳು ಹಾಗೂ ಉದ್ಯಮಗಳ ಸಹಯೋಗದೊಂದಿಗೆ ಸಂಪತ್ತಿನ ಹಂಚಿಕೆಯ ವಿಭಿನ್ನ ಮಾದರಿ ನಿರ್ಮಿಸುವ ನಮ್ಮ ಹೊಸ ವಾಣಿಜ್ಯ ತಂತ್ರದೊಂದಿಗೆ ಮೆಟ್ರೋ ಇಂಡಿಯಾದ ಸ್ವಾಧೀನ ಕೂಡ ಹೊಂದಾಣಿಕೆಯಾಗುತ್ತದೆ’ ಎಂದು ಆರ್ ಆರ್ ವಿಎಲ್ ನಿರ್ದೇಶಕಿ ಇಶಾ ಅಂಬಾನಿ ಹೇಳಿದ್ದಾರೆ.
ಮೆಟ್ರೋ ಒಟ್ಟು 34 ರಾಷ್ಟ್ರಗಳಲ್ಲಿ ವಹಿವಾಟು ಹೊಂದಿದ್ದು, 2003ರಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿತ್ತು. ಕಿರಣಿ ಅಂಗಡಿಗಳು, ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಹಾಗೂ ಕೇಟರರ್ಸ್, ಖಾಸಗಿ ಕಂಪನಿಗಳು ಹಾಗೂ ಕೆಲವು ಸಂಸ್ಥೆಗಳು ಮೆಟ್ರೋ ಕ್ಯಾಶ್ ಹಾಗೂ ಕ್ಯಾರಿಯ ಗ್ರಾಹಕರಾಗಿದ್ದಾರೆ.
ಮೆಟ್ರೋ ಕ್ಯಾಶ್ & ಕ್ಯಾರಿ ಬೆಂಗಳೂರಿನಲ್ಲಿ 6, ಹೈದರಾಬಾದ್ ನಲ್ಲಿ 4, ಮುಂಬೈ ಮತ್ತು ನವದೆಹಲಿಯಲ್ಲಿ ತಲಾ 2 ಮಳಿಗೆಗಳನ್ನು ಹೊಂದಿದೆ. ಇನ್ನು ಕೋಲ್ಕತ್ತ, ಜೈಪುರ, ಜಲಂಧರ, ಅಮೃತಸರ, ಅಹಮದಾಬಾದ್, ಸೂರತ್, ಇಂದೋರ್, ಲಖನೌ, ಮೀರತ್, ನಾಸಿಕ್, ಗಾಜಿಯಾಬಾದ್, ತುಮಕೂರು, ವಿಜಯವಾಡ, ವಿಶಾಖಪಟ್ಟಣಂ, ಗುಂಟೂರು, ಹುಬ್ಬಳ್ಳಿಯಲ್ಲಿ ತಲಾ ಒಂದು ಕೇಂದ್ರ ಹೊಂದಿದೆ. ಮೆಟ್ರೋ ಕ್ಯಾಶ್ & ಕ್ಯಾರಿ 3,500 ಉದ್ಯೋಗಿಗಳನ್ನು ಹೊಂದಿದೆ.
ಭಾರತದ ರಿಟೇಲ್ ಮಾರುಕಟ್ಟೆ 60 ಲಕ್ಷ ಕೋಟಿ ರೂ. ಮೌಲ್ಯದಾಗಿದೆ. ಇದರಲ್ಲಿ ಶೇ.60ರಷ್ಟು ಆಹಾರ ಹಾಗೂ ದಿನಸಿ ಸಾಮಗ್ರಿಗಳ ಪಾಲಿದೆ. ರಿಲಯನ್ಸ್ ರಿಟೇಲ್ ಭಾರತದಲ್ಲಿ 7,000 ನಗರಗಳಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಹೊಂದಿದೆ. 217 ಬಿಲಿಯನ್ ಡಾಲರ್ ಮೌಲ್ಯದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ರಿಲಯನ್ಸ್ ರೀಟೇಲ್ (Reliance Retail) ಕಂಪನಿಯ ಮುಖ್ಯಸ್ಥೆಯನ್ನಾಗಿ (Chairperson) ಇಶಾ ಅಂಬಾನಿಯನ್ನು ತಂದೆ ಮುಖೇಶ್ ಅಂಬಾನಿ ಆಗಸ್ಟ್ ನಲ್ಲಿ ನೇಮಕ ಮಾಡಿದ್ದರು.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?